Mokshita Pai: ಅಮ್ಮನ ಜೊತೆ ಮನಾಲಿ ಪ್ರವಾಸದಲ್ಲಿ ನಟಿ ಮೋಕ್ಷಿತಾ!

0 31

Mokshita Pai: ಜೀಕನ್ನಡ ವಾಹಿನಿಯ ಗಟ್ಟಿಮೇಳ ಮತ್ತು ಜೊತೆ ಜೊತೆಯಲಿ ಧಾರಾವಾಹಿಯ ಹಾಗೆ ಪಾರೂ ಧಾರಾವಾಹಿ ಕೂಡ ಕರ್ನಾಟಕಾದ್ಯಂತ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಪಾರೂ ಧಾರಾವಾಹಿ ಒಂದು ಹಳ್ಳಿ ಹುಡುಗಿಯ ಕಥೆ, ಅಖಿಲಾಂಡೇಶ್ವರಿ ಅವರ ಮನೆಗೆ ಮನೆಕೆಲಸದವಳಾಗಿ ಬರುವ ಪಾರುವಿನ ಮುಗ್ಧತೆ, ಹಿರಿಯ ಕಲಾವಿದೆ ವಿನಯ ಪ್ರಸಾದ್ ಅವರ ಅಭಿನಯ, ಹಾಗೂ ಇತರ ಕಲಾವಿದರ ಅಭಿನಯ ಎಲ್ಲಾ ವೀಕ್ಷಕರ ಮನಗೆದ್ದಿದೆ.

ಪಾರೂ ಧಾರಾವಾಹಿಯಲ್ಲಿ ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿರುವ ಕಥಾನಾಯಕಿ ಪಾರು ಪಾತ್ರ ನಿಭಾಯಿಸಿರುವ ನಟಿಯ ನಿಜವಾದ ಹೆಸರು ಮೋಕ್ಷಿತಾ ಪೈ. ಇವರು ಮೂಲತಃ ಮಂಗಳೂರಿನವರು. ಮೋಕ್ಷಿತಾ ವಿದ್ಯಾಭ್ಯಾಸ ಮುಗಿಸಿದ್ದು ಮಂಗಳೂರಿನಲ್ಲೇ. ಮೊಕ್ಷಿತಾರದ್ದು ಅವರದ್ದು ಪುಟ್ಟ ಕುಟುಂಬ. ತಂದೆ ತಾಯಿ ಮತ್ತು ತಮ್ಮ. ಮೋಕ್ಷಿತಾ ಅವರ ತಮ್ಮ ವಿಕಲಚೇತನ ಮಗು, ತಮ್ಮನನ್ನು ತಾಯಿಯಿಂತೆ ನೋಡಿಕೊಳ್ಳುವ ಮಾತೃಹೃದಯಿ ಮೋಕ್ಷಿತಾ. ತಮ್ಮ ಎಂದರೆ ಮೋಕ್ಷಿತಾರಿಗೆ ಪ್ರಪಂಚ.

ಮೋಕ್ಷಿತಾರ ಲೈಫ್ ನಲ್ಲಿ ತಮ್ಮ ಬಹಳ ಸ್ಪೆಷಲ್. ಧಾರಾವಾಹಿ ಚಿತ್ರೀಕರಣ ಇಲ್ಲದೆ ಇದ್ದಾಗ ಸಿಗುವ ಬಿಡುವಿನ ಸಮಯವನ್ನು ಸಂಪೂರ್ಣವಾಗಿ ತಮ್ಮನ ಜೊತೆ ಮತ್ತು ಕುಟುಂಬದ ಜೊತೆ ಕಳೆಯುತ್ತಾರೆ ಮೋಕ್ಷಿತಾ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಮೋಕ್ಷಿತಾ, ತಮ್ಮ ಫೋಟೋಗಳು, ಫ್ಯಾಮಿಲಿ ಜೊತೆಗಿನ ಫೋಟೋಗಳು ಹಾಗೂ ಧಾರಾವಾಹಿ ಚಿತ್ರೀಕರಣ ಸಮಯದ ಫೋಟೋಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ.

ಮೋಕ್ಷಿತಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಬೇಸ್ ಸಹ ಇದೆ. ಇದೀಗ ಮೋಕ್ಷಿತಾ ಅವರು ಅಮ್ಮನ ಜೊತೆಗೆ ಮನಾಲಿಗೆ ಹೋಗಿ ಎಂಜಾಯ್ ಮಾಡುತ್ತಿದ್ದು, ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ಈಗ ವೈರಲ್ ಆಗಿದೆ.

Leave A Reply

Your email address will not be published.