Poonam Pandey: 32 ವರ್ಷಕ್ಕೆ ವಿಧಿವಶವಾದ ಬಾಲಿವುಡ್ ನಟಿ ಪೂನಂ ಪಾಂಡೆ! ವಿವಾದಾತ್ಮಕ ನಟಿಗೆ ಆಗಿದ್ದೇನು?

0 18

Poonam Pandey: ಚಿತ್ರರಂಗದಲ್ಲಿ ಈಗ ಬಹಳ ಚಿಕ್ಕವಯಸ್ಸಿಗೆ ಕಲಾವಿದರು ವಿಧಿವಶರಾಗುತ್ತಿರುವುದು ಬಹಳ ಬೇಸರದ ವಿಚಾರ. ಇಂದು ನಟಿ ಪೂನಂ ಪಾಂಡೆ ಕೇವಲ 32 ವರ್ಷಕ್ಕೆ ವಿಧಿವಶವಾಗಿದ್ದರೆ. ಪೂನಂ ಪಾಂಡೆ ಅವರು ವಿವಾದಗಳಿಂದ ಸುದ್ದಿಯಾಗಿದ್ದ ನಟಿ, ಹಾಗೆಯೇ ಇವರು ಹಿಂದಿಯಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ಕನ್ನಡದಲ್ಲಿ ಕೂಡ ನಟಿಸಿದ್ದರು.

ಮರಣ ಹೊಂದಿರುವ ಪೂನಂ ಪಾಂಡೆ ಅವರಿಗೆ ಕೇವಲ 32 ವರ್ಷ ಎನ್ನುವುದು ನೋವಿನ ಸಂಗತಿ. ಪೂನಂ ಪಾಂಡೆ ಅವರು ಗರ್ಭಕೋಶದ ಕ್ಯಾನ್ಸರ್ ಇಂದ ಬಳಲುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಅವರು ವಿಧಿವಶವಾಗಿದ್ದು, ಪೂನಂ ಪಾಂಡೆ ಅವರ ಮ್ಯಾನೇಜರ್ ಹಾಗು ಅವರ ಟೀಮ್ ಈ ವಿಚಾರವನ್ನು ಇಂದು ಬೆಳಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ನಮಗೆಲ್ಲ ಬಹಳ ಕಷ್ಟಕರವಾಗಿತ್ತು, ಗರ್ಭಕೋಶದ ಕ್ಯಾನ್ಸರ್ ಇಂದ ಬಳಲುತ್ತಿದ್ದ ಪೂನಂ ಪಾಂಡೆ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಲು ಬಹಳ ನೋವಾಗುತ್ತಿದೆ. ಈ ಸಮಯದಲ್ಲಿ ನಮಗೆ ಪ್ರೈವೆಸಿ ಬೇಕು ಎಂದು ವಿನಂತಿಸುತ್ತೇವೆ. ಅವರೊಂದಿಗೆ ಒಂದೊಂದು ಕ್ಷಣವನ್ನು ಮರೆಯಲು ಸಾಧ್ಯವಿಲ್ಲ.. ಎಂದು ತಿಳಿಸಿದ್ದಸ್ರೇ ಪೂನಂ ಪಾಂಡೆ ಅವರ ಟೀಮ್.

Leave A Reply

Your email address will not be published.