Sushmitha Jaggappa: ಹಸೆಮಣೆ ಏರಿದ ಸುಶ್ಮಿತಾ ಜಗ್ಗಪ್ಪ, ಫೋಟೋಸ್ ವೈರಲ್

0 30

Sushmitha Jaggappa: ಕಿರುತೆರೆ ಮತ್ತು ಚಿತ್ರರಂಗ ಎರಡರಲ್ಲೂ ಈಗ ಮದುವೆಯ ಸಂಭ್ರಮಗಳೇ ಜೋರಾಗಿದೆ ಎಂದರೆ ತಪ್ಪಲ್ಲ. ಸೆಲೆಬ್ರಿಟಿಗಳು ಹಸೆಮಣೆ ಏರುತ್ತಿದ್ದಾರೆ. ಇದೇ ಸಾಲಿಗೆ ಈಗ ಮತ್ತೊಂದು ಜೋಡಿ ಸೇರಿದೆ. ಕಿರುತೆರೆಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಸುಶ್ಮಿತಾ ಬಿ.ಆರ್ ಮತ್ತು ಜಗ್ಗಪ್ಪ ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಸುಶ್ಮಿತಾ ಹಾಗೂ ಜಗ್ಗಪ್ಪ ಇವರಿಬ್ಬರು ಕೂಡ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಧಾರವಾಹಿ ಮೂಲಕ ಕಿರುತೆರೆಗೆ ಬಂದರು. ಇವರಿಬ್ಬರ ಕಾಮಿಡಿ ಟೈಮಿಂಗ್ ಮತ್ತು ಅಭಿನಯ ಈ ಎರಡರಿಂದಲು ಕೂಡ ಜನಪ್ರಿಯತೆ ಪಡೆದು ಹೆಚ್ಚು ಅವಕಾಶಗಳನ್ನು ಸಹ ಪಡೆದುಕೊಂಡರು. ಈ ಶೋ ತಂದುಕೊಟ್ಟ ಜನಪ್ರಿಯತೆ ಇಂದ ಇನ್ನಷ್ಟು ಶೋಗಳು ಕೂಡ ಇವರಿಬ್ಬರಿಗೆ ಸಿಕ್ಕಿತು ಎಂದರೆ ತಪ್ಪಲ್ಲ. ಸುಶ್ಮಿತಾ ಅವರು ಧಾರವಾಹಿಯಲ್ಲಿ ಸಹ ನಟಿಸುವುದಕ್ಕೆ ಶುರು ಮಾಡಿದರು.

ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಮ್ಯಾಗಿ ಪಾತ್ರ, ನಮ್ಮ ಲಚ್ಚಿ ಧಾರಾವಾಹಿಯಲ್ಲಿ ವಿಲ್ಲನ್ ಪಾತ್ರ ಹೀಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಅವಕಾಶ ಸುಶ್ಮಿತಾ ಅವರಿಗೆ ಸಿಕ್ಕಿತು. ಇನ್ನು ಜಗ್ಗಪ್ಪ ಅವರು ಕೂಡ ರಿಯಾಲಿಟಿ ಶೋಗಳಲ್ಲಿ ಬಿಡುವಿಲ್ಲದೆ ಹಾಗೆ ಅವಕಾಶಗಳನ್ನು ಪಡೆದಿದ್ದಾರೆ. ಜೀಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ಶೋ ನ ವಿನ್ನರ್ ಆಗಿದ್ದಾರೆ ಜಗ್ಗಪ್ಪ. ಹೀಗೆ ನಟನೆಯಲ್ಲಿ ಹೆಸರು ಗಳಿಸಿದೆ ಈ ಜೋಡಿ..

ಇವರಿಬ್ಬರು ಒಂದೇ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವಾಗಲೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿರುವ ಈ ಜೋಡಿ ಇದೀಗ ಹಸೆಮಣೆ ಏರಿದ್ದಾರೆ. ಕಳೆದ ವಾರ ಶುಕ್ರವಾರ ಮತ್ತು ಶನಿವಾರ ಇವರಿಬ್ಬರ ಮೆಹೆಂದಿ ಶಾಸ್ತ್ರ ಮತ್ತು ಇನ್ನಿತರ ಶಾಸ್ತ್ರಗಳು ನಡೆದಿವೆ.

ನವೆಂಬರ್ 19 ರಂದು ಈ ಜೋಡಿಯ ಮದುವೆ ನಡೆದಿದೆ. ಸುಶ್ಮಿತಾ ಹಾಗೂ ಜಗ್ಗಪ್ಪ ಮದುವೆ ಕಳೆದ ಭಾನುವಾರ ಇವರಿಬ್ಬರ ಮದುವೆ ನಡೆದಿದ್ದು, ಸ್ನೇಹಿತರು ಕಿರುತೆರೆಯ ಗಣ್ಯರು ಈ ಜೋಡಿಯ ಮದುವೆಗೆ ಬಂದು ಶುಭಕೋರಿದ್ದಾರೆ. ನಟಿ ಸುಧಾರಾಣಿ, ನಟಿ ಲಾವಣ್ಯ, ಶಶಿ ಹೆಗಡೆ, ನಟಿ ತಾರಾ ಸೇರಿದಂತೆ ಎಲ್ಲಾ ಗಣ್ಯರು ಈ ಜೋಡಿಯ ಮದುವೆಗೆ ಬಂದಿದ್ದು, ಇವರಿಬ್ಬರ ಮದುವೆ ಫೋಟೋಸ್ ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave A Reply

Your email address will not be published.