Karthika Nair: ಅದ್ಧೂರಿಯಾಗಿ ಮದುವೆಯಾದ ಡಿಬಾಸ್ ಸಿನಿಮಾ ನಟಿ ಕಾರ್ತಿಕಾ!

0 17

Karthika Nair: ನಟಿ ಕಾರ್ತಿಕಾ ನಾಯರ್ ಅವರು ಕನ್ನಡದ ಬೃಂದಾವನ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೂ ಪರಿಚಿತರು. ಕಾರ್ತಿಕಾ ಅವರು ಬೃಂದಾವನ ಸಿನಿಮಾದಲ್ಲಿ ಡಿಬಾಸ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಕಾರ್ತಿಕಾ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇತ್ತೀಚೆಗೆ ಕಾರ್ತಿಕಾ ಅವರು ಎಂಗೇಜ್ ಆಗಿರುವ ಫೋಟೋ ಶೇರ್ ಮಾಡಿದ್ದರು, ಇದೀಗ ನವೆಂಬರ್ 19ರಂದು ಮದುವೆಯಾಗಿದ್ದಾರೆ.

ಕಾರ್ತಿಕಾ ಅವರು ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ರಾಧಾ ಅವರ ಮಗಳು, ರಾಧಾ ಅವರು ನಟಿ ಅಂಬಿಕಾ ಅವರ ತಂಗಿ. ರಾಧಾ ಅವರು ಕೂಡ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿ, ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕಾರ್ತಿಕಾ ಅವರು ನಟನೆ ಶುರು ಮಾಡಿದ್ದು ತೆಲುಗಿನ ಜೋಶ್ ಸಿನಿಮಾ ಮೂಲಕ. ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಕಾರ್ತಿಕಾ ನಾಯರ್.

ಆದರೆ ಇವರಿಗೇ ನಾಯಕಿಯಾಗಿ ಅಷ್ಟೇನು ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಹಾಗಾಗಿ ಕಾರ್ತಿಕಾ ಅವರು ನಟನೆ ಇಂದ ದೂರವಾಗಿ, ಉದ್ಯಮಿಯಾದರು. ಇಂದು ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಆಕ್ಟೊಬರ್ ತಿಂಗಳಿನಲ್ಲಿ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ್ದ ಶಾಕ್ ಕೊಟ್ಟಿದ್ದ ಕಾರ್ತಿಕಾ ಅವರು ಕಳೆದ ಭಾನುವಾರ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇವರ ಮದುವೆ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೇರಳದ ಬೀಚ್ ಹೋಟೆಲ್ ಒಂದರಲ್ಲಿ ಇವರ ಮದುವೆ ಆಗಿದ್ದು, ಉದ್ಯಮಿ ರೋಹಿತ್ ಅವರೊಡನೆ ಕಾರ್ತಿಕಾ ಅವರ ಮದುವೆ ನಡೆದಿದೆ. ಬಹಳ ಅದ್ಧೂರಿಯಾಗಿ ನಡೆದಿರುವ ಮದುವೆಯಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಅತಿಥಿಗಳಾಗಿ ಬಂದಿದ್ದಾರೆ. 2017 ರಿಂದ ಕಾರ್ತಿಕಾ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ..

ಇವರ ಮದುವೆಗೆ ಮೆಗಾಸ್ಟಾರ್ ಚಿರಂಜೀವಿ, ನಟಿ ಸುಹಾಸಿನಿ, ರಾಧಿಕಾ ಶರತ್ ಕುಮಾರ್, ನಟಿ ರೇವತಿ ಸೇರಿದಂತೆ 80ರ ದಶಕದಲ್ಲೊ ಖ್ಯಾತಿ ಪಡೆದಿದ್ದ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದರು ಬಂದಿದ್ದರು.

Leave A Reply

Your email address will not be published.