Deepika Padukone: ತಾಯಿಯಾಗುವ ಬಗ್ಗೆ ಸೆನ್ಸೇಷನ್ ಕಮೆಂಟ್ ಮಾಡಿದ ದೀಪಿಕಾ ಪಡುಕೋಣೆ! ಗುಡ್ ನ್ಯೂಸ್ ಗಾಗಿ ಕಾಯ್ತಿದ್ದಾರೆ ಫ್ಯಾನ್ಸ್!

0 19

Deepika Padukone: ಕರ್ನಾಟಕದ ಹುಡುಗಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ, ಕನ್ನಡದಲ್ಲಿ ಉಪೇಂದ್ರ ಅವರೊಡನೆ ಐಶ್ವರ್ಯ ಸಿನಿಮಾದಲ್ಲಿ ನಟಿಸಿದ ದೀಪಿಕಾ ಪಡುಕೋಣೆ ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್ ನಟಿ. ಅತಿದೊಡ್ಡ ಅಭಿಮಾನಿ ಬಳಗ ಗಳಿಸಿಕೊಂಡಿರುವ ದೀಪಿಕಾ ಪಡುಕೋಣೆ ಅವರು ಇದೀಗ ತಾಯಿಯಾಗುವ ಬಗ್ಗೆ ಕೊಟ್ಟಿರುವ ಹೇಳಿಕೆ ವೈರಲ್ ಆಗಿದೆ.

ನಟಿ ದೀಪಿಕಾ ಪಡುಕೋಣೆ ಓಂ ಶಾಂತಿ ಓಂ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು, ಮೊದಲ ಸಿನಿಮಾದಲ್ಲೇ ಸ್ಟಾರ್ ಆದ ದೀಪಿಕಾ ಅವರು, ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿ ಎನ್ನಿಸಿಕೊಂಡಿದ್ದು ಮಾತ್ರವಲ್ಲದೆ, ಹಾಲಿವುಡ್ ಸಿನಿಮಾದಲ್ಲಿ ಕೂಡ ನಟಿಸಿ ಹೆಸರು ಮಾಡಿದ್ದಾರೆ. ದೀಪಿಕಾ ಅವರಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿ ಕೂಡ ಸಾಕಷ್ಟು ಅಭಿಮಾನಿಗಳಿದ್ದಾರೆ..

ದೀಪಿಕಾ ಪಡುಕೋಣೆ ಅವರು ನಮ್ಮ ದೇಶದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಮತ್ತು ಅತಿಹೆಚ್ಚು ಬೇಡಿಕೆ ಹೊಂದಿರುವ ನಟಿ ಕೂಡ ಹೌದು. ಇನ್ನು ದೀಪಿಕಾ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ ಇವರು ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಡನೆ ಮದುವೆಯಾಗಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಇವರು ಸಂದರ್ಶನದಲ್ಲಿ ತಾಯಿ ಆಗುವ ಬಗ್ಗೆ ಸುಳಿವು ನೀಡಿದ್ದಾರೆ..

ದೀಪಿಕಾ ಪಡುಕೋಣೆ ಅವರಿಗೆ ಸಂದರ್ಶನ ಒಂದರಲ್ಲಿ ತಾಯಿಯಾಗುವ ಪ್ಲಾನ್ ಬಗ್ಗೆ ಕೇಳಲಾಯಿತು, ಅದಕ್ಕೆ ಉತ್ತರ ಕೊಟ್ಟ ದೀಪಿಕಾ ನಾನು ಮತ್ತು ರಣವೀರ್ ಇಬ್ಬರಿಗೂ ಮಗು ಅಂದ್ರೆ ತುಂಬಾ ಇಷ್ಟ, ಮುಂದಿನ ದಿನಗಳಲ್ಲಿ ನಮ್ಮದೇ ಕುಟುಂಬವನ್ನು ಹೊಂದಲು ಬಯಸುತ್ತೇವೆ ಎಂದು ಹೇಳಿದ್ದಾರೆ ದೀಪಿಕಾ. ಈ ಮಾತು ಕೇಳಿದ ಅಭಿಮಾನಿಗಳು ದೀಪಿಕಾ ಶೀಘ್ರದಲ್ಲೇ ತಾಯಿಯಾಗ್ತಾರಾ? ಗುಡ್ ನ್ಯೂಸ್ ಕೊಡ್ತಾರಾ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Leave A Reply

Your email address will not be published.