Nayanthara: ಖ್ಯಾತ ನಟಿ ನಯನತಾರ ಅವರ ಅಣ್ಣ ಯಾರು ಗೊತ್ತಾ? ಮೊದಲ ಸಾರಿ ಅಣ್ಣ ತಂಗಿಯ ಫೋಟೋ ವೈರಲ್!

0 32

Nayanthara: ಸೌತ್ ಇಂಡಿಯನ್ ಸಿನಿಮಾದ ಲೇಡಿ ಸೂಪರ್ ಸ್ಟಾರ್ ನಯನತಾರ ಅವರು ಅತಿಹೆಚ್ಚು ಬೇಡಿಕೆ ಇರುವ, ಸೌತ್ ಇಂಡಿಯನ್ ಸಿನಿಮಾದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ದಾರೆ. ನಯನತಾರ ಅವರು ಮದುವೆಯಾದ ಮೇಲೆ ಕೂಡ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ನಯನತಾರ ಅವರ ಫ್ಯಾಮಿಲಿ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ನಯನತಾರ ಅವರ ಅಣ್ಣ ಯಾರು ಗೊತ್ತಾ?

ನಟಿ ನಯನತಾರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕವೇ ಕಳೆದು ಹೋಗುತ್ತಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಹೆಚ್ಚಾಗಿ ನಟಿಸುವ ನಯನತಾರ ಅವರು ಕನ್ನಡದಲ್ಲಿ ಉಪೇಂದ್ರ ಅವರೊಡನೆ ಸೂಪರ್ ಸಿನಿಮಾದಲ್ಲಿ ನಟಿಸಿದರು. ಇನ್ನು ಬಾಲಿವುಡ್ ಗೆ ಕಳೆದ ವರ್ಷ ಜವಾನ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಎಲ್ಲಾ ಕಡೆ ಇವರದ್ದೇ ಹವಾ ಎಂದರೆ ತಪ್ಪಲ್ಲ..

ನಯನತಾರ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ಮದುವೆಯಾಗಿ, ಇಬ್ಬರು ಮಕ್ಕಳನ್ನು ಪಡೆದಿದ್ದಾರೆ ಎನ್ನುವುದು ಗೊತ್ತೇ ಇದೆ. ಅವಳಿ ಗಂಡು ಮಕ್ಕಳಿಗೆ ಉಯಿರ್, ಉಲಗ್ ಎಂದು ಹೆಸರಿಟ್ಟಿದ್ದಾರೆ. ಸಿನಿಮಾ ಜೊತೆಗೆ ಹೆಚ್ಚಿನ ಸಮಯವನ್ನು ಮಕ್ಕಳ ಜೊತೆಗೆ ಕಳೆಯುತ್ತಿದ್ದಾರೆ ನಯನ್. ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಾರೆ. ನಯನತಾರ ಮೂಲತಃ ಕೇರಳದವರು ಎನ್ನುವುದು ಗೊತ್ತಿರುವ ವಿಚಾರ.

ನಯನತಾರಾ ಅವರ ನಿಜವಾದ ಹೆಸರು ಡಯಾನ, ಇವರ ತಂದೆಯ ಹೆಸರು ಕುರಿಯನ್. ಚಿತ್ರರಂಗಕ್ಕೆ ಬಂದಮೇಲೆ ಹೆಸರನ್ನು ಬದಲಾಯಿಸಿಕೊಂಡರು. ಇವರ ತಾಯಿಯ ಹೆಸರು ಓಮನ ಕುರಿಯನ್. ಇನ್ನು ನಯನತಾರ ಅವರಿಗೆ ಒಬ್ಬ ಅಣ್ಣ ಸಹ ಇದ್ದಾರೆ ಅವರ ಹೆಸರು ಲೆನೋ ಕುರಿಯನ್. ನಯನತಾರ ಅವರು ತಂದೆ ತಾಯಿ ಜೊತೆಗಿರುವ ಫೋಟೋಗಳು ಹಲವು ಸಾರಿ ವೈರಲ್ ಆಗಿದೆ. ಆದರೆ ಅವರ ಅಣ್ಣನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ.

ಇದೀಗ ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರು ಸಹ ಆಕೆಯ ಅಣ್ಣ ಲೆನೋ ಕುರಿಯನ್ ಅವರ ಜೊತೆಗಿರುವ ಫೋಟೋ ಒಂದು ವೈರಲ್ ಆಗುತ್ತಿದೆ. ನಯನತಾರ ಅವರಿಗೆ ಅಣ್ಣ ಇರುವ ವಿಚಾರವೇ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಅವರೆಲ್ಲರೂ ಈ ಫೋಟೋ ನೋಡಿ ಶಾಕ್ ಆಗಿದ್ದಾರೆ.

Leave A Reply

Your email address will not be published.