Pavithra Gowda: ದರ್ಶನ್ ಅವರೊಡನೆ ಸುದ್ದಿಯಾಗಿರುವ ಪವಿತ್ರಾ ಗೌಡ ಅವರ ಗಂಡ ನಿಜಕ್ಕೂ ಯಾರು ಗೊತ್ತಾ?

0 34

Pavithra Gowda: ನಟ ದರ್ಶನ್ ಅವರೊಡನೆ 10 ವರ್ಷಗಳಿಂದ ಸಂಬಂಧದಲ್ಲಿ ಇದ್ದೇನೆ ಎಂದು ಒಂದು ಪೋಸ್ಟ್ ಮಾಡುವ ಮೂಲಕ ಭಾರಿ ಸುದ್ದಿಯಾಗಿರುವವರು ನಟಿ ಪವಿತ್ರಾ ಗೌಡ. ಇದೀಗ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಇವರದ್ದೇ ಸುದ್ದಿಗಳು ಎಂದರೆ ತಪ್ಪಲ್ಲ. ಈ ಪವಿತ್ರ ಗೌಡ ನಿಜಕ್ಕೂ ಯಾರು? ಇವರ ಗಂಡ ಯಾರು? ಈ ಎಲ್ಲಾ ಪ್ರಶ್ನೆಗೆ ಮಾಹಿತಿ ತಿಳಿಸಿಕೊಡುತ್ತೇವೆ ಪೂರ್ತಿ ಸುದ್ದಿ ಓದಿ..

ಪವಿತ್ರಾ ಗೌಡ 18ನೇ ವಯಸ್ಸಿನಲ್ಲೇ ಲವ್ ಮಾಡಿ ಮದುವೆ ಆಗುತ್ತಾರೆ. ಇವರು ಮದುವೆ ಆಗಿದ್ದು, ಸಂಜಯ್ ಸಿಂಗ್ ಎನ್ನುವ ವ್ಯಕ್ತಿಯ ಜೊತೆಗೆ. ಇವರಿಬ್ಬರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಾಸವಾಗಿದ್ದರು ಎಂದು ಹೇಳಲಾಗುತ್ತಿದೆ. ಇವರದ್ದು ಲವ್ ಮ್ಯಾರೇಜ್, ಸಂಜಯ್ ಮತ್ತು ಪವಿತ್ರಾ ಮಗಳು ಖುಷಿ ಗೌಡ ಎಂದು ಇದೀಗ ಸ್ವತಃ ಪವಿತ್ರಾ ಗೌಡ ಅವರೇ ಅಧಿಕೃತವಾಗಿ ಹೇಳಿದ್ದಾರೆ.

ಇವರಿಬ್ಬರಿಗೆ ದಾಂಪತ್ಯ ಜೀವನದಲ್ಲಿ ವೈಮನಸ್ಸು ಶುರುವಾದ ಕಾರಣ ಇಬ್ಬರು ಕೂಡ ವಿಚ್ಛೇದನ ಪಡೆದು ದೂರವಾದರು. ಬಳಿಕ ಇವರು ಮಗಳು ಖುಷಿ ಗೌಡ ಅವರೊಡನೆ ವಾಸ ಮಾಡುತ್ತಿದ್ದಾರೆ. ಪವಿತ್ರಾ ಗೌಡ ಛತ್ರಿಗಳು ಸಾರ್ ಛತ್ರಿಗಳು ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ನಟ ದರ್ಶನ್ ಅವರೊಡನೆ 10 ವರ್ಷಗಳಿಂದ ಸಂಬಂಧವಿದೆ ಇದು ದರ್ಶನ್ ಅವರ ಪತ್ನಿಗೂ ಗೊತ್ತು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ದರ್ಶನ್ ಅವರೊಡನೆ ಇರುವ ಫೋಟೋಸ್ ಗಳನ್ನು ಶೇರ್ ಮಾಡಿದ ಕಾರಣ, ವಿಜಯಲಕ್ಷ್ಮಿ ದರ್ಶನ್ ಅವರು ಕೋಪಗೊಂಡು, ಪವಿತ್ರಾ ಗೌಡ ಅವರ ನಿಜವಾದ ಗಂಡ ಸಂಜಯ್ ಸಿಂಗ್ ಅವರೊಡನೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದರು. ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಎಲ್ಲೆಡೆ ಈ ಸುದ್ದಿ ವೈರಲ್ ಆಗಿದೆ.

Leave A Reply

Your email address will not be published.