Tirupati: ಈ ದಿನ ಭಕ್ತರಿಗೆ ಸಿಗಲ್ಲ ತಿಮ್ಮಪ್ಪನ ದರ್ಶನ, ಟಿಟಿಡಿ ಇಂದ ಬಿಗ್ ಅಪ್ಡೇಟ್

0 27

Tirupati: ತಿರುಪತಿ ತಿರುಮಲ ಇದು ನಮ್ಮ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದು. ದೇಶ ವಿದೇಶಗಳಿಂದ ತಿಮ್ಮಪನ್ನ ದರ್ಶನ ಪಡೆಯಲು ಭಕ್ತಾದಿಗಳು ಬರುತ್ತಾರೆ. ಈ ದೇವಸ್ಥಾನ ಸದಾ ರಶ್ ಇರುತ್ತದೆ ಎಂದರೆ ತಪ್ಪಲ್ಲ. ತಿರುಪತಿಗೆ ಹೋಗಬೇಕು ಎಂದು ನೀವೇನಾದರೂ ಪ್ಲಾನ್ ಮಾಡಿಕೊಂಡಿದ್ದರೆ, ನೇರವಾಗಿ ಹೋಗುವುದಕ್ಕಿಂತ ಟಿಟಿಡಿ ಇಂದ ಸಿಗುವ ಮಾಹಿತಿ ಪಡೆದು ಹೋಗುವುದು ಒಳ್ಳೆಯದು..

ಇದೀಗ ಟಿಟಿಡಿ ಕಡೆಯಿಂದ ಭಕ್ತರಿಗೆ ಒಂದು ಮುಖ್ಯವಾದ ಮಾಹಿತಿ ಸಿಕ್ಕಿದೆ. ಅದೇನು ಎಂದರೆ, ನಮಗೆಲ್ಲ ಗೊತ್ತಿರುವ ಹಾಗೆ ಆಕ್ಟೊಬರ್ 28ರಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಗೋಚರಿಸಲಿದೆ. ಆಕ್ಟೊಬರ್ 29ರ ಬೆಳಗ್ಗೆ ಕೂಡ ಬಾಗಶಃ ಚಂದ್ರಗ್ರಹಣ ಇರಲಿದೆ ಎಂದು ಮಾಹಿತಿ ಸಿಕ್ಕಿದ್ದು, ಈ ಕಾರಣಕ್ಕೆ ಆಕ್ಟೊಬರ್ 28ರ ರಾತ್ರಿ ಮತ್ತು ಆಕ್ಟೊಬರ್ 29ರ ಬೆಳಗ್ಗೆವರೆಗೂ ತಿರುಮಲ ದೇವಸ್ಥಾನ ಮುಚ್ಚಲಾಗುತ್ತದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಕ್ಟೊಬರ್ 28ರ ಸಂಜೆ 7 ಗಂಟೆಗೆ ತಿರುಮಲ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಗ್ರಹಣಕ ಆಕ್ಟೊಬರ್ ರ ಬೆಳಗ್ಗೆ 1:05 ಇಂದ 2:22ರ ವರೆಗು ಗ್ರಹಣ ಪೂರ್ತಿಯಾಗಿ ಮುಗಿಯುವವರೆಗೂ ದೇವಸ್ಥಾನರ ಬಾಗಿಲನ್ನು ಮುಚ್ಚಿರಲಾಗುತ್ತದೆ. ಪ್ರತಿ ಬಾರಿ ಗ್ರಹಣ ಗೋಚರಿಸುವ ದಿವಸ, ಗ್ರಹಣ ಗೋಚರಿಸುವ 6 ಗಂಟೆಗಳ ಮೊದಲೇ ದೇವಸ್ಥಾನದ ಬಾಗಿಲು ಮುಚ್ಚುವುದು ಬಹಳ ಹಿಂದಿನಿಂದ ಮಾಡಿಕೊಂಡು ಬಂದಿರುವ ಅಭ್ಯಾಸ ಆಗಿದೆ.

ಈಗಿನ ಚಂದ್ರಗ್ರಹಣ ಮುಗಿದ ಬಳಿಕ ಆಕ್ಟೊಬರ್ 29ರ ಬೆಳಗ್ಗೆ 3:15ರ ಸಮಯಕ್ಕೆ ದೇವರಿಗೆ ಶುದ್ಧಿ ಮತ್ತು ಸುಪ್ರಭಾತ ಸೇವೆಯನ್ನು ಖಾಸಗಿಯಾಗಿ ನಡೆಸಲಾಗುತ್ತದೆ. ಇದೆಲ್ಲವೂ ಮುಗಿದ ನಂತರ ತಿರುಮಲ ದೇವಸ್ಥಾನದ ಬಾಗಿಲನ್ನು ತೆಗೆಯಲಾಗುತ್ತದೆ. ಚಂದ್ರಗ್ರಹಣದ ಕಾರಣ ಸುಮಾರು 8 ಗಂಟೆಗಳ ಕಾಲ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿರುತ್ತದೆ.

ಚಂದ್ರಗ್ರಹಣ ಇರುವುದರಿಂದ ಆಕ್ಟೊಬರ್ 28ರಂದು ಸಹಸ್ರ ದ್ವೇಪಾಲಂಕಾರ ಸೇವೆ, ಅಂಗವಿಕಲರ ದರ್ಶನ ಹಾಗೂ ವಯೋವೃದ್ಧರ ದರ್ಶನ ಇದೆಲ್ಲವನ್ನು ಕ್ಯಾನ್ಸಲ್ ಮಾಡಲಾಗುತ್ತಿದ್ದು, ಭಕ್ತರು ಇದೆಲ್ಲವನ್ನು ಸರಿಯಾಗಿ ನೋಡಿಕೊಂಡು, ದೇವರ ದರ್ಶನಕ್ಕೆ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.

Leave A Reply

Your email address will not be published.