Chanakya Neeti: ಈ ಗುಣಗಳು ನಿಮ್ಮ ಪತ್ನಿಯಲ್ಲಿದ್ದರೆ ಆಕೆ ಪರಿಪೂರ್ಣಳು ಎಂದು ಅರ್ಥ!

0 13

Chanakya Neeti: ಆಚಾರ್ಯ ಚಾಣಕ್ಯರು ವರ್ಷಗಳ ಹಿಂದೆ ಬರೆದಿರುವ ಚಾಣಕ್ಯ ನೀತಿ ಪುಸ್ತಕದಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಆ ಕೆಲವು ವಿಚಾರಗಳನ್ನ ನಾವು ಪಾಲಿಸುತ್ತಾ ಬಂದರೆ ಸಾಕು, ನಮ್ಮ ಬದುಕಿಗೆ ಯಶಸ್ಸು ಸಿಗುವುದು ಖಂಡಿತ. ಚಾಣಕ್ಯ ನೀತಿಯಲ್ಲಿ ಒಬ್ಬ ಮನುಷ್ಯನ ಬದುಕು ಹೇಗಿರಬೇಕು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ, ಹಾಗೆಯೇ ದಾಂಪತ್ಯ ಜೀವನ ಹೇಗಿರಬೇಕು ಎನ್ನುವುನ್ನು ಹೇಳಿಕೊಟ್ಟಿದ್ದಾರೆ. ಜೊತೆಗೆ ಪರಿಪೂರ್ಣ ಪತ್ನಿ ಆದವಳ ಗುಣಗಳು ಯಾವುವು ಎಂದು ಕೂಡ ತಿಳಿಸಿದ್ದಾರೆ. ಒಂದು ವೇಳೆ ನಿಮ್ಮ ಹೆಂಡತಿಯಲ್ಲಿ ಈ ಎಲ್ಲಾ ಗುಣಗಳು ಇದ್ದರೆ ಆಕೆ ಪರಿಪೂರ್ಣಳು ಎಂದು ನೀವು ಪರಿಗಣಿಸಬಹುದು..

ಶಾಂತ ಸ್ವಭಾವ :- ಒಬ್ಬ ಹೆಣ್ಣು ಪರಿಪೂರ್ಣ ಪತ್ನಿ ಆಗಬೇಕು ಎಂದರೆ ಆಕೆಯಲ್ಲಿ ಇರಬೇಕಾದ ಮೊದಲ ಮಹತ್ವದ ಗುಣ ಶಾಂತ ಸ್ವಭಾವ, ಸಣ್ಣ ಪುಟ್ಟ ವಿಷಯಗಳಿಗೆ ಕೋಪ ಮಾಡಿಕೊಳ್ಳದೆ, ಶಾಂತವಾಗಿದ್ದು ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಗುಣವಿರಬೇಕು. ಆಗ ಆಕೆ ಪರಿಪೂರ್ಣ ಪತ್ನಿ ಆಗುತ್ತಾಳೆ.

ಸುಸಂಸ್ಕೃತಿ ಹೊಂದಿರಬೇಕು :-.ಪರಿಪೂರ್ಣ ಪತ್ನಿಯ ಎರಡನೇ ಗುಣ ಸುಸಂಸ್ಕೃತಿ. ಧರ್ಮದ ಸನ್ಮಾರ್ಗದಲ್ಲಿ ನಡೆದು, ಪತ್ನಿಯ ಜವಾಬ್ದಾರಿಗಳನ್ನು ಪಾಲಿಸಬೇಕು. ಕುಟುಂಬದ ಮೌಲ್ಯಗಳನ್ನು ಆಕೆ ಕಾಪಾಡಬೇಕು..ಮನೆಗೆ ಹೊಂದಿಕೊಂಡು ಹೋಗುವವಳು ಪರಿಪೂರ್ಣ ಪತ್ನಿ ಆಗುತ್ತಾಳೆ.

ಮಾತು ಮಧುರವಾಗಿರಬೇಕು :- ಪರಿಪೂರ್ಣ ಪತ್ನಿಯಾಗಲು ಬೇಕಿರುವ ಮೂರನೇ ಗುಣ. ಮುದ್ದಾಗಿ ಎಲ್ಲರೊಡನೆ ಮಾತನಾಡುವ ಮಹಿಳೆ ಯಾವುದೇ ಜಗಳವನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ. ಮಾತು ಚೆನ್ನಾಗಿದ್ದರೆ ವಿವಾದಗಳು ಹತ್ತಿರ ಸುಳಿಯುವುದಿಲ್ಲ. ಹಾಗಾಗಿ ಇದು ಪರಿಪೂರ್ಣ ಪತ್ನಿಯಲ್ಲಿ ಇರಬೇಕಾದ ಮತ್ತೊಂದು ಪ್ರಮುಖ ಗುಣ ಆಗಿದೆ.

ಹಣ ಉಳಿಸಬೇಕು :- ಪರಿಪೂರ್ಣ ಪತ್ನಿ ಆಗುವವಳು ಗಂಡ ಸಂಪಾದನೆ ಮಾಡಿದ ಹಣವನ್ನು ಉಳಿಸುವ ಗುಣ ಹೊಂದಿರುತ್ತಾಳೆ. ಆ ಹಣ ಕಷ್ಟದ ಸಂದರ್ಭಕ್ಕೆ ಬಳಕೆಗೆ ಬರುತ್ತದೆ ಎಂದು ಆಕೆಗೆ ಗೊತ್ತಿರುತ್ತದೆ. ಹಣ ಉಳಿತಾಯ ಮಾಡುವುದು ಪರಿಪೂರ್ಣ ಪತ್ನಿಯಲ್ಲಿ ಇರಬೇಕಾದ ನಾಲ್ಕನೇ ಗುಣ ಆಗಿದೆ.

ಆಸೆಗಳು ಹಿತಮಿತವಾಗಿರಬೇಕು :- ಅತಿಯಾಸೆ ಹೊಂದಿರುವ ಹೆಣ್ಣು ಗಂಡನ ಮನೆಯವರ ಜೊತೆಗೆ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ. ಹೆಣ್ಣಿಗೆ ಯಾವಾಗಲೂ ಅವಶ್ಯಕತೆಯನ್ನು ಮೀರಿ ಆಸೆ ಇರಬಾರದು. ಅಂಥ ಮಹಿಳೆ ಪರಿಪೂರ್ಣ ಹೆಂಡತಿ ಆಗುತ್ತಾಳೆ.

Leave A Reply

Your email address will not be published.