Sridevi: ಶ್ರೀದೇವಿ ಅವರು ಸ್ಟಾರ್ ಆಗಿದ್ದು ಆ ನಟಿ ಮಾಡಿದ ಒಂದು ತಪ್ಪಿನಿಂದ! ನಡೆದಿದ್ದೇನು ಗೊತ್ತಾ?

0 54

Sridevi: ಬಾಲಿವುಡ್ ನ ಸ್ಟಾರ್ ನಟಿ, ಅತಿಲೋಕ ಸುಂದರಿ ಶ್ರೀದೇವಿ ಅವರ ಸಿನಿಮಾಗಳು ಮತ್ತು ಹಾಡುಗಳು ಇಂದಿಗೂ ಎಲ್ಲರ ಫೇವರೆಟ್ ಎಂದರೆ ತಪ್ಪಲ್ಲ. ಶ್ರೀದೇವಿ ಅವರು ಇಂದು ನಮ್ಮೊಡನೆ ಇಲ್ಲ, ಆದರೆ ಅವರ ನೆನಪುಗಳು ಮತ್ತು ಸಿನಿಮಾಗಳು ಶ್ರೀದೇವಿ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಶ್ರೀದೇವಿ ಅವರ ಬಗ್ಗೆ ಆಗಾಗ ಕೆಲವು ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ಶ್ರೀದೇವಿ ಅವರ ಬಗ್ಗೆ ಮತ್ತೊಂದು ವಿಚಾರ ಚರ್ಚೆ ಆಗುತ್ತಿದೆ.

ಶ್ರೀದೇವಿ ಅವರಿಗೆ ಮಕ್ಕಳ ಮೇಲೆ ಬಹಳ ಪ್ರೀತಿ ಇತ್ತು. ಮುದ್ದಿನ ಜೊತೆಗೆ ಬಹಳ ಸ್ಟ್ರಿಕ್ಟ್ ಆಗಿ ಶ್ರೀದೇವಿ ಅವರು ಬೆಳೆಸಿದ್ದರು. ಶ್ರೀದೇವಿ ಅವರ ಮೊದಲ ಮಗಳು ಜಾನ್ವಿ ಕಪೂರ್ ಅವರು ಧಡಕ್ ಸಿನಿಮಾ ಮೂಲಕ ನಾಯಕಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಜಾನ್ವಿ ಅವರಿಗೆ ಈಗ 26 ವರ್ಷ, ಬಾಲಿವುಡ್ ನಲ್ಲಿ ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸುವ ಸಿನಿಮಾ ಮೂಲಕ ಒಳ್ಳೆಯ ನಟಿ ಎಂದು ಹೆಸರು ಪಡೆದಿದ್ದಾರೆ.

ಇನ್ನು ಶ್ರೀದೇವಿ ಅವರ ಎರಡನೇ ಮಗಳು ಖುಷಿ ಕಪೂರ್ ಸಹ ಶೀಘ್ರದಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇದೀಗ ಶ್ರೀದೇವಿ ಅವರು ಬಾಲಿವುಡ್ ನಲ್ಲಿ ಸ್ಟಾರ್ ಆಗಿದ್ದು ಹೇಗೆ ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಶ್ರೀದೇವಿ ಅವರಿಗೆ ಕೆರಿಯರ್ ಆರಂಭದಲ್ಲಿ ಬಾಲಿವುಡ್ ನಲ್ಲಿ ಹೇಳಿಕೊಳ್ಳುವಂತ ಅವಕಾಶಗಳು ಸಿಗುತ್ತಿರಲಿಲ್ಲ, ಅವರ ಹಿಂದಿ ಚೆನ್ನಾಗಿರಲಿಲ್ಲ ಎನ್ನುವ ಕಾರಣಕ್ಕೆ ಶ್ರೀದೇವಿ ಅವರಿಗೆ ಹೆಚ್ಚಿನ ಆಫರ್ ಗಳು ಸಿಗುತ್ತಿರಲಿಲ್ಲ.

ಆದರೆ ನಟಿ ರೇಖಾ ಅವರು ಮಾಡಿದ ತಪ್ಪಿನಿಂದ ಶ್ರೀದೇವಿ ಅವರು ಸ್ಟಾರ್ ಆದರು. ಹೌದು, ಜಿತೇಂದ್ರ ಅವರ ಹಿಮ್ಮತ್ ವಾಲಾ ಸಿನಿಮಾಗೆ ರೇಖಾ ಅವರು ಮೊದಲ ಆಯ್ಕೆ ಆಗಿದ್ದರು, ಆದರೆ ಆ ವೇಳೆ ರೇಖಾ ಅವರು ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇದ್ದ ಕಾರಣ, ಹಿಮ್ಮತ್ ವಾಲಾ ಸಿನಿಮಾ ಒಪ್ಪಿಕೊಳ್ಳಲಿಲ್ಲ, ಹಾಗೆಯೇ ಜಿತೇಂದ್ರ ಅವರ ಜೊತೆಗೆ ಮಾತನಾಡುವಾಗ, ಸಡನ್ ಆಗಿ ಶ್ರೀದೇವಿ ಅವರ ಹೆಸರನ್ನು ಹೇಳಿದರಂತೆ. ಈ ಕಾರಣಕ್ಕೆ ಶ್ರೀದೇವಿ ಅವರಿಗೆ ಹಿಮ್ಮತ್ ವಾಲಾ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಆ ಸಿನಿಮಾದ ಯಶಸ್ಸಿನಿಂದ ಬಾಲಿವುಡ್ ನಲ್ಲಿ ಶ್ರೀದೇವಿ ಅವರು ಸ್ಟಾರ್ ಹೀರೋಯಿನ್ ಆದರು, ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಅವರಿಗೆ ಸಿಕ್ಕಿತು. ಮೊದಲಿಗೆ ಶ್ರೀದೇವಿ ಅವರ ಹಿಂದಿ ಮಾತುಗಾರಿಗೆ ಚೆನ್ನಾಗಿಲ್ಲ ಎಂದು ಅವರಿಗೆ ಮತ್ತೊಬ್ಬರು ಡಬ್ ಮಾಡುತ್ತಿದ್ದರು, ಆದರೆ ಹಿಮ್ಮತ್ ವಾಲಾ ನಂತರ ಎಲ್ಲವೂ ಬದಲಾಯಿತು.

Leave A Reply

Your email address will not be published.