Puneeth Rajkumar: ಅಪ್ಪು ಹೆಸರಲ್ಲಿ ಮಹತ್ವದ ಕಾರ್ಯ ಮಾಡಲು ನಿರ್ಧರಿಸಿದ ಸಿಎಂ, ಅಭಿಮಾನಿಗಳು ಫುಲ್ ಖುಷ್

Written by Pooja Siddaraj

Published on:

Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಗಲಿ ಸುಮಾರು 2 ವರ್ಷ ಆಗುತ್ತಿದೆ, ಆದರೆ ಇಂದಿಗೂ ಕೂಡ ಅಪ್ಪು ಅವರನ್ನು ಯಾವ ಅಭಿಮಾನಿ ಕೂಡ ಮರೆತಿಲ್ಲ. ಅಪ್ಪು ಅವರಂದ್ರೆ ಎಲ್ಲರಿಗು ಅಷ್ಟು ಪ್ರೀತಿ, ಎಲ್ಲರಿಗೂ ಅಷ್ಟು ಹತ್ತಿರವಾಗಿದ್ದಾರೆ. ಯಾವುದೇ ಕಾರ್ಯಕ್ರಮ ಆಗಲಿ ಅಪ್ಪು ಅವರನ್ನು ನೆನೆಯದೆ ನಡೆಯುವುದಿಲ್ಲ ಎಂದ್ ಹೇಳಬಹುದು. ಇದೀಗ ಅಪ್ಪು ಅವರ ಹೆಸರಿನಲ್ಲಿ ಸರ್ಕಾರ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದು ನಿರ್ಧಾರ ಮಾಡಿದೆ..

ಇಡೀ ದೊಡ್ಮನೆ ಕುಟುಂಬ ಜನರಿಗೆ ತುಂಬಾ ಹತ್ತಿರವಾಗಿದೆ, ಅಣ್ಣಾವ್ರು, ಪಾರ್ವತಮ್ಮ ಅವರು, ಶಿವಣ್ಣ ಅವರು ರಾಘಣ್ಣ ಅವರು ಮತ್ತು ಅಪ್ಪು ಅವರು ಇವರೆಲ್ಲರೂ ಕೂಡ ಸರಳತೆಗೆ ಮತ್ತೊಂದು ಹೆಸರಾಗಿ ಬದುಕಿ ಜನರಿಗೆ ಮಾದರಿ ಆಗಿರುವವರು. ಇವರೆಲ್ಲರು ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುತ್ತಾ, ಒಳ್ಳೆಯತನ ಸರಳತೆ ಇವುಗಳನ್ನು ಪಾಲಿಸುವ ಹಾಗೆ ಜನರಿಗೆ ಪ್ರೇರಣೆ ನೀಡಿದವರು. ಅಪ್ಪು ಅವರ ಬಗ್ಗೆ ಅಂತೂ ಎಷ್ಟು ಹೇಳಿದರೂ ಕಡಿಮೆಯೇ.

ಅಪ್ಪು ಅವರು ಇದ್ದಾಗ ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎನ್ನುವುದು ಲೆಕ್ಕಕ್ಕಿಲ್ಲ, ಅಪ್ಪು ಅವರು ತಾವು ಸಹಾಯ ಮಾಡಿದ್ದನ್ನು ಎಲ್ಲಿಯು ಹೇಳುತ್ತಿರಲಿಲ್ಲ, ಜನರಿಗೆ ಹೇಳುವುದು ಬೇಡ ಎನ್ನುತ್ತಿದ್ದರು. ಆದರೆ ಅವರು ಹೋದ ಬಳಿಕ ಸಾಕಷ್ಟು ಜನ ಅಪ್ಪು ಅವರಿಂದ ನಮಗೆ ಸಹಾಯ ಆಗಿತ್ತು ಎಂದು ತಾವೇ ಬಂದು ಹೇಳುತ್ತಿದ್ದರು. ಆಗಲೇ ಅಪ್ಪು ಅವರು ಎಂಥಾ ದೇವತಾ ಮನುಷ್ಯ ಎಂದು ಜನರಿಗು ಗೊತ್ತಾಗಿದ್ದು. ಹಲವು ಕಾರಣಗಳಿಂದ ಅಪ್ಪು ಅವರು ಜನರ ಮನಸ್ಸಿಗೆ ಬಹಳ ಹತ್ತಿರವಾಗಿದ್ದಾರೆ.

ಇಂಥ ಅಪ್ಪು ಅವರು ಹೋಗುವಾಗಲು ಜನರಿಗೆ ನೇತ್ರದಾನ ಮಾಡುವ ಸಂದೇಶ ಕೊಟ್ಟು ಹೋದರು, 2021 ರಿಂದ ಈಗಿನವರೆಗೂ ನಾರಾಯಣ ಹೃದಯಾಲದಲ್ಲಿ ಸುಮಾರು 1.40 ಲಕ್ಷ ಜನರು ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹಾಗಾಗಿ ಸರ್ಕಾರವು ಅಪ್ಪು ಅವರ ಹೆಸರಿನಲ್ಲಿ ಐ ಡೊನೇಷನ್ ಬ್ಯಾಂಕ್ ತೆರೆಯಬೇಕು ಎಂದು ನಿರ್ಧಾರ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ.

ಸಿಎಂ ಸಿದ್ದರಾಮಯ್ಯ ಅವರು ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಅಭಿಮಾನಿಗಳು ತುಂಬಾ ಸಂತೋಷ ಪಟ್ಟಿದ್ದಾರೆ. ಅಪ್ಪು ಅವರ ಹೆಸರಿನಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳು ನಡೆಯಲಿ ಎಂದು ಆಶಿಸುತ್ತಿದ್ದಾರೆ ಅಭಿಮಾನಿಗಳು.

Leave a Comment