Health Tips: ಚಳಿಗಾಲದ ಕೆಮ್ಮು, ನೆಗಡಿ, ಶೀತದ ಸಮಸ್ಯೆಗೆ ಬೆಸ್ಟ್ ಈ ಮನೆಮದ್ದುಗಳು!

0 21

Health Tips: ಚಳಿಗಾಲ ಶುರುವಾಯಿತು ಎಂದರೆ, ವಾತಾವರಣ ಬದಲಾವಣೆಗೆ ಕೆಮ್ಮು, ನೆಗಡಿ, ಶೀತ ಇಂಥ ಸಮಸ್ಯೆಗಳು ಬರುವುದು ಕಾಮನ್. ಇದಕ್ಕೆಲ್ಲಾ ವೈದ್ಯರ ಬಳಿ ಹೋಗುವುದಕ್ಕಿಂತ ಮನೆಯಲ್ಲಿ ಕುಳಿತು ನೀವೇ ಮನೆಮದ್ದುಗಳನ್ನು ಬಳಸಿ, ಆರೋಗ್ಯಕರವಾಗಿ ಇರಬಹುದು. ಒಂದು ವೇಳೆ ಈ ಸಮಯದಲ್ಲಿ ನಿಮಗೂ ಕೂಡ ಚಳಿಯ ಸಮಸ್ಯೆ ಇದ್ದರೆ, ಅದಕ್ಕೆ ಮನೆಮದ್ದುಗಳನ್ನು ಇಂದು ನಿಮಗೆ ತಿಳಿಸುತ್ತೇವೆ..

ಕರಿಮೆಣಸು :- ನಮ್ಮ ಮನೆಗಳಲ್ಲಿ ಮಸಾಲೆ ಪದಾರ್ಥಗಳ ರಾಜ ಎಂದು ಕರಿಮೆಣಸನ್ನು ಕರೆಯುತ್ತಾರೆ. ಕರಿಮೆಣಸನ್ನು ಪುಡಿ ಮಾಡಿ, ಅದಕ್ಕೆ ಜೇನುತುಪ್ಪ ಬೆರೆಸಿ ತಿನ್ನಬೇಕು. ಇದರಿಂದ ಹೊರಗಿನ ಪ್ರಪಂಚದಿಂದ ಶುರುವಾಗಿರುವ ಉಸಿರಾಟದ ಸಮಸ್ಯೆ, ಕಫ ಇದೆಲ್ಲದಕ್ಕೂ ಪರಿಹಾರ ಸಿಕ್ಕ ಹಾಗೆ ಆಗುತ್ತದೆ.

ಶುಂಠಿ :- ಇದು ಕೂಡ ಮುಖ್ಯವಾದ ಅಡುಗೆ ಪದಾರ್ಥ ಆಗಿದ್ದು, ಶುಂಠಿಯು ನಿಮ್ಮನ್ನು ಚಳಿಗಾಲದ ಸೋಂಕಿನಿಂದ ತಡೆಗಟ್ಟುತ್ತದೆ. ಶುಂಠಿ ಸೇವನೆ ಇಂದ ನಿಮ್ಮ ಇಮ್ಯುನಿಟಿ ಹೆಚ್ಚುತ್ತದೆ. ಚಳಿಗಾಲದ ಕೆಮ್ಮು, ನೆಗಡಿ ಶೀತ ಇವುಗಳಿಂದಲು ಪರಿಹಾರ ಸಿಗುತ್ತದೆ.

ಬೆಲ್ಲ :- ಆಯುರ್ವೇದದಲ್ಲಿ ತಿಳಿಸಿರುವ ಪ್ರಕಾರ, ಚಳಿಗಾಲದಲ್ಲಿ ಬೆಲ್ಲ ಬಳಸಿದರೆ, ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಡಿನ್ನರ್ ನಂತರ ಬೆಲ್ಲ ಸೇವನೆ ಮಾಡಿದರೆ, ಉಸಿರಾಟಕ್ಕೆ ಸಂಬಂಧಿಸಿದ ಆರೋಗ್ಯ ತೊಂದರೆಗಳು, ಅಸ್ತಮಾ, ಬ್ರಾಂಖೈಟಿಸ್, ಇಂಥ ಸಮಸ್ಯೆಗಳಿಂದ ದೂರ ಉಳಿಯಬಹುದು.

ಅರಿಶಿನ :- ಇದನ್ನು ಆಂಟಿ ಮೈಕ್ರೊಬಿಯಲ್ ಅಂಶ ಎಂದು ಕರೆಯುತ್ತಾರೆ. ಇದರಲ್ಲಿ ಕರ್ಕ್ಯೂಮನ್ ಇದ್ದು, ಉರಿಯೂತದ ಸಮಸ್ಯೆ , ಮಾಲಿನ್ಯದಿಂದ ಉಂಟಾಗುವ ಶ್ವಾಸಕೋಶದ ಸಮಸ್ಯೆಗಳು, ವಿಷಕಾರಿ ಸಮಸ್ಯೆಗಳಿಂದ ರಕ್ಷಿಸುತ್ತದೆ. ದಿನನಿತ್ಯದ ಆಹಾರದಲ್ಲಿ ಅರಿಶಿನ ಬಳಕೆ ಮಾಡುವುದರಿಂದ ಚಳಿಗಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಆಲಿವ್ ಆಯಿಲ್ :- ಇದರಲ್ಲಿ ವೈಟಮಿನ್ ಇ ಅಂಶ ಜಾಸ್ತಿ ಇದ್ದು, ಶ್ವಾಸಕೋಶದ ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಚಳಿಗಾಲದ ಸಮಸ್ಯೆಗಳನ್ನು ಪರಿಹರಿಸುತ್ತದೆ.

Leave A Reply

Your email address will not be published.