Kiccha Sudeep: ರಕ್ಷಕ್ ಅವರಿಗೆ ಕಿಚ್ಚ ಸುದೀಪ್ ಅವರು ಗಿಫ್ಟ್ ನೀಡಿರುವ ಗಾಗಲ್ಸ್ ಬೆಲೆ ಎಷ್ಟು ಗೊತ್ತಾ?

0 32

Kiccha Sudeep: ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್, ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. 2 ವಾರಕ್ಕೆ ಎಲಿಮಿನೇಟ್ ಆಗಿ ಬಂದಿದ್ದ ರಕ್ಷಕ್, ಹೊರಗಡೆ ಬಂದ ಬಳಿಕ ಇಂಟರ್ವ್ಯೂ ಗಳಲ್ಲಿ ಕೊಟ್ಟ ಕೆಲವು ಹೇಳಿಕೆಗಳಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಅದರಲ್ಲೂ ಸುದೀಪ್ ಅವರ ಬಗ್ಗೆ ನೀಡಿದ್ದ ಹೇಳಿಕೆ ಭಾರಿ ಚರ್ಚೆಗೆ ಒಳಗಾಗಿತ್ತು.

ಹಾಗಿದ್ದರೂ ಸಹ ಗ್ರ್ಯಾಂಡ್ ಫಿನಾಲೆಗೆ ಬಂದಿದ್ದ ರಕ್ಷಕ್ ಜೊತೆಗೆ ಪರೋಕ್ಷವಾಗಿ ವಿಚಾರದ ಬಗ್ಗೆ ಮಾತನಾಡಿದ್ದ ಸುದೀಪ್ ಅವರು ಸೂಕ್ಷ್ಮವಾಗಿ ತಿಳಿಸಿದ್ದರು. ವೇದಿಕೆ ಮೇಲೆ ರಕ್ಷಕ್ ಕ್ಷಮೆ ಕೂಡ ಕೇಳಿದ್ದರು. ಇದೆಲ್ಲವೂ ಒಂದು ಕಡೆಯಾದರೆ, ಇದಾದ ಮೇಲೆ ನಡೆದಿರುವ ಘಟನೆ ಕಿಚ್ಚ ಸುದೀಪ್ ಅವರ ಮೇಲೆ ನಮಗಿರುವ ಗೌರವವನ್ನು ಜಾಸ್ತಿ ಮಾಡುತ್ತದೆ ಎಂದು ಹೇಳಿದರೆ ಖಂಡಿತ ತಪ್ಪಾಗುವುದಿಲ್ಲ..

ಫಿನಾಲೆ ಎಪಿಸೋಡ್ ಗಳು ಮುಗಿದ ಬಳಿಕ ರಕ್ಷಕ್ ಜೊತೆಗೆ ಮಾತನಾಡಿ, ಅವರಿಗೆ ಬುದ್ಧಿವಾದ ಹೇಳಿರುವ ಕಿಚ್ಚ ಸುದೀಪ್ ಅವರು ಒಂದು ದುಬಾರಿ ಗಿಫ್ಟ್ ಅನ್ನು ಕೂಡ ನೀಡಿದ್ದಾರೆ. ಈ ಹಿಂದೆ ಬಿಗ್ ಬಾಸ್ ವೇದಿಕೆಯಲ್ಲಿ ಖುದ್ದು ಸುದೀಪ್ ಅವರೇ ಧರಿಸಿದ್ದ ಗಾಗಲ್ ಅನ್ನು ರಕ್ಷಕ್ ಗೆ ಗಿಫ್ಟ್ ಆಗಿ ನೀಡಿದ್ದಾರೆ ಕಿಚ್ಚ ಸುದೀಪ್. ಈ ಬಗ್ಗೆ ರಕ್ಷಕ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಜೊತೆಗೆ ಪೋಸ್ಟ್ ಮಾಡಿದ್ದರು.

ಸುದೀಪ್ ಅವರು ಬರ್ಬರಿ ಬ್ರ್ಯಾಂಡ್ ನ ಗಾಗಲ್ ಅನ್ನು ರಕ್ಷಕ್ ಗೆ ಗಿಫ್ಟ್ ನೀಡಿದ್ದು, ಇದನ್ನು ತಿಳಿದ ಅಭಿಮಾನಿಗಳು ಆ ಗಾಗಲ್ ಬೆಲೆ ಎಷ್ಟಿರಬಹುದು ಎಂದು ಹುಡುಕಾಡಿದ್ದಾರೆ. ಅದಕ್ಕೀಗ ಉತ್ತರ ಸಿಕ್ಕಿದ್ದು, ಸುದೀಪ್ ಅವರು ಗಿಫ್ಟ್ ನೀಡಿರುವ ಆ ಗಾಗಲ್ಸ್ ಬೆಲೆ ಬರೋಬ್ಬರಿ 16,700 ರೂಪಾಯಿ ಎಂದು ತಿಳಿದುಬಂದಿದೆ. ಸುದೀಪ್ ಅವರ ಒಳ್ಳೆಯತನವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ ಎಂದರೆ ತಪ್ಪಲ್ಲ.

Leave A Reply

Your email address will not be published.