Shashirekha: ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಡೋಲೋ650 ಖ್ಯಾತಿಯ ಶಶಿರೇಖಾ!

0 14

Shashirekha: ಕರ್ನಾಟಕದಲ್ಲಿ ಕೋವಿಡ್ ಸೋಂಕು ಜಾಸ್ತಿ ಇದ್ದಾಗ ಕರೊನಾ ದವರಿಗೆ ಕೊಡೋದು ಡೋಲೋ650 ಮಾತ್ರೆ, ಬಿಸಿ ರಾಗಿ ಹಿಟ್ಟು ಎಂದು ಹೇಳೋ ಮೂಲಕ ಶಶಿರೇಖ ಎನ್ನುವ ಮಹಿಳೆ ವೈರಲ್ ಆಗಿದ್ದರು. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ಹಾಗೆ, ಆಕೆ ಆ ಜನಪ್ರಿಯತೆ ಬಳಸಿಕೊಂಡು ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದರು. ಶಶಿರೇಖಾ ಇಂದು ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ.

ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟು ರೀಲ್ಸ್ ಮಾಡುತ್ತಿದ್ದರು ಶಶಿರೇಖಾ, ಇದೀಗ ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ 1 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ. ಅಷ್ಟೇ ಅಲ್ಲದೆ, ಯೂಟ್ಯೂಬ್ ಚಾನೆಲ್ ಅನ್ನು ಕೂಡ ಈಕೆ ಶುರು ಮಾಡಿದ್ದು, ಅಲ್ಲಿಯೂ ಒಂದಷ್ಟು ಚಂದಾದಾರರನ್ನು ಹೊಂದಿದ್ದಾರೆ ಶಶಿರೇಖಾ. ಹೀಗೆ ತನಗೆ ಸಿಕ್ಕ ಪ್ಲಾಟ್ ಫಾರ್ಮ್ ಅನ್ನು ಸರಿಯಾಗಿ ಬಳಸಿಕೊಂಡು ಇಂದು ಒಂದು ಸಿನಿಮಾ ಹೀರೋಯಿನ್ ಆಗಿದ್ದಾರೆ.

ಹೆಚ್.ಡಿ ಕೋಟೆ ಮೂಲದ ಚೇತನ್ ಅವರು ನಿರ್ದೇಶನ ಮಾಡುತ್ತಿರುವ ಸೌಜನ್ಯ ಸಿನಿಮಾದಲ್ಲಿ ಶಶಿಕಲಾ ನಟಿಸುತ್ತಿದ್ದು, ಮೈಸೂರಿನಲ್ಲಿ ಟೈಟಲ್ ಅನಾವರಣಗೊಂಡಿದೆ. ಈ ಟೈಟಲ್ ನೋಡಿದರೆ ಸೂಕ್ಷ್ಮವಾದ ಕಥೆ ಎಂದು ಗೊತ್ತಾಗುತ್ತಿದ್ದು, ಒಟ್ಟಿನಲ್ಲಿ ಶಶಿಕಲಾ ಈಗ ಹೀರೋಯಿನ್ ಆಗಿದ್ದಾರೆ.

Leave A Reply

Your email address will not be published.