Sapthami Gowda: ನಟಿ ಸಪ್ತಮಿ ಗೌಡ ಸಿಂಪಲ್ ಬ್ಯೂಟಿಗೆ ನೆಟ್ಟಿಗರು ಫಿದಾ!

Written by Pooja Siddaraj

Published on:

Sapthami Gowda: ಕಾಂತಾರ ಸಿನಿಮಾ ತೆರೆಕಂಡ ನಂತರ ಭಾರಿ ಬೇಡಿಕೆ ಸೃಷ್ಟಿಯಾಗಿರುವುದು ರಿಷಬ್ ಶೆಟ್ಟಿ ಅವರಿಗೆ ಮಾತ್ರವಲ್ಲ, ಸಪ್ತಮಿ ಗೌಡ ಅವರಿಗು ಕೂಡ. ಕಾಂತಾರ ಗಿಂತ ಮೊದಲು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದರು ಸಹ ಸಪ್ತಮಿ ಗೌಡ ಅವರಿಗೆ ಬಿಗ್ ಬ್ರೇಕ್ ನೀಡಿದ್ದು ಕಾಂತಾರ. ಮುದ್ದಾದ ಮಾಯಾಂಗಿ ಎಂದು ಎಲ್ಲಾ ಸಿನಿಪ್ರಿಯರು ಇವರನ್ನು ಹಾಡಿ ಹೊಗಳಿದರು.

ಕಾಂತಾರ ಸಿನಿಮಾ ಯಾವ ಹಂತಕ್ಕೆ ಇವರಿಗೆ ಹೆಸರು ತಂದುಕೊಟ್ಟಿತು ಎಂದರೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಕೂಡ ಹೆಸರುವಾಸಿ ಆದರು ಸಪ್ತಮಿ ಗೌಡ. ಈಗಾಗಲೇ ಹಿಂದಿಯ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿಸಿರುವ ಸಪ್ತಮಿ ಗೌಡ, ಕನ್ನಡದಲ್ಲೇ ಬಹಳ ಬ್ಯುಸಿ ಇದ್ದಾರೆ. ಅಭಿಷೇಕ್ ಅಂಬರೀಷ್ ಅವರೊಡನೆ ಕಾಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ..

ಇನ್ನು ದೊಡ್ಮನೆಯ ಕುಡಿ ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವ ಸಿನಿಮಾಗು ಸಪ್ತಮಿ ಅವರೇ ನಾಯಕಿ. ಎಲ್ಲೆಲ್ಲಿಯೂ ಸಪ್ತಮಿ ಅವರಿಗೆ ಬೇಡಿಕೆ ಇದೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸಪ್ತಮಿ ಗೌಡ ಅವರು ಹೊಸ ಫೋಟೋಶೂಟ್ ಗಳ ಮೂಲಕ ಸುದ್ದಿಯಾಗುತ್ತಾರೆ..

ಇದೀಗ ಸಪ್ತಮಿ ಅವರು ಕ್ಯಾಶುವಲ್ ಆಗಿ ಜೀನ್ಸ್ ಟೀ ಶರ್ಟ್ ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಇದು ಎಲ್ಲರ ಗಮನ ಸೆಳೆದಿದೆ. ಸಪ್ತಮಿ ಗೌಡ ಅವರ ಸಿಂಪಲ್ ಬ್ಯೂಟಿಗೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.

Leave a Comment