Shahrukh Khan: ರಾಕಿ ಭಾಯ್ ಜೊತೆಗೆ ಕನ್ನಡಕ್ಕೆ ಬರ್ತಾರಾ ಬಾಲಿವುಡ್ ಬಾದ್ ಶಾ?

0 18

Shahrukh Khan: ರಾಕಿ ಭಾಯ್ ಯಶ್ ಅವರ ಅಭಿಮಾನಿಗಳು ಕಾಯುತ್ತಿದ್ದ ಗುಡ್ ನ್ಯೂಸ್ ಕಳೆದ ತಿಂಗಳು ಸಿಕ್ಕಿತು. ಡಿಸೆಂಬರ್ 8 ಬೆಳಗ್ಗೆ ಯಶ್19 ಟೈಟಲ್ ಅನೌನ್ಸ್ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ ಇದೊಂದು ಹೊಸ ಬಗೆಯ ಸಿನಿಮಾ ಆಗಿದ್ದು, ಫಸ್ಟ್ ಲುಕ್ ನಲ್ಲಿಯೇ ಅಭಿಮಾನಿಗಳ ಗಮನ ಸೆಳೆದಿದೆ. ಫಸ್ಟ್ ಲುಕ್ ಇಂದಲೇ ಎಲ್ಲರ ಗಮನ ಸೆಳೆದಿರುಗ ಟಾಕ್ಸಿಕ್ ಸಿನಿಮಾಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಎಂಟ್ರಿ ಕೊಡ್ತಾರಾ?

ಯಶ್ ಅವರ ಹೊಸ ಸಿನಿಮಾ ಹೆಸರು ಟಾಕ್ಸಿಕ್, ಈ ಸಿನಿಮಾದ ಟೈಟಲ್ ಲಾಂಚ್ ಇಂದು ಆಗಿದ್ದು, ಯಶ್ ಅವರು ಖುದ್ದಾಗಿ ವಿಡಿಯೋ ಶೇರ್ ಮಾಡಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಪ್ರೊಡ್ಯುಸ್ ಮಾಡುತ್ತಿದೆ. ಇನ್ನು ಬಹುನಿರೀಕ್ಷಿತ ಸಿನಿಮಾವನ್ನು ಖ್ಯಾತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಗೆ ಸಾಯಿಪಲ್ಲವಿ ಅವರು ನಾಯಕಿ ಎಂದು ಹೇಳಲಾಗುತ್ತಿದೆ.

ಅವರೊಡನೆ ಇನ್ನು ಇಬ್ಬರು ನಾಯಕಿಯರು ಸಿನಿಮಾದಲ್ಲಿ ಇರಲಿದ್ದಾರಂತೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಿನಿಮಾದ ಈ ಫಸ್ಟ್ ಲುಕ್ ನೋಡಿದರೆ Fantasy Drama ರೀತಿಯಲ್ಲಿ ಇದ್ದು ಬಹಳ ಆಕರ್ಷಕವಾಗಿದೆ. ಈ ಸಿನಿಮಾಗೆ ಯಶ್ ಅವರು ನಟ, ಹೀರೋ ಮಾತ್ರವಲ್ಲ ಸಿನಿಮಾದ ನಿರ್ಮಾಪಕರಲ್ಲಿ ಕೂಡ ಯಶ್ ಅವರು ಒಬ್ಬರು. ಕೆವಿಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಅವರೊಡನೆ ಯಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಟಾಕ್ಸಿಕ್ ಸಿನಿಮಾ ತಂಡ ವಿಶೇಷ ಪಾತ್ರ ಒಂದಕ್ಕೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರನ್ನು ಅಪ್ರೋಚ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹೌದು, ಶಾರುಖ್ ಅವರೊಡನೆ ಒಂದು ಸುತ್ತಿನ ಮಾತುಕತೆ ಆಗಿದ್ದು, ಅವರು ಒಪ್ಪಿದರೆ ಯಶ್ ಅವರೊಡನೆ ಟಾಕ್ಸಿಕ್ ಸಿನಿಮಾದಲ್ಲಿ ನಟಿಸೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಬಗ್ಗೆ ಚಿತ್ರತಂಡದ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ, ಇದು ನಿಜವಾದರೇ ಶಾರುಖ್ ಖಾನ್ ಅವರು ಕನ್ನಡಕ್ಕೆ ಬರಲಿದ್ದಾರೆ.

Leave A Reply

Your email address will not be published.