Radhika Pandit: ಪ್ರೇಮಿಗಳ ದಿವಸಕ್ಕೆ ರಾಧಿಕಾ ಪಂಡಿತ್ ಅವರಿಂದ ಗುಡ್ ನ್ಯೂಸ್! ಹೊಸ ಫೋಟೋಶೂಟ್ ನೋಡಿ ನೆಟ್ಟಿಗರು ಫಿದಾ!

0 16

Radhika Pandit: ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಕೆಜಿಎಫ್ ಸಿನಿಮಾದಿಂದ ಯಶ್ ಅವರ ಸಿನಿಕೆರಿಯರ್ ಸಂಪೂರ್ಣ ಬದಲಾಯಿತು ಎಂದರೆ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗಕ್ಕೆ ಸೀಮಿತರಾಗಿದ್ದ ಯಶ್, ಇಡೀ ಭಾರತ ಚಿತ್ರರಂಗವೇ ಕೊಂಡಾಡುವಂತೆ ಬೆಳೆದಿದ್ದಾರೆ, ಆದರೆ ಒಂದೇ ದಿನದಲ್ಲಿ ಕಲ್ಲು ಶಿಲೆಯಾಗುವುದಿಲ್ಲ ಎಂಬಂತೆ ಯಶ್ ಒಂದೇ ದಿನದಲ್ಲಿ ಸ್ಟಾರ್ ಆದವರಲ್ಲ.

ಯಶ್ ನಡೆದು ಬಂದ ಹಾದಿಯಲ್ಲಿ, ಅವಮಾನ ಕಷ್ಟ ಹಸಿವು ತಿರಸ್ಕಾರ ಎಲ್ಲವೂ ಇತ್ತು. ಕಷ್ಟದಿಂದ ಕೂಡಿದ ಪ್ರತಿಯೊಂದು ಹಂತವನ್ನು ದಾಟಿಯೇ ಯಶ್ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಆ ಎಲ್ಲಾ ಕಷ್ಟದ ಸಮಯದಲ್ಲಿ ಯಶ್ ಅವರ ಜೊತೆಗೆ ಇದ್ದಿದ್ದು ಅವರ ಪತ್ನಿ ರಾಧಿಕಾ ಪಂಡಿತ್. ಯಶ್ ಅವರು ಕಷ್ಟಪಡುತ್ತಿದ್ದ ದಿನಗಳಿಂದಲೂ ಇವರಿಬ್ಬರು ಸ್ನೇಹಿತರಾಗಿ ಜೊತೆಗೆ ಇದ್ದಾರೆ. ಬಳಿಕ ಇಬ್ಬರು ಪ್ರೀತಿಸಲು ಶುರು ಮಾಡಿ, ಮದುವೆಯಾದರು.

ಇವರಿಬ್ಬರು ಜೀವನ ನಡೆಸುತ್ತಿರುವ ರೀತಿ ಎಲ್ಲಾ ಪ್ರೇಮಿಗಳಿಗೆ ಸ್ಫೂರ್ತಿ ಎಂದರೆ ತಪ್ಪಲ್ಲ. ಈ ಜೋಡಿಯನ್ನು ಕಂಡರೆ ಎಲ್ಲರಿಗೂ ಅಷ್ಟು ಇಷ್ಟ. ಇಂದು ಬದುಕಿನಲ್ಲಿ ಸಕ್ಸಸ್ ಕಂಡು ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾರೆ..

ಇದೀಗ ರಾಧಿಕಾ ಪಂಡಿತ್ ಅವರು ಹೊಸದಾಗಿ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ರಾಧಿಕಾ ಅವರು ಗೋಲ್ಡ್ ಕಲರ್ ಡ್ರೆಸ್ ನಲ್ಲಿ ಮಿಂಚಿದ್ದು, ಪ್ರೀತಿಯ ತಿಂಗಳಿಗೆ ಹಲೋ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಇದೀಗ ಈ ಫೋಟೋಸ್ ವೈರಲ್ ಆಗಿದೆ..

Leave A Reply

Your email address will not be published.