Drone Prathap: ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ಗಂಭೀರ ಆರೋಪ! ಏನಾಗಿದೆ ಗೊತ್ತಾ?

0 24

Drone Prathap: ಬಿಗ್ ಬಾಸ್ ಕನ್ನಡ ಸೀಸನ್ 10 ಮುಗಿದು ಒಂದು ವಾರ ಕಲೆಯುತ್ತಿದೆ. ಈ ಬಾರಿ ವಿನ್ನರ್ ಅದವರು ಕಾರ್ತಿಕ್ ಮಹೇಶ್ ಹಾಗೂ ರನ್ನರ್ ಅಪ್ ಆದವರು ಡ್ರೋನ್ ಪ್ರತಾಪ್. ಡ್ರೋನ್ ಪ್ರತಾಪ್ ಅವರ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ತಮ್ಮ ವ್ಯಕ್ತಿತ್ವದ ಮೂಲಕವೇ ಎಲ್ಲರ ಮನ ಗೆದ್ದು ರನ್ನರ್ ಅಪ್ ಆಗಿದ್ದಾರೆ ಪ್ರತಾಪ್. ಇದೀಗ ಇವರ ಮೇಲೆ ಒಂದು ಆರೋಪ ಬಂದಿದೆ..

ಬಿಗ್ ಬಾಸ್ ಗೆ ಹೋಗುವುದಕ್ಕಿಂತ ಮೊದಲು ಪ್ರತಾಪ್ ಅವರು ವಿವಾದಗಳಿಗೆ ಸಿಲುಕಿಕೊಂಡಿದ್ದರು. ಬಿಗ್ ಬಾಸ್ ಗೆ ಬಂದಮೇಲೆ ಕೂಡ ಪ್ರತಾಪ್ ಅವರ ಬಗ್ಗೆ ಹೊರಗಡೆ ವಿವಾದಗಳು ನಡೆಯುತ್ತಿದ್ದವು, ಆದರೆ ಒಳಗಿರುವ ಪ್ರತಾಪ್ ಜನರ ಬೆಂಬಲ ಪಡೆದುಕೊಂಡಿದ್ದರು. ಇದೀಗ ಪ್ರತಾಪ್ ಅವರು ಹೊರಬಂದಮೇಲು ಅವರ ಮೇಲೆ ಆರೋಪ ಬರುವುದು ಕಡಿಮೆ ಆಗಿಲ್ಲ, ಇದೀಗ ಮತ್ತೊಬ್ಬರು ಪ್ರತಾಪ್ ಅವರ ಮೇಲೆ ದೂರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಪ್ರತಾಪ್ ಅವರ ಮೇಲೆ ಡಾ. ಪ್ರಯಾಗ್ ಮಾನನಷ್ಟ ಮೊಕದ್ದಮೆ ಹಾಕಿದ್ದರು, ಸಾರಂಗ ಎನ್ನುವ ವ್ಯಕ್ತಿ ಪ್ರತಾಪ್ ಇಂದ ಹಣದ ವಿಚಾರದಲ್ಲಿ ಮೋಸ ಆಗಿದೆ ಎಂದು ಹೇಳಿ, ದೂರು ಕೊಟ್ಟಿದ್ದರು. ಇದೀಗ ಮತ್ತೊಂದು ದೂರು ದಾಖಲಾಗಿದೆ. ಬೆಂಗಳೂರಿನ ರಾಜ ರಾಜೇಶ್ವರಿ ನಗರ ಪೊಲೀಸ್ ಸ್ಟೇಶನ್ ನಲ್ಲಿ ಪ್ರತಾಪ್ ಅವರ ವಿರುದ್ಧ ದೂರು ದಾಖಲಾಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

ಪರಮೇಶ್ ಎನ್ನುವ ವ್ಯಕ್ತಿ ದೂರು ನೀಡಿದ್ದು, ನಾಗರೀಕ ವಿಮಾನಯಾನ ಇಲಾಖೆ ಡ್ರೋನ್ ಗಳನ್ನು ಪ್ರತಾಪ್ ಮಾರಾಟ ಮಾಡುತ್ತಿರುವ ಕುರಿತು ದೂರು ದಾಖಲಾಗಿದೆ. ಲೈಸೆನ್ಸ್ ಪಡೆಯದೇ ಡ್ರೋನ್ ಪ್ರತಾಪ್ ಅವರು ತಮ್ಮ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ನಡೆಸುತ್ತಿದ್ದು, ಇವರು ಡ್ರೋನ್ ಮಾರಾಟ ಮಾಡುತ್ತಿರುವುದು ಅಕ್ರಮ, ಅದರಿಂದ ಜನರಿಗೆ ಮೋಸ ಆಗುತ್ತಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.