Beauty Tips: ಈ ರೀತಿ ಮಾಡಿದ್ರೆ 50ರ ಹರೆಯದಲ್ಲೂ ಕೂಡ ಯಂಗ್ ಆಗಿ ಕಾಣುತ್ತೀರಿ!

0 20

Beauty Tips: ಸಾಮಾನ್ಯವಾಗಿ ಎಲ್ಲರೂ ಕೂಡ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ನೋಡಲು ಸುಂದರವಾಗಿ ಕಾಣಬೇಕು ಎಂದು ಆಸೆ ಇರುತ್ತದೆ. ಆದರೆ ವಯಸ್ಸಾದ ಹಾಗೆ ನಮ್ಮ ಚರ್ಮ, ಮುಖಚರ್ಯೆ ಎಲ್ಲವೂ ಬದಲಾಗುತ್ತದೆ. ಆದರೆ ವೈದ್ಯರು ಹೇಳುವ ಹಾಗೆ ಪ್ರತಿದಿನ ನೀವು ಈ ಕೆಲಸಗಳನ್ನು ಮಾಡಿದರೆ, ನೀವು 50ರ ಹರೆಯ ಪ್ರವೇಶಿಸಿದ ಮೇಲು ಕೂಡ ಯಂಗ್ ಆಗಿ ಕಾಣಬಹುದು. ವೈದ್ಯರು ನೀಡಿರುವ ಆ ಸಲಹೆಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ಕೆಮಿಕಲ್ ಪ್ರಾಡಕ್ಟ್ಸ್ ಇಂದ ದೂರವಿರಿ: ಸುಂದರವಾಗಿ ಕಾಣಬೇಕು ಎಂದು ಹೊರಗಡೆ ಸಿಗುವ ಕೆಮಿಕಲ್ ಮಿಶ್ರಿತ ಬ್ಯೂಟಿ ಪ್ರಾಡಕ್ಟ್ಸ್ ಗಳನ್ನು ಬಳಸಬೇಡಿ. ನ್ಯಾಚುರಲ್ ಆಗಿ ಸಿಗುವಂಥ ಪದಾರ್ಥಗಳಿಗೆ ಪ್ರಾಮುಖ್ಯತೆ ಕೊಡಿ. ಇದು ಮುಖ್ಯವಾಗುತ್ತದೆ.

ಆಹಾರ ಕ್ರಮ: ನೀವು ಸುಂದರವಾಗಿ ಇರಬೇಕು ಎಂದರೆ ಬಾಹ್ಯ ಸೌಂದರ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟೇ ಕಾಳಜಿಯನ್ನು ನಿಮ್ಮ ಆಹಾರ ಪದ್ಧತಿಯ ಬಗ್ಗೆ ವಹಿಸಬೇಕು. ಬ್ಯಾಲೆನ್ಸ್ಡ್ ಡಯೆಟ್ ಸೇವಿಸಬೇಕು. ಆಗ ನಿಮ್ಮ ಸ್ಕಿನ್ ಕೂಡ ಚೆನ್ನಾಗಿರುತ್ತದೆ. ಸ್ಕಿನ್ ಚೆನ್ನಾಗಿರಬೇಕು ಎಂದರೆ ಹೆಚ್ಚಾಗಿ ಉಗುರು ಬೆಚ್ಚಗಿರುವ ನೀರು ಸೇವಿಸಿ.

ಮನೆಯಲ್ಲೇ ಫೇಸ್ ಮಾಸ್ಕ್ ತಯಾರಿಸಿ: ಹೊರಗಿನಿಂದ ಫೇಸ್ ಪ್ಯಾಕ್ ಖರೀದಿ ಮಾಡಿ ತರುವುದಕ್ಕಿಂತ ಮನೆಯಲ್ಲಿ ನೀವೇ ಫೇಸ್ ಮಾಸ್ಕ್ ತಯಾರಿಸಿ. ಆಲೂಗಡ್ಡೆ, ಬಾಳೆಹಣ್ಣು, ಜೇನುತುಪ್ಪ ಇವುಗಳನ್ನು ಬಳಸಿ ಮಾಡುವ ಫೇಸ್ ಮಾಸ್ಕ್ ನಿಮ್ಮ ತ್ವಚೆಗೆ ಒಳ್ಳೆಯದು. ಫ್ರೆಶ್ ಆಗಿರುವ ಹಣ್ಣಿನಿಂದ ಮಾಡಿರುವ ಜ್ಯುಸ್ ಸೇವಿಸಿ, ತರಕಾರಿ ಸೇವಿಸಿ. ಇದೆಲ್ಲವೂ ಸೌಂದರ್ಯಕ್ಕೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.

ವ್ಯಾಯಾಮ: ಸೌಂದರ್ಯದ ಜೊತೆಗೆ ದೈಹಿಕ ಆರೋಗ್ಯ ಕೂಡ ತುಂಬಾ ಮುಖ್ಯ. ಪ್ರತಿದಿನ ನಿಮ್ಮ ಫಿಟ್ನೆಸ್ ಗಾಗಿ ವ್ಯಾಯಾಮ ಮಾಡಲು ಇಂತಿಷ್ಟು ಸಮಯವನ್ನು ಮೀಸಲಾಗಿ ಇಡಬೇಕು. ಇದರಿಂದ ನೀವು ದೈಹಿಕವಾಗಿ ಫಿಟ್ ಆಗಿರಬಹುದು. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

Leave A Reply

Your email address will not be published.