Health Tips: ಅಕಸ್ಮಾತ್ ಚುಯಿಂಗ್ ಗಂ ನುಂಗಿದ್ರೆ ಆರೋಗ್ಯದಲ್ಲಿ ಏನಾಗುತ್ತೆ?

0 42

Health Tips: ಟೈಮ್ ಪಾಸ್ ಗಾಗಿ ಕೆಲವರು ಚುಯಿಂಗ್ ಗಂ ತಿನ್ನುತ್ತಾರೆ. ಇನ್ನು ಕೆಲವರಿಗೆ ಚುಯಿಂಗ್ ಗಂ ತಿನ್ನುವ ಅಭ್ಯಾಸ ಕೂಡ ಇರುತ್ತದೆ. ಸಾಮಾನ್ಯವಾಗಿ ಎಲ್ಲರೂ ಕೂಡ ಚುಯಿಂಗ್ ಗಂ ತಿನ್ನಬಾರದು ಅದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಒಂದು ವೇಳೆ ಚುಯಿಂಗ್ ಗಂ ನುಂಗಿದರೆ ಆರೋಗ್ಯಕ್ಕೆ ಹಾನಿಕರ ಎಂದು ಕೂಡ ಹೇಳುತ್ತಾರೆ. ಈ ಮಾತು ನಿಜಾನ? ಚುಯಿಂಗ್ ಗಂ ನುಂಗಿದ್ರೆ ಏನಾಗುತ್ತೆ? ಆರೋಗ್ಯಕ್ಕೆ ಅಪಾಯ ಆಗುತ್ತಾ?ತಿಳಿಸುತ್ತೇವೆ ನೋಡಿ..

ಚುಯಿಂಗ್ ಗಂ ಮೃದುವಾದ ವಸ್ತು, ಇದನ್ನು ಆಗಿಯಬೇಕೆ ಹೊರತು, ನುಂಗಬಾರದು. ಕೆಲವೊಮ್ಮೆ ಶಾಲೆಯಲ್ಲಿದ್ದಾಗ ಅಥವಾ ಇನ್ನಿತರ ಸಮಯದಲ್ಲಿ ಚುಯಿಂಗ್ ಗಮ್ ಅನ್ನು ನುಂಗಿರುವ ಘಟನೆ ನಡೆದಿರುತ್ತದೆ. ಒಂದು ವೇಳೆ ಚುಯಿಂಗ್ ಗಂ ನುಂಗಿದರೆ ಅದು ವರ್ಷಗಳ ಕಾಲ ಹೊಟ್ಟೆಯಲ್ಲೇ ಇರುತ್ತದೆ, ಬೇಗ ಕರಗುವುದಿಲ್ಲ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಪದೇ ಪದೇ ಚುಯಿಂಗ್ ಗಂ ನುಂಗಬಾರದು ಎಂದು ನಿಮಗೆ ನೆನಪಲ್ಲಿ ಇರಲಿ…

ಹೆಚ್ಚಾಗಿ ಚುಯಿಂಗ್ ಗಮ್ ನುಂಗುವುದರಿಂದ ಕರುಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಶುರುವಾಗಬಹುದು. ಚುಯಿಂಗ್ ಗಮ್ ಸ್ಟಿಕ್ ಆಗುವ ಪದಾರ್ಥ ಆಗಿದೆ, ಹಾಗಾಗಿ ಇದು ನಿಮ್ಮ ದೇಹದ ಜೀರ್ಣಕ್ರಿಯೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನೀವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದೆ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವ ಹಾಗೆ ಆಗಬಹುದು. ಹುಷಾರಾಗಿರಿ.

Leave A Reply

Your email address will not be published.