Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿಯ ಸಿದ್ದೇಗೌಡ್ರು ಪಾತ್ರದಲ್ಲಿ ನಟಿಸುತ್ತಿರುವವರು ಯಾರು? ಇವರ ಬಗ್ಗೆ ಗೊತ್ತಾ?

0 57

Lakshmi Nivasa: ಜೀಕನ್ನಡ್ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರವಾಹಿ ಲಕ್ಷ್ಮೀ ನಿವಾಸ. ಈ ಧಾರಾವಾಹಿಯ ಮೂಲಕ ಬಹಳ ವರ್ಷಗಳ ನಂತರ ಚೈತ್ರದ ಪ್ರೇಮಾಂಜಲಿ ಸಿನಿಮಾ ನಾಯಕಿ ಶ್ವೇತಾ ಅವರು ಕನ್ನಡಕ್ಕೆ ವಾಪಸ್ ಬಂದಿದ್ದಾರೆ. ಶುರುವಾದ ಕೆಲವೇ ವಾರಗಳಲ್ಲಿ ಟಿಆರ್ಪಿ ನಲ್ಲಿ ಕೂಡ ಮೊದಲ ಸ್ಥಾನಕ್ಕೆ ತಲುಪಿದೆ ಲಕ್ಷ್ಮೀ ನಿವಾಸ. ಈ ಧಾರಾವಾಹಿಯ ಎಲ್ಲಾ ಪಾತ್ರಗಳು ಕೂಡ ಜನರಿಗೆ ಇಷ್ಟವಾಗಿದೆ.

ಈ ಧಾರವಾಹಿಯ ಮುಖ್ಯಪಾತ್ರಗಳಲ್ಲಿ ಒಂದು ಸಿದ್ದೇಗೌಡ್ರು ಪಾತ್ರ. ಪಕ್ಕಾ ಮಾಸ್ ಹಳ್ಳಿ ಹುಡುಗನ ಪಾತ್ರ ಇದು, ಜನರಿಗೆ ಸಿದ್ದೇಗೌಡ್ರ ಖಡಕ್ ಲುಕ್, ಹಳ್ಳಿ ಶೈಲಿ ಡೈಲಾಗ್ ಗಳು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈಗ ಸಿದ್ದೇಗೌಡರಿಗೆ ಲಕ್ಷ್ಮಿ ಅವರ ಮಗಳು ಭಾವನಾ ಮೇಲೆ ಲವ್ ಆಗಿದೆ. ಆದರೆ ಭಾವನಾ ಲಕ್ಷ್ಮೀ ಮಗಳು ಎಂದು ಸಿದ್ದೇಗೌಡರಿಗೆ ಗೊತ್ತಿಲ್ಲ. ಭಾವನಾ ಸಿದ್ದು ಲವ್ ಸ್ಟೋರಿ ಈಗಷ್ಟೇ ಶುರುವಾಗಿದೆ.

ಭಾವನಾಗೆ ಸಿದ್ದು ಅಂದ್ರೆ ಇನ್ನು ಇಷ್ಟವಿಲ್ಲ. ಮುಂದಿನ ದಿನಗಳಲ್ಲಿ ಈ ಸ್ಟೋರಿ ಹೇಗೆ ಹೋಗುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ಈ ಸಿದ್ದೇಗೌಡ್ರು ಪಾತ್ರದಲ್ಲಿ ನಟಿಸುತ್ತಿರುವವರು ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈ ನಟನ ಹೆಸರು ಧನಂಜಯಾ. ಇವರು ಡಾಲಿ ಧನಂಜಯ ಅಲ್ಲ. ಈಗಾಗಲೇ ಜಿಲ್ ಜಿಲ್ ಎನ್ನುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ವಾಸಂತಿ ನಲಿದಾಗ ಸಿನಿಮಾದಲ್ಲಿ ವಿಲ್ಲನ್ ಆಗಿಯೂ ನಟಿಸಿದ್ದಾರೆ.

ಈ ಸಿನಿಮಾಗಳಿಂದ ಅವರಿಗೆ ಯಶಸ್ಸು ಸಿಗಲಿಲ್ಲ, ಆದರೆ ಲಕ್ಷ್ಮೀ ನಿವಾಸ ಧಾರವಾಹಿಯ ಸಿದ್ದೇಗೌಡ್ರು ಪಾತ್ರ ಇವರಿಗೆ ನಟನೆ ಜೊತೆಗೆ ಹೆಚ್ಚಿನ ಜನಪ್ರಿಯತೆಯನ್ನ ತಂದುಕೊಟ್ಟಿದೆ. ಮುಂದೆ ಇನ್ನು ಒಳ್ಳೆಯ ಪ್ರಾಜೆಕ್ಟ್ ಗಳು ಇವರಿಗೆ ಸಿಗಲಿ, ಯಶಸ್ಸು ಇವರ ಜೊತೆಗೀರಲಿ ಎಂದು ಹಾರೈಸೋಣ.

Leave A Reply

Your email address will not be published.