Darshini Delta: ಶ್ರೀರಸ್ತು ಶುಭಮಸ್ತು ಧಾರವಾಹಿ ದೀಪಿಕಾ ಎಂಥ ಸಾಧನೆ ಮಾಡಿದ್ದಾರೆ ಗೊತ್ತಾ?

0 22

Darshini Delta: ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರವಾಹಿ ಒಳ್ಳೆಯ ಜನಪ್ರಿಯತೆ ಜೊತೆಗೆ, ವಿಭಿನ್ನವಾದ ಕಥಾಹಂದರ ಹೊಂದಿರುವ ಧಾರವಾಹಿ. ಪ್ರಭುದ್ಧ ಕಲಾವಿದರನ್ನು ಒಳಗೊಂಡಿರುವ ಈ ಧಾರವಾಹಿ ಟಿಆರ್ಪಿ ರೇಟಿಂಗ್ ನಲ್ಲಿ ಕೂಡ ಟಾಪ್5 ಒಳಗೆ ಬರುತ್ತದೆ. ಚಂದನವನದ ಸ್ಟಾರ್ ನಟಿ ಸುಧಾರಾಣಿ ಅವರು, ಒಂದು ಕಾಲದ ಕಿರುತೆರೆ ಸ್ಟಾರ್ ಅಜಿತ್ ಹಂದೆ ಅವರು, ವೆಂಕಟ್ ರಾವ್, ನೇತ್ರಾ ಜಾಧವ್ ಇವರೆಲ್ಲರು ನಟಿಸುತ್ತಿರುವ ಧಾರವಾಹಿ..

ಈ ಧಾರವಾಹಿಯಲ್ಲಿ ದರ್ಶಿನಿ ಡೆಲ್ಟಾ ನಟಿಸುತ್ತಿದ್ದಾರೆ. ಇವರು ನಟನೆ ಮಾತ್ರವಲ್ಲದೆ ಮಾಡೆಲ್ ಆಗಿ, ಕೋರಿಯಾಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. ದರ್ಶಿನಿ ಡೆಲ್ಟಾ ಅವರು ಕನ್ನಡದಲ್ಲಿ ಇಂಡಿಪೆಂಡೆಂಟ್ ಕೋರಿಯಾಗ್ರಾಫರ್ ಆಗಿದ್ದು, ಇದು ಕನ್ನಡದಲ್ಲಿ ಮೊದಲು ಎಂದು ಹೇಳಿದರೆ ತಪ್ಪಲ್ಲ. ದರ್ಶಿನಿ ತುಂಬಾ ಚಿಕ್ಕ ವಯಸ್ಸಿನಿಂದಲೇ ಡ್ಯಾನ್ಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಭರತನಾಟ್ಯ ಮತ್ತು ಇನ್ನಿತರ ಡ್ಯಾನ್ಸ್ ಶೈಲಿಗಳನ್ನು ಕಲಿತು, ಅದರಲ್ಲಿ ಪರಿಣಿತಿ ಹೊಂದಿದ್ದಾರೆ..

ಜೊತೆಗೆ ಮಾಸ್ಟರ್ಸ್ ಕೂಡ ಮಾಡಿದ್ದಾರೆ. ದರ್ಶಿನಿ ಡೆಲ್ಟಾ ಅವರು ತೆಲುಗು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ, ತೆಲುಗು ಕಿರುತೆರೆಯಲ್ಲಿ ಕೂಡ ನಟಿಸಿದ್ದಾರೆ, ಕನ್ನಡದ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಅಭಿ ಪತ್ನಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದರ್ಶಿನಿ ಅವರು ಪ್ರಭುದೇವ ಅವರಿಗೆ, ಜಾನಿ ಮಾಸ್ಟರ್ ಅವರಿಗೆ ಅಸಿಸ್ಟಂಟ್ ಕೊರಿಯಾಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್, ಅಲ್ಲುಅರ್ಜುನ್, ಜೂನಿಯರ್ ಎನ್ಟಿಆರ್, ಧನುಶ್ ಅವರೊಡನೆ ಕೆಲಸ ಮಾಡಿದ್ದಾರೆ.

ಬುಟ್ಟ ಬೊಮ್ಮ, ರೌಡಿ ಬೇಬಿ ಹಾಡುಗಳಲ್ಲಿ ಕೆಲಸ ಮಾಡಿದ್ದಾರೆ. ಸಾಯಿಪಲ್ಲವಿ, ಅದಿತಿ ಪ್ರಭುದೇವ ಇವರೆಲ್ಲರ ಜೊತೆಗೆ ಕೆಲಸ ಮಾಡಿದ್ದಾರೆ. ಶಿವಣ್ಣ ಅವರು ಕೂಡ ದರ್ಶಿನಿ ಡೆಲ್ಟಾ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಉಪಾಧ್ಯಕ್ಷ ಸಿನಿಮಾದ ಹಾಡಿಗೆ ದರ್ಶಿನಿ ಅವರು ನೃತ್ಯ ನಿರ್ದೇಶನ ಮಾಡಿದ್ದು, ಹಾಡು ಕೂಡ ಸೂಪರ್ ಹಿಟ್ ಆಗಿದೆ.

Leave A Reply

Your email address will not be published.