Neethu Vanajakshi: ಬಿಗ್ ಬಾಸ್ ಮನೆಗೆ ಬಂದಿರುವ ನೀತು ವನಜಾಕ್ಷಿ ನಿಜಕ್ಕೂ ಯಾರು? ಅವರ ಹಿನ್ನಲೆ ಏನು ಗೊತ್ತಾ?

Written by Pooja Siddaraj

Published on:

ಈ ವರ್ಷದ ಬಿಗ್ ಬಾಸ್ ಕನ್ನಡ ಸೀಸನ್ 10 ಬಹಳಷ್ಟು ವಿಶೇಷತೆಗಳಿಂದ ಕೂಡಿದೆ. ಈ ವರ್ಷ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸುವ ಪ್ರಕ್ರಿಯೆ ಕೂಡ ವಿಭಿನ್ನವಾಗಿತ್ತು. ಈ ಸಾರಿ ಎಲ್ಲಾ ವೇದಿಕೆಯ ಮೇಲೆ ಒಟ್ಟು 19 ಸ್ಪರ್ಧಿಗಳನ್ನು ಕರೆಸಲಾಯಿತು. ಆದರೆ ಮನೆಯೊಳಗೆ ಹೋಗಿರುವುದು 17 ಸ್ಪರ್ಧಿಗಳು. 19 ಸ್ಪರ್ಧಿಗಳ ಪೈಕಿ 2 ಇಬ್ಬರು ಸ್ಪರ್ಧಿಗಳು ಜನರ ವೋಟ್ ಸಿಗದೆ ಎಲಿಮಿನೇಟ್ ಆದರು.

ಇನ್ನು 6 ಜನ ಸ್ಪರ್ಧಿಗಳು ವೇಟಿಂಗ್ ಲಿಸ್ಟ್ ನಲ್ಲಿದ್ದು ಬಿಗ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ, ಇವರಿಗೆ ಒಂದು ವಾರ ಸಮಯಾವಕಾಶ ಇದ್ದು, ಒಂದು ವಾರದ ಬಳಿಕ ಯಾರು ಮನೆಯೊಳಗೆ ಇರುತ್ತಾರೆ, ಯಾರು ಮನೆಯಿಂದ ಹೋಗುತ್ತಾರೆ ಎನ್ನುವುದು ನಿರ್ಧಾರ ಆಗಲಿದೆ. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿರುವವರಲ್ಲಿ ಇಂಟರೆಸ್ಟಿಂಗ್ ಎನ್ನಿಸಿರುವ ಸ್ಪರ್ಧಿಗಳಲ್ಲಿ ಒಬ್ಬರು ನೀತು ವನಜಾಕ್ಷಿ.

ಇವರು Transgender ಆಗಿದ್ದು, ಈ ಮೊದಲು ಬಿಗ್ ಬಾಸ್ ಶೋಗೆ ಆಡಂ ಪಾಷಾ ಅವರು ಸಹ transgender ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದೀಗ ನೀತು ವನಜಾಕ್ಷಿ ಅವರು ಎಂಟ್ರಿ ಕೊಟ್ಟಿದ್ದು ಇವರಿಂದ ವಿಭಿನ್ನ ಮನರಂಜನೆ ಸಿಗುವುದು ಪಕ್ಕಾ ಆಗಿದೆ. ನೀತು ವನಜಾಕ್ಷಿ ಅವರು ಸಾಮಾನ್ಯ ವ್ಯಕ್ತಿ ಅಲ್ಲ, ಇವರು ಕೂಡ ಸಾಕಷ್ಟು ಸಾಧನೆ ಮಾಡಿದ್ದಾರೆ. ಉತ್ತರ ಕರ್ನಾಟಕದ ಕಡೆ ಹುಟ್ಟಿ ಬೆಳೆದ ನೀತು ವನನಾಕ್ಷಿ ಅವರ ಮೊದಲ ಹೆಸರು ಮಂಜುನಾಥ್.

ಇವರು 7ನೇ ತರಗತಿ ಮುಗಿಸಿದ ನಂತರ ದೇಹದಲ್ಲಿ ಬದಲಾವಣೆ ಆಗ ತೊಡಗಿತ್ತು, ಆದರೆ ಭಯದಿಂದ ಈ ವಿಷಯವನ್ನು ಅವರು ಯಾರಿಗೂ ಹೇಳಿರಲಿಲ್ಲ. ಬಳಿಕ ತಮ್ಮ ಅಕ್ಕನ ಜೊತೆಗೆ ಈ ವಿಚಾರ ಹಂಚಿಕೊಂಡು, ಅಕ್ಕನ ಸಪೋರ್ಟ್ ಇಂದ ಬೆಂಗಳೂರಿಗೆ ಬಂದರು. ಇಲ್ಲಿಗೆ ಬಂದ ನಂತರ ಮೊದಲಿಗೆ ಟ್ಯಾಟೂ ಆರ್ಟಿಸ್ಟ್ ಆಗಿದ್ದ ನೀತು ವನಜಾಕ್ಷಿ ನಂತರ ಬ್ಯೂಟಿ ಪಾರ್ಲರ್ ಬ್ಯುಸಿನೆಸ್ ಶುರು ಮಾಡಿದರು, ಜೊತೆಗೆ ಆಹಾರದ ಬ್ಯುಸಿನೆಸ್ ಶುರು ಮಾಡಿ, ಅದರಲ್ಲಿಯೂ ಹೆಸರು ಯಶಸ್ಸು ಪಡೆದರು.

ಅಷ್ಟೇ ಅಲ್ಲದೆ ಮಾಡೆಲ್ ಆಗಿಯೂ ಗುರುತಿಸಿಕೊಂಡಿರುವ ನೀತು, ಹಲವು ಬ್ರ್ಯಾಂಡ್ ಗಳಿಗೆ ಮಾಡೆಲ್ ಆಗಿದ್ದಾರೆ. ಹಾಗೆಯೇ Miss Transgender International Award ಅನ್ನು ಗೆದ್ದಿದ್ದಾರೆ. ಹಾಗೆಯೇ ಇವರಿಗೆ ಡ್ರಾಯಿಂಗ್ ನಲ್ಲಿ ಕೂಡ ಸಿಕ್ಕಾಪಟ್ಟೆ ಆಸಕ್ತಿ ಇದೆ. ಬಹುಮುಖ ಪ್ರತಿಭೆ ಆಗಿರುವ ನೀತು ಅವರು ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಒಳ್ಳೆಯ ಉದ್ದೇಶದಿಂದ ಬಂದಿರುವ ಇವರು ಎಷ್ಟು ದಿವಸ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂದು ಕಾದು ನೋಡಬೇಕಿದೆ.

Leave a Comment