Gowri Shruti: ನಟಿ ಶ್ರುತಿ ಮಗಳು ಗೌರಿ ಟೆಂಪಲ್ ರನ್, ಸುಂದರವಾಗಿದ್ದೀರಾ ಬೇಗ ಹೀರೋಯಿನ್ ಆಗಿ ಎಂದ ನೆಟ್ಟಿಗರು!

0 42

Gowri Shruti: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವವರು ನಟಿ ಶ್ರುತಿ..3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ನಟಿ ಶ್ರುತಿ ಅವರು ಕನ್ನಡ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಕಣ್ಣೀರಿನ ರಾಣಿ ಎಂದೇ ಇವರು ಖ್ಯಾತಿಯಾಗಿದ್ದರು. ನಟಿ ಶ್ರುತಿ ಅವರು ನಟಿಸಿದ್ದಾರೆ ಎಂದರೆ ಆ ಸಿನಿಮಗಳನ್ನು ನೋಡಲು ತಪ್ಪದೆ ಎಲ್ಲರೂ ಚಿತ್ರಮಂದಿರಕ್ಕೆ ಬರುತ್ತಿದ್ದರು. ಆ ಕಾಲವನ್ನು ಯಾರು ಮರೆಯಲು ಸಾಧ್ಯವಿಲ್ಲ. ಪ್ರಸ್ತುತ ನಟಿ ಶ್ರುತಿ ಅವರು ಮೊದಲಿನ ಹಾಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಒಳ್ಳೆಯ ಪಾತ್ರಗಳಲ್ಲಿ ಅಭಿನಯ ಮಾಡುತ್ತಿದ್ದಾರೆ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ ನಟಿ ಶ್ರುತಿ.

ನಟಿ ಶ್ರುತಿ ಅವರದ್ದು ರಂಗಭೂಮಿಯ ಕುಟುಂಬ. ಶ್ರುತಿ ಅವರ ತಂದೆ ತಾಯಿ ಆಗಿನ ಕಾಲದಿಂದಲೂ ಅನೇಕ ನಾಟಕಗಳಲ್ಲಿ ಅಭಿನಯ ಮಾಡಿದವರು. ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯ ಮಾಡಿ, ಮಕ್ಕಳು ದೊಡ್ಡ ಸಾಧನೆ ಮಾಡಬೇಕು ಎನ್ನುವುದು ಆ ತಂದೆ ತಾಯಿಯ ದೊಡ್ಡ ಆಸೆ ಆಗಿತ್ತು. ಆದರೆ ಅದು ಸುಲಭ ಆಗಿರಲಿಲ್ಲ. ಶ್ರುತಿ ಅವರಿಗೆ ಆರಂಭದ ದಿನಗಳಲ್ಲಿ ಅವಕಾಶ ಸಿಗುವುದು ಸ್ವಲ್ಪ ಕಷ್ಟವೇ ಆಗಿತ್ತು. ಮೊದಲ ಬಾರಿಗೆ ಶಿವಣ್ಣ ಅವರಿಗೆ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದರು ನಟಿ ಶ್ರುತಿ. ನಂತರ ಶ್ರುತಿ ಎನ್ನುವ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.

ಅದಾದ ಬಳಿಕ ಅನೇಕ ಪಾತ್ರಗಳು ಶ್ರುತಿ ಅವರನ್ನು ಹುಡುಕಿಕೊಂಡು ಬರಲು ಶುರುವಾದವು. ಶ್ರುತಿ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಮಹಿಳಾ ಪ್ರಧಾನ ಪಾತ್ರಗಳಲ್ಲಿ, ಜನರ ಕರುಳು ಚುರ್ ಎನ್ನುವಂಥ ಭಾವನಾತ್ಮಕ ಪಾತ್ರಗಳಲ್ಲೇ ಶ್ರುತಿ ಅವರು ಹೆಚ್ಚಾಗಿ ನಟಿಸಿದರು, ವೀಕ್ಷಕರ ಕಣ್ಣಲ್ಲಿ ನೀರು ಬರುವಂತೆ ಇರುತ್ತಿತ್ತು ಇವರ ಅಭಿನಯ. ಶ್ರುತಿ ಅವರ ಸಿನಿಮಾಗಳು ಅಂದ್ರೆ ವೀಕ್ಷಕರು ಥಿಯೇಟರ್ ನಲ್ಲಿ ನೋಡಲು ಕಾದಿರುತ್ತಿದ್ದರು. ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಶ್ರುತಿ ನಿರ್ದೇಶಕ ಎಸ್. ಮಹೇಂದರ್ ಅವರ ಜೊತೆ ಮದುವೆ ಬೇಗ ಮುರಿದು ಬಿದ್ದಿತು, ಆದರೆ ಶ್ರುತಿ ಅವರ ಜೊತೆಗೆ ಇಂದು ಅವರ ಮಗಳಿದ್ದಾಳೆ.

ಶ್ರುತಿ ಅವರ ಮಗಳು ಗೌರಿ ಅಮ್ಮನಿಗೆ ಎಲ್ಲಾ ವಿಚಾರದಲ್ಲೂ ಸಾಥ್ ನೀಡುತ್ತಾಳೆ. ಮಗಳನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದಾರೆ ನಟಿ ಶ್ರುತಿ. ತಾಯಿಯ ಹಾಗೆ ಗೌರಿ ಸಹ ಒಳ್ಳೆಯ ಪ್ರತಿಭೆ. ನೋಡಲು ಬಹಳ ಸುಂದರವಾಗಿರುವ ಗೌರಿ, ಬಹಳ ಚೆನ್ನಾಗಿ ಹಾಡುತ್ತಾಳೆ. ತಾನು ಹಾಡಿರುವ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಾರೆ ಗೌರಿ, ಗೌರಿ ಹಾಡಿರುವುದನ್ನು ನೋಡಿ ಸಾಕಷ್ಟು ಜನ ಅಭಿಮಾನಿಗಳಾಗಿದ್ದು, ಚಿತ್ರರಂಗಕ್ಕೆ ಆದಷ್ಟು ಬೇಗ ಎಂಟ್ರಿ ಕೊಡಿ ಎನ್ನುತ್ತಿದ್ದಾರೆ. ಚಂದನವನಕ್ಕೆ ಗೌರಿ ನಾಯಕಿಯಾಗಿ ಎಂಟ್ರಿ ಕೊಡುತ್ತಾರೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತವೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಗೌರಿ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಇವರು ದೇವಸ್ಥಾನಕ್ಕೆ ಹೋಗಿರುವ ಫೋಟೋಗಳನ್ನು ಶೇರ್ ಮಾಡಿದ್ದು ಸೀರೆ ಧರಿಸಿ ಶ್ರುತಿ ಅವರ ಮಗಳು ಕಂಗೊಳಿಸಿದ್ದಾರೆ. ಇವರ ಫೋಟೋಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದು, ಬೇಗ ಚಿತ್ರರಂಗಕ್ಕೆ ಬನ್ನಿ ಎನ್ನುತ್ತಿದ್ದಾರೆ. ತಾಯಿಯ ಹಾಗೆ ಶ್ರುತಿ ಅವರ ಮಗಳು ಕೂಡ ಹೀರೋಯಿನ್ ಆಗ್ತಾರಾ ಎಂದು ಕಾದು ನೋಡಬೇಕಿದೆ..

Leave A Reply

Your email address will not be published.