Dboss: ಡಿಬಾಸ್ ಹುಟ್ಟುಹಬ್ಬಕ್ಕೆ ಬರೋ ಅಭಿಮಾನಿಗಳಿಗೆಲ್ಲ ಹಬ್ಬದೂಟ! 2000 ಟನ್ ಅಕ್ಕಿ, 1000 ಲೀಟರ್ ಹಾಲು ಬಳಕೆ!

0 58

Dboss: ನಟ ದರ್ಶನ್ ಅವರ ಒಳ್ಳೆತನದ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ದರ್ಶನ್ ಅವರು ತೆರೆಮೇಲೆ ಹೇಗೆ ಹೀರೋ ಆಗಿದ್ದಾರೋ ತೆರೆ ಹಿಂದೆ ಕೂಡ ರಿಯಲ್ ಲೈಫ್ ಹೀರೋ. ಯಾರೇ ಕಷ್ಟದಲ್ಲಿದ್ದರು, ಆ ವಿಷಯ ದರ್ಶನ್ ಅವರಿಗೆ ಗೊತ್ತಾದರೆ, ಸಹಾಯ ಮಾಡದೆ ಸುಮ್ಮನೆ ಇರುವವರಲ್ಲ. ಹಾಗೆಯೇ ಸ್ನೇಹಿತರು ಎಂದರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಫ್ರೆಂಡ್ಸ್ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ.

ಹಾಗೆಯೇ ಜನರಿಗೂ ಸಹಾಯ ಮಾಡುತ್ತಾರೆ. ಸಹಾಯ ಕೇಳಿಕೊಂಡು ಮನೆಯ ಹತ್ತಿರ ಹೋದವರಿಗೆ ಡಿಬಾಸ್ ದರ್ಶನ್ ಅವರು ಸಹಾಯ ಮಾಡದೆ ವಾಪಸ್ ಕಳಿಸಿದ್ದೇ ಇಲ್ಲ. ಇಂಥ ಒಳ್ಳೆಯ ಮನಸ್ಸಿನ ಕಲಾವಿದನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿ ವರ್ಷ ದರ್ಶನ್ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸುತ್ತಾರೆ. ಈ ವರ್ಷವೂ ದರ್ಶನ್ ಅವರ ಮನೆ ಮುಂದೆ ಅಭಿಮಾನಿಗಳ ದಂಡೇ ಬಂದಿದೆ.

ಮಧ್ಯರಾತ್ರಿ ಇಂದಲೇ ಅಭಿಮಾನಿಗಳು ದರ್ಶನ್ ಅವರ ಮನೆಯ ಹತ್ತಿರ ಬರುತ್ತಿದ್ದು, 12 ಗಂಟೆಯಿಂದ ಮಧ್ಯರಾತ್ರಿ 2 ಗಂಟೆವರೆಗೂ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ ಡಿಬಾಸ್. ಇಂದು ಬೆಳಗ್ಗೆ 10 ಗಂಟೆಯಿಂದ ಅಭಿಮಾನಿಗಳನ್ನು ಮತ್ತೆ ಭೇಟಿ ಮಾಡಲಿದ್ದಾರೆ. ದರ್ಶನ್ ಅವರ ಹುಟ್ಟುಹಬ್ಬ ಅಂದ್ರೆ ಸಾವಿರಾರು ಅಭಿಮಾನಿಗಳು ಬರುವುದು ಖಂಡಿತ, ಅವರಿಗೆಲ್ಲಾ ಡಿಬಾಸ್ ಫ್ಯಾನ್ಸ್ ಭರ್ಜರಿಯಾಗಿ ಊಟ ವ್ಯವಸ್ಥೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

ಅಭಿಮಾನಿಗಳಿಗೆ ಭರ್ಜರಿ ಊಟ ಕಾದಿದ್ದು, 2000 ಟನ್ ಅಕ್ಕಿಯಲ್ಲಿ ಟೊಮ್ಯಾಟೋ ಬಾತ್, ವೆಜಿಟೇಬಲ್ ಬಾತ್, ಜೊತೆಗೆ ಸ್ವೀಟ್ ಎಲ್ಲವನ್ನು ಮಾಡಿಸಲಾಗಿದೆ. ಅಷ್ಟೇ ಅಲ್ಲದೇ, 1000 ಲೀಟರ್ ಹಾಲು ಬಳಸಿ 500 ಲೀಟರ್ ಮೊಸರನ್ನು ಮಾಡಲಾಗಿದೆ. ಒಟ್ಟಿನಲ್ಲಿ ಡಿಬಾಸ್ ಅವರ ಹುಟ್ಟುಹಬ್ಬವನ್ನು ಈ ಬಾರಿ ಕೂಡ ಭರ್ಜರಿಯಾಗಿ ಆಚರಿಸುತ್ತಿದ್ದಾರೆ ಫ್ಯಾನ್ಸ್.

Leave A Reply

Your email address will not be published.