Jayaprada: ಹಿರಿಯನಟಿ ಜಯಪ್ರದಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ, ಏನಾಗಿದೆ ಗೊತ್ತಾ?

0 9

Jayaprada: 70ರ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯನಟಿ ಜಯಪ್ರದಾ ಅವರಿಗೆ ಇದೀಗ ಚೆನ್ನೈ ಹೈಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜಯಪ್ರದಾ ಅವರ ಕೇಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಇಂದ ಮದ್ರಾಸ್ ಹೈಕೋರ್ಟ್ ಗೆ ಬಂದಿದ್ದು, ಜಯಪ್ರದಾ ಅವರಿಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಸಹ ಸೋಲು ಉಂಟಾಗಿದ್ದು, ಇದೀಗ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣ ಏನು ಎಂದರೆ, ಜಯಪ್ರದಾ ಅವರು ಒಂದು ಥಿಯೇಟರ್ ನಡೆಸುತ್ತಿದ್ದು, ಅಲ್ಲಿ ಕೆಲಸ ಮಾಡುವವರ ಕೆಲಸಗಾರರ ಸಂಬಳದಿಂದ ESI ಹಣವನ್ನು ಕಟ್ ಮಾಡಲಾಗಿತ್ತು .

ಆದರೆ ಆ ಹಣವನ್ನು ಕಾರ್ಮಿಕ ಸರ್ಕಾರಿ ವಿಮಾ ನಿಗಮಕ್ಕೆ ಪಾವತಿ ಮಾಡಿಲ್ಲ. ಈ ಕಾರಣಕ್ಕೆ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಇವರಿಗೆ 6 ತಿಂಗಳ ಶಿಕ್ಷೆ ವಿಧಿಸಲಾಗಿತ್ತು, ಬಳಿಕ ಹೈಕೋರ್ಟ್ ನಲ್ಲಿ ಈ ಕೇಸ್ ನಡೆದಿದ್ದು, ಅಲ್ಲಿ ಸಹ ಜಯಪ್ರದಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸುವುದರ ಜೊತೆಗೆ ಕಾರ್ಮಿಕರ ಹೆಸರಿನಲ್ಲಿ 20 ಲಕ್ಷ ಡೆಪಾಸಿಟ್ ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ನಟಿ ಜಯಪ್ರದಾ, ರಾಮ್ ಕುಮಾರ್ ಮತ್ತು ರಾಜ್ ಬಾಬು ಎನ್ನುವ ಮೂವರ ಜೊತೆ ಸೇರಿ ಚೆನ್ನೈನಲ್ಲಿರುವ ಅಣ್ಣಾ ರೋಡ್ ನಲ್ಲಿ ಥಿಯೇಟರ್ ನಡೆಸುತ್ತಿದ್ದರು.

ಥಿಯೇಟರ್ ನಲ್ಲಿ ಕೆಲಸ ಮಾಡುವವರಿಂದ 1991 ರಿಂದ 2002ರ ಸಮಯದಲ್ಲಿ 8.17 ಲಕ್ಷ ESI ಹಣ ತೆಗೆದುಕೊಂಡಿದ್ದರು, 2002 ರಿಂದ 2005ರ ನಡುವೆ 1.58 ಲಕ್ಷ ರೂಪಾಯಿ ಹಣ ಸಂಗ್ರಹಣೆ ಮಾಡಿದ್ದರು. ಸಂಗ್ರಹಿಸಿದ್ದ ಕಾರ್ಮಿಕರ ಹಣ ಕಾರ್ಮಿಕರ ESI ಅಕೌಂಟ್ ಗೆ ಹೋಗಿರಲಿಲ್ಲ, ಈ ಕಾರಣಕ್ಕೆ ಮೆಟ್ರೋಪೋಲಿಟನ್ ಕೋರ್ಟ್ ನಲ್ಲಿ ದೂರು ದಾಖಲಾಗಿತ್ತು. ಸಾಕಷ್ಟು ಜನರು ಈ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿದ್ದು, ಥಿಯೇಟರ್ ನ ಮೇಲ್ವಿಚಾರಣೆಗಳನ್ನು ರಾಮ್ ಬಾಬು ಮತ್ತು ರಾಜ್ ಬಾಬು ವಹಿಸಿಕೊಂಡಿದ್ದರು.

ತಮಿಳುನಾಡು ರಾಜ್ಯ ವಿಮಾ ನಿಗಮಕ್ಕೆ ಥಿಯೇಟರ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತಮ್ಮಿನ ವಸೂಲಿ ಮಾಡಿರುವ ESI ಹಣವನ್ನು ವಿಮಾ ನಿಗಮಕ್ಕೆ ಪಾವತಿಸಿಲ್ಲ ಎಂದು ದೂರು ನೀಡಿದ್ದನು. ಈ ಆಗಸ್ಟ್ ತಿಂಗಳಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತನಿಖೆಗಳು ನಡೆದು, ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಯಪ್ರದಾ ಹಾಗೂ ಇನ್ನು ಇಬ್ಬರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ, 5 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಕೋರ್ಟ್ ನಿರ್ಧಾರಕ್ಕೆ ವಿರುದ್ಧವಾಗಿ ನಟಿ ಜಯಪ್ರದಾ ಅವರು ಮದ್ರಾಸ್ ಪ್ರಿನ್ಸಿಪಲ್ ಸೆಷನ್ಸ್ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಶಿಕ್ಷೆಗೆ ಸ್ಟೇ ನೀಡಲು ಒಪ್ಪಲಿಲ್ಲ.

ಶಿಕ್ಷೆಗೆ ತಡೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದನ್ನು ಕೋರ್ಟ್ ಈಗ ನಿರಾಕರಿಸಿದೆ. ಕೆಳ ನ್ಯಾಯಾಲಯ ನೀಡಿದ ತೀರ್ಪನ್ನೇ ಪಾಲಿಸಿದೆ. ಹೈಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ತೀರ್ಪಿನ ಪರವಾಗಿಯೇ ಇದ್ದು, ನಟಿ ಜಯಪ್ರದಾ ಮತ್ತು ಇನ್ನು ಇಬ್ಬರು 15 ದಿನಗಳ ಒಳಗೆ ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ಸೂಚಿಸಿದೆ. ಹಾಗೆಯೇ ESI ಮೊತ್ತ 20 ಲಕ್ಷ ಠೇವಣಿ ಇಡಬೇಕು, ಆಗ ಮಾತ್ರ ಜಾಮೀನು ಸಿಗುತ್ತದೆ ಎಂದು ಜಡ್ಜ್ ಜಯಚಂದ್ರ ಅವರು ಆದೇಶ ನೀಡಿದ್ದಾರೆ.

Leave A Reply

Your email address will not be published.