Kavya Gowda: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಸಿಹಿ ಸುದ್ದಿ ಕೊಟ್ಟ ಕಾವ್ಯ ಗೌಡ!

0 14

Kavya Gowda: ಕಿರುತೆರೆಯಲ್ಲಿ ಹೆಸರು ಪಡೆದಿದ್ದ ನಟಿಯರಲ್ಲಿ ಒಬ್ಬರು ಕಾವ್ಯ ಗೌಡ. ಮೀರಾ ಮಾಧವ ಧಾರವಾಹಿ ಮೂಲಕ ಕಿರುತೆರೆಯಲ್ಲಿ ನಟನೆ ಆರಂಭಿಸಿದರು ಕಾವ್ಯ ಗೌಡ. ಈ ಧಾರವಾಹಿಯಲ್ಲಿ ಮುಗ್ಧ ನಟನೆ ಮೂಲಕ ಕರ್ನಾಟಕ ಜನತೆಯ ಗಮನ ಸೆಳೆದರು. ಮೀರಾ ಮಾಧವ ನಂತರ ರಾಧಾ ರಮಣ ಧಾರವಾಹಿಯಲ್ಲಿ ಶ್ವೇತಾ ಪ್ರಸಾದ್ ನಟಿಸುತ್ತಿದ್ದ ರಾಧಾ ಮಿಸ್ ಪಾತ್ರವನ್ನು ಮುಂದುವರೆಸಿಕೊಂಡು ಹೋದರು.

ರಾಧಾ ಪಾತ್ರ ಇವರಿಗೆ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡರು ಕಾವ್ಯ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಕಾವ್ಯ ಗೌಡ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಪ್ರಸ್ತುತ ಕಾವ್ಯ ಗೌಡ ಯಾವುದೇ ಧಾರವಾಹಿಗಳಲ್ಲಿ ನಟಿಸುತ್ತಿಲ್ಲ ಆದರೂ ಕರ್ನಾಟಕದ ಜನತೆ ಇವರನ್ನು ಮರೆತಿಲ್ಲ. ಬಹಳ ಕ್ಯೂಟ್ ಆಗಿರುವ ನಟಿ ಕಾವ್ಯ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೋಗಳು ಮತ್ತು ಮುದ್ದಾದ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

2021ರಲ್ಲಿ ಇವರು ಸೋಮಶೇಖರ್ ಎನ್ನುವವ ಜೊತೆಗೆ ಮದುವೆಯಾದರು. ಮದುವೆ ಬಳಿಕ ನಟನೆ ಇಂದ ದೂರ ಇರುವ ಕಾವ್ಯ ಗೌಡ ಅವರು ಇತ್ತೀಚೆಗೆ ಗರ್ಭಿಣಿ ಆಗಿರುವ ಸಂತೋಷದ ವಿಚಾರವನ್ನು ಇನ್ಸ್ಟಾಗ್ರಾಮ್ ಮೂಲಕ ಶೇರ್ ಮಾಡಿಕೊಂಡಿದ್ದರು. ಇತ್ತೀಚೆಯೆ ಇವರ ಸೀಮಂತ ಶಾಸ್ತ್ರ ನಡೆದಿತ್ತು.ಕುಟುಂಬದ ಜೊತೆಗೆ ಹಾಗೂ ಫ್ರೆಂಡ್ಸ್ ಜೊತೆಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು ಕಾವ್ಯ ಗೌಡ.

ನಿನ್ನೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆದ ದಿನವೇ ಕಾವ್ಯ ಗೌಡ ಅವರು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಶೇರ್ ಮಾಡಿಕೊಂಡಿದ್ದು, ತಾಯಿ ಮಗು ಇಬ್ಬರು ಕೂಡ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಈ ಗುಡ್ ನ್ಯೂಸ್ ಕೇಳಿ ಕಾವ್ಯ ಗೌಡ ಅವರ ಅಭಿಮಾನಿಗಳು ಸಂತೋಷ ಪಟ್ಟಿದ್ದಾರೆ.

123
Source:Google
Leave A Reply

Your email address will not be published.