Shiva Rajkumar: ಲೀಲಾವತಿ ಅವರ ಆರೋಗ್ಯ ವಿಚಾರಿಸಿ ವಿನೋದ್ ರಾಜ್ ಅವರಿಗೆ ಧೈರ್ಯ ತುಂಬಿದ ಶಿವಣ್ಣ!

Written by Pooja Siddaraj

Published on:

Shiva Rajkumar: ಶಿವಣ್ಣ ಅವರು ಎಲ್ಲರಿಗೂ ಇಷ್ಟ ಆಗೋದು ಅವರ ಒಳ್ಳೆಯತನ, ಮುಗ್ಧ ವ್ಯಕ್ತಿತ್ವದಿಂದ ಅಂದರೆ ತಪ್ಪಲ್ಲ. ಚಿತ್ರರಂಗದವರಾಗಲಿ ಅಭಿಮಾನಿಗಳಾಗಲಿ ಎಲ್ಲರ ಜೊತೆಗೆ ಒಂದೇ ರೀತಿ ಇರುವ ಶಿವಣ್ಣ, ಎಲ್ಲರೊಡನೆ ನಗುತ್ತಾ ಇರುತ್ತಾರೆ. ಎಲ್ಲರಿಗೂ ಸ್ಫೂರ್ತಿ ತುಂಬುತ್ತಾರೆ. ಕನ್ನಡ ಚಿತ್ರರಂಗಕ್ಕೆ ಈಗ ಒಂದು ರೀತಿ ಲೀಡರ್ ಥರ ಇದ್ದಾರೆ ಅಂದ್ರೆ ತಪ್ಪಲ್ಲ. ಇದೀಗ ಶಿವಣ್ಣ ಅವರು ಹಿರಿಯನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದಾರೆ..

ಲೀಲಾವತಿ ಅವರು ವಯೋಸಹಜ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದಾರೆ. ಕೆಲ ದಿನಗಳಿಂದ ಎಲ್ಲಾ ಕಲಾವಿದರು ಕೂಡ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಮೊನ್ನೆಯಷ್ಟೇ ನಟ ದರ್ಶನ್ ಅವರು, ಅದಕ್ಕಿಂತ ಮೊದಲು ಅರ್ಜುನ್ ಸರ್ಜಾ ಆ ಅವರು, ಅಭಿಷೇಕ್ ಅಂಬರೀಶ್ ಅವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದರು. ಇದೀಗ ಶಿವಣ್ಣ ಗೀತಕ್ಕ ದಂಪತಿ ಭೇಟಿ ನೀಡಿದ್ದಾರೆ.

ಲೀಲಾವತಿ ಅವರ ಆರೋಗ್ಯ ವಿಚಾರಿಸಿ, ವಿನೋದ್ ರಾಜ್ ಅವರೊಡನೆ ಮಾತನಾಡಿ ಧೈರ್ಯ ತುಂಬಿದ್ದಾರೆ ಶಿವಣ್ಣ. ಬಳಿಕ ಮಾತನಾಡಿ, “ಈ ಏಜ್ ಅಲ್ಲಿ ಇದೆಲ್ಲ ತಡ್ಕೊಳ್ಳೋಕೆ ಎಲ್ಲರಲ್ಲೂ ಶಕ್ತಿ ಇರಲ್ಲ, ಯೋಗಪುರುಷರು ಅಂತ ಹೇಳ್ತಾರೆ. ಲೀಲಾವತಿ ಅವರು ಅಷ್ಟೇ ಸ್ಟ್ರಾಂಗ್ ಆಗಿ ಇರೋದ್ರಿಂದ ಇದೆಲ್ಲವನ್ನ ತಡೆದುಕೊಂಡಿದ್ದಾರೆ. ಆಗಿನವರೆಲ್ಲಾ ಹಾಗೆ ಬಹಳ ಸ್ಟ್ರಾಂಗ್ ಆಗಿ ಇರ್ತಾರೆ, ಒಳ್ಳೆಯ ವ್ಯಕ್ತಿತ್ವ ಮತ್ತು ಮನಸ್ಸು ಇರುವವರು ಲೀಲಾವತಿ ಅಮ್ಮ.

ಲೀಲಾವತಿ ಅವರ ಮೇಲೆ ನಮಗೆ ಯಾಕೆ ಅಷ್ಟು ಪ್ರೀತಿ ಅಂದ್ರೆ ಅವಾಗಿನಿಂದ ನಮಗೆ ಅದೇ ಅನುಬಂಧ ಇದೆ. ಚಿಕ್ಕವರಾಗಿದ್ದಾಗಿನಿಂದ ಅವರನ್ನ ನೋಡ್ತಿದ್ದೀವಿ. ಯಾವಾಗ ಭೇಟಿ ಆದ್ರೂ ಅದೇ ಆತ್ಮೀಯತೆ, ಬಾಂಧವ್ಯ ಇದೆ. ಅವರನ್ನ ಮರೆಯೋಕಾಗಲ್ಲ. ವಿನೋದ್ ಅವರನ್ನ ನೋಡಿದ್ರೆ ತಾಯಿಯವರನ್ನೇ ನೋಡಿದ ಹಾಗೆ ಆಗುತ್ತದೆ. ಬೇಜಾರಾಗುತ್ತೆ. ಇನ್ನು ತುಂಬಾ ದಿನ ಅವರು ನಮ್ ಜೊತೆ ಇರ್ತಾರೆ.

ದೇವರ ಆಶೀರ್ವಾದ, ವಿನೋದ್ ಪ್ರೀತಿ, ನಮ್ಮ ಪ್ರೀತಿ, ಜನರ ಪ್ರೀತಿ ಅಭಿಮಾನ ಇದೆ. ಅವರು ಇನ್ನು ನಮ್ ಜೊತೆ ಇರ್ಬೇಕು, ನಮ್ಮನ್ನ ಬಿಟ್ಟು ಹೋಗಬಾರದು. ತಾಯಿ ಅಂದ್ರೆ ಆ ಪ್ರೀತಿ ಇರುತ್ತೆ, ಅವರಿಗು ಮಗನ ಮೇಲೆ ಹಾಗೆ ಪ್ರೀತಿ ಇದೆ. ವಿನೋದ್ ಮನಸ್ಸಲ್ಲಿ ಅದು ಇರಬೇಕು, ಆ ವೈರಾಗ್ಯ ಬರಬಾರದು. ನೀವು ಈ ಸಮಯದಲ್ಲಿ ಯಾವುದೇ ತೀರ್ಮಾನ ತಗೊಳ್ಬಾರ್ದು. ನೋವಾಗುತ್ತೆ, ಅದನ್ನ ತಡ್ಕೊಬೇಕು.. ಧೈರ್ಯವಾಗಿರಿ..” ಹೇಳಿದ್ದಾರೆ ಶಿವಣ್ಣ.

Leave a Comment