Gowthami Gowda: ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿ ಭಾಗ್ಯಲಕ್ಷ್ಮಿ, ಈ ಧಾರವಾಹಿ ಜನರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಈ ಧಾರವಾಹಿಯಲ್ಲಿ ಒಂದು ರೀತಿ ಶ್ರೇಷ್ಠ ಪಾತ್ರ ವಿಲ್ಲನ್ ರೀತಿ ಇದೆ ಎಂದರೆ ತಪ್ಪಲ್ಲ. ಶ್ರೇಷ್ಟ ಪಾತ್ರದಲ್ಲಿ ಮೊದಲಿಗೆ ನಟಿಸುತ್ತಿದ್ದವರು ಗೌತಮಿ, ಇವರನ್ನು ಜನರು ಕೂಡ ಮೆಚ್ಚಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣದಿಂದ ಗೌತಮಿ ಅವರು ಭಾಗ್ಯಲಕ್ಷ್ಮಿ ಧಾರವಾಹಿಯಿಂದ ಹೊರಬಂದಿದ್ದರು.
ಗೌತಮಿ ಅವರು ಮಗುವಿನ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದ ಕಾರಣ ಧಾರವಾಹಿ ಇಂದ ಹೊರಬಂದಿರುವುದಾಗಿ ತಿಳಿಸಿದ್ದರು. ಇತ್ತೀಚೆಗೆ ಈಗ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ, ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಗೌತಮಿ ಅವರು ಹಂಚಿಕೊಂಡ ಗುಡ್ ನ್ಯೂಸ್ ಗೆ ಅವರಿಗೆ ಶುಭಾಶಯ ತಿಳಿಸಿ, ತಾಯ್ತನವನ್ನು ಎಂಜಾಯ್ ಮಾಡಿ ಎಂದು ಹೇಳಿದ್ದರು.
ಇದೀಗ ಗೌತಮಿ ಅವರ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಮೊನ್ನೆ ದಸರಾ ಹಬ್ಬದ ದಿವಸ ನಟಿ ಗೌತಮಿ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಹಬ್ಬದ ದಿನವೇ ಅವರ ಮನೆಗೆ ದೇವತೆಯ ಹಾಗೆ ಹೆಣ್ಣುಮಗುವಿನ ಆಗಮನ ಆಗಿರುವುದಕ್ಕೆ ಸಂತೋಷ ಪಟ್ಟಿದ್ದಾರೆ ನಟಿ ಗೌತಮಿ. ಈ ಸಿಹಿ ಸುದ್ದಿಯನ್ನು ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
“ಹೆಣ್ಣು ಮಗು ಜನಿಸಿದೆ.. ನಮ್ಮ ಕನಸು ನನಸಾಗಿದೆ. ನಮ್ಮ ಮುದ್ದು ಮಗಳನ್ನು ನಮ್ಮ ಪುಟ್ಟ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ. ನಿಮ್ಮೆಲ್ಲರ ಶುಭಾಶಯ ಮತ್ತು ಹಾರೈಕೆಗೆ ಧನ್ಯವಾದಗಳು. ಈ ಪ್ರೀತಿ ಮತ್ತು ಆಶೀರ್ವಾದಕ್ಕೆ ಯಾವಾಗಲೂ ಋಣಿಯಾಗಿರುತ್ತೇನೆ..” ಎಂದ ಬರೆದು ಇನ್ಸ್ಟಾಗ್ರಾಮ್ ನಲ್ಲಿ ಕೆಲವು ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ ನಟಿ ಗೌತಮಿ. ಈ ಸಿಹಿ ಸುದ್ದಿ ಕೇಳಿದ ಅಭಿಮಾನಿಗಳು ಗೌತಮಿ ಅವರಿಗೆ ವಿಶ್ ಮಾಡುತ್ತಿದ್ದಾರೆ.
ಇನ್ನು ಗೌತಮಿ ಅವರ ಬಗ್ಗೆ ಹೇಳುವುದಾದರೆ, ಇವರು ಬಹಳ ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಚಿ ಸೌ ಸಾವಿತ್ರಿ ಧಾರವಾಹಿ ಮೂಲಕ ಗೌತಮಿ ಅವರು ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 3ನಲ್ಲಿ ಸಹ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಸದ್ದು ಮಾಡಿದ್ದರು. ಇತ್ತೀಚೆಗೆ ಭಾಗ್ಯಲಕ್ಷ್ಮಿ ಧಾರಾವಾಹಿ ಇಂದಲೂ ಕಿರುತೆರೆಯಲ್ಲಿ ಹೆಸರು ಮಾಡಿದ್ದರು.