Chanakya Neeti: ಜೀವನದಲ್ಲಿ ಇಂಥ ಜನರಿಂದ ದೂರವಿರಿ, ಇಲ್ಲದಿದ್ರೆ ಜೀವನವೇ ಹಾಳಾಗೋಗುತ್ತೆ!

0 15

Chanakya Neeti: ಆಚಾರ್ಯ ಚಾಣಕ್ಯರನ್ನು ಚಾಣಾಕ್ಷ ಎಂದು ಕರೆಯುತ್ತಾರೆ. ಅದೆಷ್ಟೋ ವರ್ಷಗಳ ಹಿಂದೆಯೇ ಇವರು ಬರೆದಿರುವ ಚಾಣಕ್ಯ ನೀತಿ ಪುಸ್ತಕದಲ್ಲಿ ಒಬ್ಬ ಮನುಷ್ಯ ಜೀವಿಸುವುದಕ್ಕೆ ಆಗತ್ಯವಿರುವ ಎಲ್ಲಾ ವಿಚಾರಗಳನ್ನು ಕೂಡ ತಿಳಿಸಲಾಗಿದೆ. ಈ ಪುಸ್ತಕದಲ್ಲಿರುವ ವಿಚಾರಗಳನ್ನು ಬದುಕಿಗೆ ಅಳವಡಿಸಿಕೊಂಡರೆ, ನಿಮ್ಮ ಜೀವನ ಅದ್ಭುತವಾಗಿ ಇರುವುದು ಖಂಡಿತ. ಚಾಣಕ್ಯ ನೀತಿಯಲ್ಲಿ ನಾವು ಇಂಥ ಜನರಿಂದ ದೂರ ಇರಬೇಕು ಎಂದು ತಿಳಿಸಲಾಗಿದೆ.

ನಮ್ಮ ಬದುಕಿನಲ್ಲಿ ನಮ್ಮ ಜೊತೆಗೆ ಸಾಕಷ್ಟು ಜನರು ಇರುತ್ತಾರೆ, ಕೆಲವರು ದೂರವಾಗುತ್ತಾರೆ, ಕೆಲವರು ದೂರ ಇರುತ್ತಾರೆ ಆದರೆ ಇನ್ನೂ ಕೆಲವರು ಜೊತೆಗೆ ಇದ್ದರೂ ನಮ್ಮ ಅವನತಿ ಆಗುವ ಹಾಗೆ ಮಾಡುತ್ತಾರೆ. ಅಂಥ ಜನರಿಂದ ನಾವು ದೂರ ಇರಬೇಕು. ಹಾಗಿದ್ದಲ್ಲಿ ಅಂಥ ಜನರು ಯಾರು ಎಂದು ಗುರುತಿಸುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ..

*ಮಹಿಳೆಯರಲ್ಲಿ ಕೆಲವರು ಯಾವಾಗಲೂ ತಮ್ಮ ಬಗ್ಗೆ ಮಾತ್ರ ತಾವು ಯೋಚನೆ ಮಾಡುತ್ತಾರೆ, ಮನೆಯವರ ಬಗ್ಗೆ ಆಗಲಿ, ಮತ್ತೊಬ್ಬರ ಬಗ್ಗೆ ಆಗಲಿ ಯೋಚನೆ ಮಾಡುವುದಿಲ್ಲ. ಅಂಥ ಮಹಿಳೆಯರಿಂದ ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ..

*ತಮ್ಮ ಬಗ್ಗೆ ತಾವು ಯೋಚಿಸದೇ, ನಿಮ್ಮ ಬಳಿ ಬಂದು ಇನ್ನೊಬ್ಬರ ಬಗ್ಗೆ ದೂರು ಕೊಡುವ ವ್ಯಕ್ತಿಗಳನ್ನು ಎಂದಿಗೂ ನಂಬಬಾರದು. ಅಂಥವರ ಜೊತೆಗೂ ಇರಬಾರದು. ಇಂಥ ಜನರಿಂದ ನಿಮ್ಮ ಮನಸ್ಸು ಹಾಳಾಗುತ್ತದೆ, ನೆಮ್ಮದಿಯು ಹಾಳಾಗುತ್ತದೆ.

*ಬದುಕಿನಲ್ಲಿ ಹಣ ಮಾತ್ರವೇ ಮುಖ್ಯವಲ್ಲ ಅದಕ್ಕಿಂತ ಮುಖ್ಯವಾದದ್ದು ಸಾಕಷ್ಟಿದೆ, ಹಾಗಾಗಿ ಯಾವಾಗಲೂ ಹಣವೇ ಮುಖ್ಯ ಎನ್ನುವಂಥ ವ್ಯಕ್ತಿಯಿಂದ ದೂರ ಇರುವುದು ಒಳ್ಳೆಯದು. ಯಾಕೆಂದರೆ ಅಂಥವರು ಹಣಕ್ಕಾಗಿ ಏನನ್ನು ಬೇಕಾದರೂ ಮಾಡಲು ತಯಾರಾಗಿರುತ್ತಾರೆ..

*ಸತ್ಯ ಹೇಳುವುದೇ ಬದುಕು. ಹಾಗಾಗಿ ಸುಳ್ಳು ಹೇಳುವವರ ಜೊತೆಗೆ ಯಾವಾಗಲೂ ಇರಬಾರದು. ಅಂಥವರು ಸುಳ್ಳಿನಿಂದ ತೊಂದರೆ ಸೃಷ್ಟಿಸುವುದ್ರ ಜೊತೆಗೆ ಜೀವನವನ್ನು ಕಷ್ಟಕ್ಕೆ ತಳ್ಳುತ್ತಾರೆ. ಹಾಗಾಗಿ ಸುಳ್ಳು ಹೇಳುವಂಥ ಜನರಿಂದ ದೂರ ಇರಬೇಕು.

Leave A Reply

Your email address will not be published.