Kavitha Gowda: ಕನ್ನಡ ಕಿರುತೆರೆಗೆ ಲಕ್ಷ್ಮಿ ಬಾರಮ್ಮ ಧಾರವಾಹಿ ಇಂದ ಪರಿಚಯ ಆದವರು ನಟಿ ಕವಿತಾ ಗೌಡ, ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಚ್ಚಿ ಪಾತ್ರವನ್ನ ಜನರು ಇಂದಿಗೂ ಮರೆತಿಲ್ಲ. ಈ ಧಾರವಾಹಿ ನಂತರ ಕನ್ನಡ ಮತ್ತು ತೆಲುಗಿನ ಇನ್ನು ಕೆಲವು ಧಾರವಾಹಿಗಳಲ್ಲಿ ಕವಿತಾ ಗೌಡ ನಟಿಸಿದರು. ಕೆಲವು ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡರು. ಡ್ಯಾನ್ಸ್ ಶೋನಲ್ಲಿ ಕೂಡ ಸ್ಪರ್ಧಿಸಿದ್ದರು. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ಕೆಂಡ ಸಂಪಿಗೆ ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..
ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಾಯಕನಾಗಿದ್ದ ಚಂದನ್ ಅವರೊಡನೆ ಪ್ರೀತಿಯಲ್ಲಿದ್ದರು. ಇವರಿಬ್ಬರು ಕೆಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದಾರೆ. ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಇವರಿಬ್ಬರು ಕಲಾವಿದರಾಗಿ ಮಾತ್ರವಲ್ಲದೆ ಉದ್ಯಮಿಗಳಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಸಂತೋಷದ ದಾಂಪತ್ಯ ಜೀವನ ನಡೆಸುತ್ತಿರುವ ಈ ಜೋಡಿಯಿಂದ ಇದೀಗ ಒಂದು ಗುಡ್ ನ್ಯೂಸ್ ಸಿಗುವ ಸೂಚನೆ ಇದೆ.
ಅದೇನು ಎಂದರೆ ಚಂದನ್ ಕವಿತಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಎಂದು ತಿಳಿದುಬಂದಿದೆ. ಈ ವಿಷಯವನ್ನು ಇವರಿಬ್ಬರು ಅಧಿಕೃತವಾಗಿ ಎಲ್ಲಿಯೂ ತಿಳಿಸಿಲ್ಲ. ಆದರೆ ಚಂದನ್ ಅವರು ಶೇರ್ ಮಾಡಿರುವ ಫೋಟೋ ಒಂದನ್ನು ನೋಡಿದ ಅಭಿಮಾನಿಗಳಿಗೆ ಕವಿತಾ ಗೌಡ ಅವರು ಗರ್ಭಿಣಿ ಇರಬಹುದು ಎಂದು ಅನ್ನಿಸಿದ್ದು, ಎಲ್ಲರೂ ಈ ಜೋಡಿಗೆ ಈಗ ಶುಭವಾಗಲಿ ಎಂದು ವಿಶ್ ಮಾಡುತ್ತಿದ್ದಾರೆ.
ಚಂದನ್ ಕವಿತಾ ಇಬ್ಬರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಚಂದನ್ ಅವರು ಕವಿತಾ ಅವರೊಡನೆ ಟ್ರಿಪ್ ಹೋಗಿದ್ದು, ವಾಟರ್ ಫಾಲ್ಸ್ ಹತ್ತಿರ ಇಬ್ಬರು ಜೊತೆಯಾಗಿ ನಿಂತಿರುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಕವಿತಾ ಅವರ ಬೇಬಿ ಬಂಪ್ ಕಾಣುತ್ತಿದ್ದು, ಅವರನ್ನು ನೋಡಿದರೆ ಗರ್ಭಿಣಿ ಆಗಿರಬಹುದು ಎಂದು ಗೊತ್ತಾಗುತ್ತಿದೆ.
ಸಧ್ಯಕ್ಕೆ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಗೆ ವಿಶ್ ಮಾಡುತ್ತಿದ್ದಾರೆ. ಇಬ್ಬರಿಗೂ ಕಂಗ್ರಾಜುಲೇಶನ್ಸ್ ಎಂದು ವಿಶ್ ಮಾಡಿದ್ದು, ಇವರಿಬ್ಬರು ಅಧಿಕೃತವಾಗಿ ಯಾವಾಗ ಅನೌನ್ಸ್ ಮಾಡುತ್ತಾರೆ ಎಂದು ಕಾಯುತ್ತಿದ್ದಾರೆ ಅಭಿಮಾನಿಗಳು. ಇನ್ನು ಈ ಜೋಡಿ ಉದ್ಯಮಿಗಳಾಗಿ ಕೂಡ ಯಶಸ್ಸು ಪಡೆಯುತ್ತಿದ್ದಾರೆ.