Health Tips: ಮುಂದಿನ ತಿಂಗಳು ಜಾಗ್ರತೆಯಿಂದ ಇರಿ, ಹುಷಾರು ತಪ್ಪುವ ಸಾಧ್ಯತೆ ಹೆಚ್ಚು!

0 20

Health Tips: ಸಾಮಾನ್ಯವಾಗಿ ಆಕ್ಟೊಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಹೆಚ್ಚಿನ ಜನರು ಹುಷಾರು ತಪ್ಪುತ್ತಾರೆ. ಜ್ವರ, ಶೀತ, ಕೆಮ್ಮು, ನೆಗಡಿ ಇಂಥ ಸಮಸ್ಯೆಗಳು ಉಂಟಾಗಬಹುದು. ಇದಕ್ಕೆ ಕಾರಣಗಳು ಹಲವು, ಹವಾಮಾನ ಬದಲಾವಣೆ ಈ ತಿಂಗಳಿನಲ್ಲಿ ಹೆಚ್ಚು ಗಾಳಿ ಇರುವುದು ಇಂಥ ಕಾರಣಕ್ಕೆ ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳು ಎದುರಾಗಬಹುದು. ನವೆಂಬರ್ ನಲ್ಲಿ ಹುಷಾರು ತಪ್ಪಲು ಕಾರಣ ಇದೊಂದೇ ಇಲ್ಲ.. ಇನ್ನು ಕೆಲವು ಕಾರಣಗಳಿವೆ, ಅವುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ, ಇದನ್ನು ತಿಳಿದರೆ, ನೀವು ಹುಷಾರು ತಪ್ಪುವುದರಿಂದ ತಪ್ಪಿಸಿಕೊಳ್ಳಬಹುದು.

*ವೈಟಮಿನ್ ಡಿ ಕೊರತೆ :- ವೈಟಮಿನ್ ಡಿ ಸಿಗುವುದು ಸೂರ್ಯನಿಂದ, ಈ ಕಾಲದಲ್ಲಿ ಸೂರ್ಯನ ಕಿರಣ ಬರುವುದು ಕಡಿಮೆಯೇ, ನಾವು ಸೂರ್ಯನ ಶಾಖಕ್ಕೆ ಒಗ್ಗಿಕೊಳ್ಳುವುದು ಕೂಡ ಕಡಿಮೆಯೇ. ಹಾಗಾಗಿ ವೈಟಮಿನ್ ಡಿ ಕೊರತೆ ಇಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

*ಮನೆಯೊಳಗಿನ ವಾಸ :- ಇದು ಚಳಿಗಾಲ ಆಗಿರುವುದರಿಂದ ಹೆಚ್ಚಿನ ಜನರು ಮನೆಯಿಂದ ಹೊರಗಡೆ ಬರಲು ಅಷ್ಟಾಗಿ ಬಯಸುವುದಿಲ್ಲ. ಎಲ್ಲರು ಮನೆಯ ಒಳಗೆ ಇರಲು ಬಯಸುತ್ತಾರೆ. ಹೆಚ್ಚಿನ ಜನರು ಒಂದೇ ಮನೆಯಲ್ಲಿ ವಾಸ ಮಾಡುತ್ತಾ, ಸಂಪರ್ಕಕ್ಕೆ ಬರುವುದರಿಂದ ಸೋಂಕುಗಳ ಹರಡುವಿಕೆ ಹೆಚ್ಚಾಗಬಹುದು.

*ಸೊಳ್ಳೆಗಳು ಹೆಚ್ಚಾಗುವ ಸಮಯ :- ಈ ಕಾಲದಲ್ಲಿ ಮಳೆ ಕೂಡ ಬರುವ ಸಾಧ್ಯತೆ ಬರುವುದರಿಂದ ಸಾಕಷ್ಟು ಜಾಗಗಳಲ್ಲಿ ನೀರು ಸಂಗ್ರಹವಾಗುತ್ತದೆ. ಈ ಕಾಲ ಹೆಚ್ಚಿನ ಸೋಂಕುಗಳನ್ನು ಹರಡಿಸುವ ಸೊಳ್ಳೆಗಳ ಸಂತಾನದ ಕಾಲ, ಈ ತಿಂಗಳುಗಳಲ್ಲಿ ಸೊಳ್ಳೆಗಳು ಹೆಚ್ಚಾಗುವ ಕಾರಣ ರೋಗಗಳ ಹರುಡುವಿಕೆ ಹೆಚ್ಚಾಗುತ್ತದೆ.

*ಅಸಡ್ಡೆ :- ಈ ಕಾಲದಲ್ಲಿ ಮಳೆ ಇರುವುದಿಲ್ಲ, ಹಾಗಾಗಿ ಹುಷಾರು ತಪ್ಪುವುದಿಲ್ಲ ಎಂದು ಹಲವಾರು ಜನರು ಆರೋಗ್ಯವನ್ನು ನಿರ್ಲಕ್ಷಿಸಿ, ತಣ್ಣೀರಿನ ಸ್ನಾನ ಮಾಡುವುದು, ತಣ್ಣಗಿರುವ ಬಟ್ಟೆ ಧರಿಸುವುದು ಹೀಗೆ ನಿರ್ಲಕ್ಷ್ಯ ಮಾಡುತ್ತಾರೆ..ಈ ರೀತಿ ಮಾಡುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಹಾಗಾಗಿ ಈ ರೀತಿಯ ನಿರ್ಲಕ್ಷ್ಯಗಳನ್ನು ಮಾಡಬೇಡಿ.

Leave A Reply

Your email address will not be published.