Rambha: ಲೈಟ್ ಆಫ್ ಮಾಡಿ, ಹಾಗೆ ಮಾಡಿದ್ರು.. ರಜನಿಕಾಂತ್ ಅವರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರಂಭ!

Written by Pooja Siddaraj

Published on:

Rambha: ನಟಿ ರಂಭಾ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರು ತೆಲುಗು, ತಮಿಳು, ಮಲಯಾಳಂ, ಕನ್ನಡ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ನಟಿಸಿ ಹೆಸರು ಮಾಡಿರುವ ಸ್ಟಾರ್ ನಟಿ. ಆಗಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದರು ನಟಿ ರಂಭಾ. ಇದೀಗ ಇವರು ನಟ ರಜನಿಕಾಂತ್ ಅವರ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದೆ..

ನಟಿ ರಂಭಾ ಅವರು ಮದುವೆಯಾದ ನಂತರ ನಟನೆಯನ್ನು ಕಡಿಮೆ ಮಾಡಿದರು, ಪ್ರಸ್ತುತ ಇವರು ಫ್ಯಾಮಿಲಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ರಂಭಾ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಂಭಾ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಅದರಲ್ಲಿ ರಜನಿಕಾಂತ್ ಅವರ ಜೊತೆಗೆ ಕೆಲಸ ಮಾಡಿದ ಅನುಭವದ ಬಗ್ಗೆ ಕೇಳಿದಾಗ, ರಂಭಾ ಅವರು ಅರುಣಾಚಲಂ ಸಿನಿಮಾ ಚಿತ್ರೀಕರಣದ ನಡುವೆ ನಡೆದ ಘಟನೆಯ ಬಗ್ಗೆ ನೆನಪಿಸಿಕೊಂಡು ಹೇಳಿದ್ದಾರೆ. ಅರುಣಾಚಲಂ ಸಿನಿಮಾ ಮಾಡುವಾಗಲೇ ಸಲ್ಮಾನ್ ಖಾನ್ ಹಾಗೂ ಜಾಕಿ ಶ್ರಾಫ್ ಅವರೊಡನೆ ಹಿಂದಿಯಲ್ಲಿ ಬಂಧನ್ ಸಿನಿಮಾದಲ್ಲಿ ನಟಿಸಿದ್ಧರು.

ಅರುಣಾಚಲಂ ಸೆಟ್ ಗೆ ಸಲ್ಮಾನ್ ಖಾನ್ ಹಾಗೂ ಜಾಕಿ ಶ್ರಾಫ್ ಅವರು ಬಂದಾಗ ಹಗ್ ಮಾಡಿ ಬರಮಾಡಿಕೊಂಡಿದ್ದರಂತೆ ರಂಭಾ. ಅದು ರಜನಿಕಾಂತ್ ಅವರಿಗೆ ಇಷ್ಟ ಆಗಿರಲಿಲ್ಲವಂತೆ. ಬಳಿಕ ಒಮ್ಮೆ ರೂಮ್ ನಲ್ಲಿ ಲೈಟ್ ಆಫ್ ಆಗಿ, ಸಡನ್ ಆಗಿ ಯಾರೋ ಮುಟ್ಟಿ ಹೋದಾಗ ಭಯವಾಗಿ ಕಿರುಚಿಕೊಂಡಿದ್ದರಂತೆ ರಂಭಾ. ನಂತರ ಅದು ರಜನಿಕಾಂತ್ ಅವರ ಟೀಮ್ ಮಾಡಿದ ಪ್ರಾಂಕ್ ಎಂದು ಗೋಯ್ತಾಯಿಯಂತೆ. ಈ ಘಟನೆಯ ನೆನಪು ಮಾಡಿಕೊಂಡಿದ್ದಾರೆ ನಟಿ ರಂಭಾ.

Leave a Comment