Nagma: ಗುರುತು ಸಿಗದಷ್ಟು ಬದಲಾಗಿ ಹೋಗಿದ್ದಾರೆ ನೋಡಿ ನಟಿ ನಗ್ಮಾ! ಫೋಟೋಸ್ ನೋಡಿ ಶಾಕ್ ಆದ ಫ್ಯಾನ್ಸ್!

0 37

Nagma: ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸೆಲೆಬ್ರಿಟಿಗಳ ಫೋಟೋಸ್ ವೈರಲ್ ಆಗುತ್ತಲೇ ಇರುತ್ತದೆ. ಅವರ ಹಳೆಯ ಫೋಟೋಗಳು ಅಥವಾ ಇತ್ತೀಚಿನ ಫೋಟೋಗಳು ಕೂಡ ವೈರಲ್ ಆಗುತ್ತದೆ. ಇದೀಗ 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್ ನಲ್ಲಿ ಕೂಡ ಹೆಸರು ವಾಸಿ ಆಗಿದ್ದ ನಟಿ ನಗ್ಮಾ ಅವರ ಫೋಟೋಸ್ ವೈರಲ್ ಆಗಿದ್ದು, ಹೇಗಿದ್ದ ನಟಿ ಹೇಗಾಗಿದ್ದಾರೆ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.

ನಟಿ ನಗ್ಮಾ ಮೂಲತಃ ಉತ್ತರ ಭಾರತದವರು,, ಇವರ ತಂದೆ ಹಿಂದೂ ತಾಯಿ ಮುಸ್ಲಿಂ. ಇವರು ರಾಜಮನೆತನಕ್ಕೆ ಸೇರಿದವರು. ನಟನೆಯಲ್ಲಿ ಆಸಕ್ತಿ ಇದ್ದ ನಗ್ಮಾ ಅವರು ಹಿಂದಿ, ಕನ್ನಡ, ತೆಲುಗು, ತಮಿಳು ಎಲ್ಲಾ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಕನ್ನಡಕ್ಕೆ ಇವರು ಎಂಟ್ರಿ ಕೊಟ್ಟಿದ್ದು ಶಿವ ರಾಜ್ ಕುಮಾರ್ ಅವರ ಕುರುಬನ ರಾಣಿ ಸಿನಿಮಾ ಮೂಲಕ. ಈ ಸಿನಿಮಾ ಮೂಲಕ ಕನ್ನಡದಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ಶಿವಣ್ಣ, ವಿಷ್ಣುವರ್ಧನ್ ಅವರು, ರವಿಚಂದ್ರನ್ ಅವರೊಡನೆ ಸಿನಿಮಾಗಳಲ್ಲಿ ನಟಿಸಿದ್ದಾರೆ..

ಕನ್ನಡದಲ್ಲಿ ಮಾತ್ರವಲ್ಲದೆ ಇವರಿಗೆ ತಮಿಳು ಮತ್ತು ತೆಲುಗಿನಲ್ಲಿ ಸಹ ಅಷ್ಟೇ ದೊಡ್ಡ ಮಟ್ಟದ ಬೇಡಿಕೆ ಇತ್ತು. ಅಲ್ಲಿನ ಸ್ಟಾರ್ ಕಲಾವಿದರುಗಳ ಜೊತೆಯಲ್ಲಿ ನಟಿಸಿದ್ದರು. ಎಲ್ಲರ ಫೇವರೆಟ್ ನಟಿಯಾಗಿ, ಸೌಂದರ್ಯದಿಂದ ಅಭಿಮಾನಿಗಳನ್ನು ಪಡೆದಿದ್ದ ನಗ್ಮಾ ಅವರು ನಟನೆಯಿಂದ ಸ್ವಲ್ಪ ದೂರವಾದ ಬಳಿಕ ರಾಜಕೀಯಕ್ಕೂ ಎಂಟ್ರಿ ಕೊಟ್ಟರು. ಆದರೆ ಅಲ್ಲಿ ಸಹ ಇವರಿಗೆ ದೊಡ್ಡದಾಗಿ ಹೆಸರು ಸಿಗಲಿಲ್ಲ. ಪ್ರಸ್ತುತ ಎಲ್ಲದದಿಂದಲು ದೂರವೇ ಉಳಿದಿದ್ದಾರೆ.

ನಟಿ ನಗ್ಮಾ ಅವರು ಈಗೆಲ್ಲಾ ಹೊರಗಡೆ ಕಾಣಿಸಿಕೊಳ್ಳುವುದು ಸಹ ಕಡಿಮೆಯೇ. ಆದರೆ ಇತ್ತೀಚೆಗೆ ಇವರು ಹೊರಗಡೆ ಬಂದಿರುವ ಕೆಲವು ಫೋಟೋಸ್ ವೈರಲ್ ಆಗಿದ್ದು, ಗುರುತು ಸಿಗದ ಹಾಗೆ ಬದಲಾಗಿ ಹೋಗಿದ್ದಾರೆ ನಟಿ ನಗ್ಮಾ. 90ರ ದಶಕದ ಬ್ಯೂಟಿ ಇವರೇನಾ ಎಂದು ಅಭಿಮಾನಿಗಳು ಸಹ ಶಾಕ್ ಆಗಿದ್ದಾರೆ.

Leave A Reply

Your email address will not be published.