Health Tips: ನಮ್ಮ ಸೌಂದರ್ಯ ವೃದ್ಧಿಸುವ ಒಂದು ಪ್ರಮುಖವಾದ ವಸ್ತು ರೋಸ್ ವಾಟರ್. ಇದನ್ನು ಪ್ರತಿದಿನ ಮುಖಕ್ಕೆ ಹಚ್ಚುತ್ತಾ ಬಂದರೆ ಮುಖ ಕಾಂತಿಯುತವಾಗುತ್ತದೆ. ನಿಮ್ಮ ತ್ವಚೆಯ ಸೌಂದರ್ಯ ವೃದ್ಧಿಯಾಗುತ್ತದೆ. ಸೌಂದರ್ಯ ವರ್ಧಕ ಕಾರಣಕ್ಕೆ ಹೆಚ್ಚಿನ ಜನರು ರೋಸ್ ವಾಟರ್ ಬಳಸುತ್ತಾರೆ. ಇದರಿಂದ ಸಿಗುವ ಉಪಯೋಗಗಳು ಕೂಡ ಹೆಚ್ಚು. ಆದರೆ ಇದು ಸೌಂದರ್ಯಕ್ಕೆ ಮಾತ್ರವಲ್ಲ, ದೇಹಕ್ಕು ಸಹಾಯ ಮಾಡುತ್ತದೆ.
ಹೌದು, ರೋಸ್ ವಾಟರ್ ಕುಡಿಯುವುದರಿಂದ ನಿಮ್ಮ ದೇಹಕ್ಕೂ ಒಳ್ಳೆಯದು, ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನ ತಂದುಕೊಡುತ್ತದೆ. ಇದು ಚಳಿಗಾಲ ಈ ವೇಳೆ ತಾಪಮಾನ ಕಡಿಮೆ ಇರುವುದರಿಂದ ಬಹಳಷ್ಟು ಜನರ ಕಣ್ಣಲ್ಲಿ ತೊಂದರೆಗಳು ಉಂಟಾಗುವುದಕ್ಕೆ ಶುರುವಾಗುತ್ತದೆ. ಕಣ್ಣಿನ ಸುತ್ತ ರೆಡ್ ಆಗುವುದು, ತುರಿಕೆ ಉಂಟಾಗುವುದು ಇದೆಲ್ಲವೂ ನಡೆಯುತ್ತದೆ. ಈ ಥರದ ತೊಂದರೆಗಳು ಇದ್ದರೆ, ರೋಸ್ ವಾಟರ್ ಬಳಸಿ, ಕಣ್ಣಿಗೆ ಹೆಚ್ಚಿದರೆ ನಿಮ್ಮ ಸಮಸ್ಯೆ ದೂರವಾಗುತ್ತದೆ..
ರೋಸ್ ವಾಟರ್ ಬಗ್ಗೆ ವೈದ್ಯರು ಹೇಳಿರುವುದು ಏನು ಎಂದರೆ, ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಸೆಪ್ಟಿಕ್ ಅಂಶವಿದೆ. ಒಂದು ವೇಳೆ ದೇಹದಲ್ಲಿ ಗಾಯಗಳಾಗಿದ್ದರೆ, ಈ ನೀರಿನಿಂದ ನೀವು ಗಾಯವನ್ನು ತೊಳೆದುಕೊಂಡರೆ, ನಿಮ್ಮ ಗಾಯಗಳು ಕಡಿಮೆ ಆಗುತ್ತದೆ. ಹಾಗೆಯೇ ನೋವುಗಳು ಕೂಡ ಕಡಿಮೆ ಆಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ. ಇದಷ್ಟೇ ಅಲ್ಲದೆ ಮತ್ತೊಂದು ಉತ್ತಮವಾದ ಉಪಯೋಗ ಕೂಡ ಇದೆ.
ಪ್ರತಿದಿನ ರೋಸ್ ವಾಟರ್ ಬಳಸುತ್ತಾ ಬಂದರೆ, ನಿಮ್ಮಲ್ಲಿರುವ ಸ್ಟ್ರೆಸ್ ಕೂಡ ಕಡಿಮೆ ಆಗುತ್ತದೆ. ಒಂದು ವೇಳೆ ನಿಮಗೆ ಮಾನಸಿಕ ಒತ್ತಡ ಹೆಚ್ಚಿದ್ದರೆ, ರೋಸ್ ವಾಟರ್ ಬಳಕೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಹಾಗೂ ನಿಮ್ಮ ಮನಸ್ಥಿತಿ ಯಾವಾಗಲೂ ಚೆನ್ನಾಗಿರುತ್ತದೆ.