Dasara: ದಸರಾ ಹಬ್ಬದ ತಯಾರಿಗೆ ಹೂವು ಹಣ್ಣಿನ ಬೆಲೆ ಕೇಳಿ ಬೆಚ್ಚಿಬಿದ್ದ ಜನ, ಎಷ್ಟಾಗಿದೆ ಗೊತ್ತಾ ರೇಟ್?

0 17

Dasara: ಹಬ್ಬ ಬಂತು ಎಂದರೆ ಮಾರ್ಕೆಟ್ ತುಂಬಾ ಜನ, ಹೂವು ಹಣ್ಣು ಖರೀದಿ ಮತ್ತು ಇನ್ನಿತರ ಪೂಜೆ ಸಾಮಗ್ರಿಗಳು, ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿ ಮಾಡಲು ಜನರು ಮಾರ್ಕೆಟ್ ಗೆ ಬರುತ್ತಾರೆ. ಆದರೆ ಹಬ್ಬದ ವೇಳೆ ಹೂವು, ಹಣ್ಣು ಮತ್ತು ಇನ್ನೆಲ್ಲಾ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗೋದು ಕಾಮನ್. ಈ ದಸರಾ ಹಬ್ಬದಲ್ಲಿ ಕೂಡ ಅದೇ ರೀತಿ ಆಗಿದೆ.

ನಾಳೆ ಆಯುಧ ಪೂಜೆ, ನಾಳಿದ್ದು ದಸರಾ ಹಬ್ಬ, ಹಬ್ಬದ ತಯಾರಿಗೆ ಬೇಕಾದ ವಸ್ತುಗಳ ಖರೀದಿಗೆ ಕೆ.ಆರ್.ಮಾರ್ಕೆಟ್ ಗೆ ಬಂದ ಜನರು ಶಾಪಿಂಗ್ ಮಾಡುವಾಗ ಬೆಲೆ ಕೇಳಿ ಶಾಕ್ ಆಗಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದ್ದು, ನೀವು ಖರೀದಿ ಮಾಡುವ ಮೊದಲು ಬೆಲೆಯ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು..

ಹೂವುಗಳ ಬೆಲೆ ನೋಡುವುದಾದರೆ..
ಮಲ್ಲಿಗೆ ಹೂವು ಒಂದು ಕೆಜಿಗೆ 1000 ರಿಂದ 1200 ರೂಪಾಯಿಗಳು,
ಸೇವಂತಿಗೆ ಹೂವು ಒಂದು ಕೆಜಿಗೆ 300 ರಿಂದ 500 ರೂಪಾಯಿಗಳು,
ಗುಲಾಬಿ ಹೂವು ಒಂದು ಕೆಜಿಗೆ 200 ರಿಂದ 309 ರೂಪಾಯಿಗಳು,
ಕನಕಾಂಬರ ಹೂವು ಒಂದು ಕೆಜಿಗೆ, 1100 ದಿಂದ 1300 ರ
ರೂಪಾಯಿಗಳು, ಮರಳೆ ಹೂವು ಒಂದು ಕೆಜಿಗೆ 800 ರಿಂದ 1000 ರೂಪಾಯಿಗಳು.

ಹಣ್ಣುಗಳ ಬೆಲೆ ಕೂಡ ಅದೇ ರೀತಿ ಏರಿಕೆ ಆಗಿದೆ.
ಏಲಕ್ಕಿ ಬಾಳೆ ಒಂದು ಕೆಜಿಗೆ 120 ರಿಂದ 140 ರೂಪಾಯಿಗಳು,
ಪೈನ್ ಆ್ಯಪಲ್‌ ಒಂದು ಕೆಜಿಗೆ 40 ರಿಂದ 70 ರೂಪಾಯಿಗಳು,
ದಾಳಿಂಬೆ ಒಂದು ಕೆಜಿಗೆ 100 ರಿಂದ 150 ರೂಪಾಯಿಗಳು,
ಆ್ಯಪಲ್‌ ಒಂದು ಕೆಜಿಗೆ 180 ರಿಂದ 350 ರೂಪಾಯಿಗಳು. ಇನ್ನು ತಮಿಳುನಾಡು ರಾಜ್ಯದಿಂದ ಬಂದಿರುವ ಬೂದು ಗುಂಬಳಕಾಯಿ ಒಂದು ಕೆಜಿಗೆ 30 ರೂಪಾಯಿ ಇದ್ದು ಆದರೆ ಇಂದು 150 ರೂಪಾಯಿವರೆಗು ತಲುಪಿದೆ. ಮಳೆ ಇಲ್ಲದ ಕಾರಣ ಎಲ್ಲದರ ಬೆಲೆ ಜಾಸ್ತಿಯಾಗಿದೆ.

Leave A Reply

Your email address will not be published.