Sreeleela: ಬೆಂಗಳೂರಿನ ಹುಡುಗಿ ನಟಿ ಶ್ರೀಲೀಲಾ ಇಂದು ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ನಟಿ. ತೆಲುಗಿನ ಎಲ್ಲಾ ಸ್ಟಾರ್ ಹೀರೋ ಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಶ್ರೀಲೀಲಾ ಅವರಿಗೆ ಸಿಗುತ್ತಿದೆ. ಕೈಯಲ್ಲಿ 8 ರಿಂದ 10 ಸಿನಿಮಾಗಳನ್ನು ಹೊಂದಿರುವ ಶ್ರೀಲೀಲಾ ಬ್ಯುಸಿ ಆಗಿದ್ದಾರೆ. ಇದೀಗ ಇವರು ಲಿಪ್ ಲಾಕ್ ಬಗ್ಗೆ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇವರೊಡನೆ ಮಾತ್ರ ಲಿಪ್ ಲಾಕ್ ಮಾಡುತ್ತೇನೆ ಎಂದಿದ್ದಾರೆ ಶ್ರೀಲೀಲಾ.
ಈಗಿನ ಸಿನಿಮಾಗಳಲ್ಲಿ ಲಿಪ್ ಲಾಕ್ ಎನ್ನುವುದು ಬಹಳ ಕಾಮನ್ ಎನ್ನುವ ಹಾಗೆ ಆಗಿದೆ. ಮೊದಲೆಲ್ಲಾ ಬಾಲಿವುಡ್ ಗೆ ಮಾತ್ರ ಸೀಮಿತವಾಗಿದ್ದ ಲಿಪ್ ಲಾಕ್ ಸೀನ್ ಗಳು ಈಗ ಸೌತ್ ಗು ಕಾಲಿಟ್ಟಿದೆ. ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ವಿಜಯ್ ದೇವರಕೊಂಡ ಅವರೊಡನೆ, ಹಿಂದಿಯಲ್ಲಿ ರಣಬೀರ್ ಕಪೂರ್ ಅವರೊಡನೆ ಲಿಪ್ ಲಾಕ್ ಮಾಡಿದ್ದಾರೆ. ರಣಬೀರ್ ಕಪೂರ್ ಅವರೊಡನೆ ಒಂದೇ ಹಾಡಿನಲ್ಲಿ ಐದಾರು ಬಾರಿ ಲಿಪ್ ಲಾಕ್ ಮಾಡಿದ್ದಾರೆ.
ಇನ್ನು ಖ್ಯಾತ ನಟಿ ತಮನ್ನಾ ಅವರು ಕೂಡ ಇತ್ತೀಚಿನ ವೆಬ್ ಸೀರೀಸ್ ನಲ್ಲಿ ನಟ ವಿಜಯ್ ವರ್ಮಾ ಅವರೊಡನೆ ಲಿಪ್ ಲಾಕ್ ಮಾಡಿದ್ದಾರೆ. ದಕ್ಷಿಣದ ಇನ್ನು ಕೆಲವು ನಟಿಯರು ಲಿಪ್ ಲಾಕ್ ದೃಶ್ಯಗಳಿಗೆ ಓಕೆ ಹೇಳುತ್ತಿದ್ದಾರೆ. ಶ್ರೀಲೀಲಾ ಅವರು ಕೂಡ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸುತ್ತಾರ ಎನ್ನುವ ಪ್ರಶ್ನೆಯೊಂದನ್ನು ಪ್ರೆಸ್ ಮೀಟ್ ನಲ್ಲಿ ಕೇಳಲಾಯಿತು. ಶ್ರೀಲೀಲಾ ಅವರು ತೆಲುಗಿನ ಹಿರಿಯ ನಟ ಬಾಲಯ್ಯ ಅವರೊಡನೆ ನಟಿಸಿದ ಭಗವಂತ ಕೇಸರಿ ಸಿನಿಮಾ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ.
ಸಿನಿಮಾ ಸಕ್ಸಸ್ ಮೀಟ್ ನಲ್ಲಿ ಯಾವ ನಟನ ಜೊತೆಗೆ ಲಿಪ್ ಲಾಕ್ ಮಾಡಲು ಒಪ್ಪಿಕೊಳ್ಳುತ್ತೀರಾ ಎಂದು ಕೇಳಲಾಯಿತು, ಅದಕ್ಕೆ ಉತ್ತರಿಸಿದ ಶ್ರೀಲೀಲಾ ಅವರು, ನಾನು ಯಾವ ನಟನ ಜೊತೆಗೂ ಲಿಪ್ ಲಾಕ್ ಮಾಡಲು ಒಪ್ಪುವುದಿಲ್ಲ, ಹಾಗೇನಾದರೂ ಲಿಪ್ ಲಾಕ್ ಮಾಡಬೇಕಾದ ಸನ್ನಿವೇಶ ಬಂದರೆ ಅದು ನನ್ನ ಭಾವಿ ಪತಿ ಜೊತೆ ಮಾತ್ರ.. ಎಂದು ಹೇಳಿದ್ದಾರೆ ಶ್ರೀಲೀಲಾ. ಇದೀಗ ಶ್ರೀಲೀಲಾ ಅವರು ಕೊಟ್ಟಿರುವ ಈ ಉತ್ತರ ವೈರಲ್ ಆಗಿದ್ದು, ಇದ್ದರೆ ಈ ಹುಡುಗಿಯ ಇರಬೇಕು ಎನ್ನುತ್ತಿದ್ದಾರೆ ಸಿನಿಪ್ರಿಯರು..
ಹಾಗೆಯೇ ಸಿನಿಮಾದಲ್ಲಿ ಐಟಂ ಸಾಂಗ್ ಮಾಡುವ ಅವಕಾಶ ಬಂದರೆ ಮಾಡುತ್ತೀರಾ ಎನ್ನುವ ಪ್ರಶ್ನೆ ಕೂಡ ಎದುರಾಗಿದ್ದು, ಅದಕ್ಕೆ ಉತ್ತರಿಸಿರುವ ಶ್ರೀಲೀಲಾ ಅವರು, ಈಗ ನಾನು ಭಗವಂತ ಕೇಸರಿ ಸಿನಿಮಾದಲ್ಲಿನ ವಿಜಿ ಪಾಪ ಅಂಥ ಪಾತ್ರದಲ್ಲಿ ನಟಿಸುತ್ತಿದ್ದೇನೆ, ಈ ಥರದ ಪಾತ್ರಗಳನ್ನ ಮಾಡುವಾಗ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದರೆ ಜನರಿಗೆ ಇಷ್ಟ ಆಗೋದಿಲ್ಲ, ಅದಕ್ಕೆಲ್ಲ ಇನ್ನು ತುಂಬಾ ಟೈಮ್ ಇದೆ ನೋಡೋಣಾ.. ಎಂದು ಹೇಳಿದ್ದಾರೆ ನಟಿ ಶ್ರೀಲೀಲಾ.