Loosemada Yogesh: ನಟ ಲೂಸ್ ಮಾದ ಯೋಗೇಶ್ ಅವರ ಪತ್ನಿ ಯಾರು ಗೊತ್ತಾ?

0 18

Loosemada Yogesh: ದುನಿಯಾ ಸಿನಿಮಾದ ಲೂಸ್ ಮಾದ ಪಾತ್ರದ ಮೂಲಕ ಭಾರಿ ಸದ್ದು ಮಾಡಿದವರು ನಟ ಯೋಗೇಶ್. ಈ ಪಾತ್ರ ಎಷ್ಟು ಫೇಮಸ್ ಆಯಿತು ಎಂದರೆ ಯೋಗೇಶ್ ಅವರಿಗೆ ಲೂಸ್ ಮಾದ ಎಂದೇ ಹೆಸರು ಬಂದಿತ್ತು. ಎಲ್ಲರೂ ಇವರನ್ನು ಲೂಸ್ ಮಾದ ಯೋಗಿ ಎಂದೇ ಕರೆಯುವುದಕ್ಕೆ ಶುರು ಮಾಡಿದರು. ಯೋಗಿ ಅವರ ಪತ್ನಿ ಯಾರು ಗೊತ್ತಾ?

ನಟ ಯೋಗೇಶ್ ಅವರು ದುನಿಯಾ ಸಿನಿಮಾದಲ್ಲಿ ಸಣ್ಣ ವಿಲ್ಲನ್ ಪಾತ್ರದಲ್ಲಿ ನಟಿಸಿದರು. ಬಳಿಕ ನಂದಾ ಲವ್ಸ್ ನಂದಿತಾ ಸಿನಿಮಾ ಮೂಲಕ ಹೀರೋ ಆಗಿಯೂ ಎಂಟ್ರಿ ಕೊಟ್ಟರು. ಬಳಿಕ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. ಆದರೆ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ನಟಿಸಿದ ಹುಡುಗರು ಸಿನಿಮಾ ಎಂದರೆ ತಪ್ಪಲ್ಲ.

ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಹಾಗೆಯೇ ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ ನಟ ಯೋಗಿ. ಈಗ ಇವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ, ಆಗಾಗ ಒಳ್ಳೆಯ ಪಾತ್ರಗಳಲ್ಲಿ ಮಾತ್ರ ನಟಿಸುತ್ತಾರೆ. ಇವರ ಕೆರಿಯರ್ ಬಗೆಗಿನ ಮಾಹಿತಿ ಇದು, ಲೂಸ್ ಮಾದ ಅವರ ಪರ್ಸನಲ್ ಲೈಫ್ ಹೇಗಿದೆ ಗೊತ್ತಾ?

ಲೂಸ್ ಮಾದ ಅವರ ತಾಯಿ ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಬಹುಕಾಲದ ಗೆಳತಿ ಸಾಹಿತ್ಯ ಅರಸ್ ಅವರೊಡನೆ 2017ರ ನವೆಂಬರ್ 2ರಂದು ಮದುವೆಯಾದರು ನಟ ಯೋಗಿ ಈ ಜೋಡಿಗೆ ಶ್ರೀನಿಕ ಹೆಸರಿನ ಮುದ್ದಾದ ಮಗುವಿದೆ. ಯೋಗಿ ಅವರು ಆಗಾಗ ತಮ್ಮ ಪತ್ನಿ ಹಾಗೂ ಮಗುವಿನ ಫೋಟೋಸ್ ಶೇರ್ ಮಾಡುತ್ತಾರೆ. ಅವುಗಳು ವೈರಲ್ ಆಗುತ್ತದೆ.

Leave A Reply

Your email address will not be published.