Dhoni: ಸಾಕ್ಷಿ ಅವರಿಗಿಂತ ಮೊದಲು ಧೋನಿ ಅವರು ಯಾವ ಬಾಲಿವುಡ್ ಬೆಡಗಿಯರ ಜೊತೆಗೆ ಡೇಟ್ ಮಾಡಿದ್ರು ಗೊತ್ತಾ?

Written by Pooja Siddaraj

Published on:

Dhoni: ಬಾಲಿವುಡ್ ಮತ್ತು ಕ್ರಿಕೆಟ್ ಈ ಎರಡಕ್ಕೂ ಬಹಳ ಹಿಂದಿನ ನಂಟು ಇದೆ. ಬಾಲಿವುಡ್ ಬ್ಯೂಟಿಗಳನ್ನು ಕ್ರಿಕೆಟಿಗರು ಡೇಟ್ ಮಾಡಿದ್ದು, ಮದುವೆ ಆಗಿದ್ದು ಇದೆ. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಇವರೆಲ್ಲರೂ ಕೂಡ ಬಾಲಿವುಡ್ ಬ್ಯೂಟಿಗಳನ್ನು ಡೇಟ್ ಮಾಡಿದ್ದರು. ಅದೇ ರೀತಿ ಟೀಮ್ ಇಂಡಿಯಾದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಅವರು ಕೂಡ ಬಾಲಿವುಡ್ ಬ್ಯೂಟಿಗಳ ಜೊತೆಗೆ ಡೇಟ್ ಮಾಡಿದ್ದರು. ಹಾಗಿದ್ರೆ ಆ ನಟಿಮಣಿಯರು ಯಾರ್ಯಾರು ಗೊತ್ತಾ?

ಎಂ.ಎಸ್ ಧೋನಿ ಅವರ ಹೆಸರು ಕರ್ನಾಟಕದ ಹುಡುಗಿ ದೀಪಿಕಾ ಪಡುಕೋಣೆ ಅವರೊಡನೆ ಕೇಳಿಬಂದಿತ್ತು. ಕಾರ್ಯಕ್ರಮ ಒಂದರಲ್ಲಿ ದೀಪಿಕಾ ಅವರ ಮೇಲೆ ತಮಗೆ ಕ್ರಶ್ ಇದೆ ಎಂದು ಹೇಳಿಕೊಂಡಿದ್ದರು ಧೋನಿ. ದೀಪಿಕಾ ಅವರ ಮೇಲೆ ತುಂಬಾ ಪ್ರೀತಿ ಕೂಡ ಇತ್ತು, ಆದರೆ ಆ ಸಮಯದಲ್ಲಿ ದೀಪಿಕಾ ಅವರ ಹೆಸರು ಯುವರಾಜ್ ಸಿಂಗ್ ಅವರೊಡನೆ ಕೂಡ ಕೇಳಿಬಂದಿತ್ತು, ಆ ಕಾರಣಕ್ಕೆ ಧೋನಿ ಅವರು ದೀಪಿಕಾ ಅವರಿಂದ ದೂರವಾದರು ಎನ್ನಲಾಗಿದೆ..

ಅಷ್ಟೇ ಅಲ್ಲದೆ, ದಿ ಕಪಿಲ್ ಶರ್ಮಾ ಶೋ ನ ಕ್ರಿಯೇಟಿವ್ ಪ್ರೀತಿ ಸಿಮೋಸ್ ಅವರೊಡನೆ ಧೋನಿ ಅವರ ಹೆಸರು ಕೇಳಿಬಂದಿತ್ತು. ಆದರೆ ಇವರಿಬ್ಬರು ಒಳ್ಳೆ ಫ್ರೆಂಡ್ಸ್, 16 ವರ್ಷಗಳಿಂದ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹಿವಿದೆ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲ, ಗಜಿನಿ ಸಿನಿಮಾ ಸೂಪರ್ ಹಿಟ್ ಆದ ನಂತರ ನಟಿ ಅಸಿನ್ ಅವರೊಡನೆ ಡೇಟಿಂಗ್ ಮಾಡಿದ್ದರು ಧೋನಿ. ಇವರಿಬ್ಬರು ಒಂದು ಬ್ರಾಂಡ್ ಗೆ ರಾಯಭಾರಿಗಳಾಗಿದ್ದರು. ಆಗ ಇವರ ಬಗ್ಗೆ ಚರ್ಚೆಗಳು ನಡೆದಿದ್ದವು. 2010ರಲ್ಲಿ ಅಸಿನ್ ಅವರ ಮನೆಗೆ ಹೋಗಿದ್ದರು ಧೋನಿ.

ಇಷ್ಟೇ ಅಲ್ಲ, ಮತ್ತೊಬ್ಬ ಕನ್ನಡದ ಹುಡುಗಿ ನಟಿ ಲಕ್ಷ್ಮೀ ರೈ ಅವರೊಡನೆ ಕೂಡ ಡೇಟ್ ಮಾಡಿದ್ದರು. ಆದರೆ 2010ರಲ್ಲಿ ಇವರಿಬ್ಬರ ಸಂಬಂಧ ಮುರಿದುಬಿತ್ತು ಎನ್ನಲಾಗುತ್ತದೆ. ಬಳಿಕ ಸಾಕ್ಷಿ ಅವರನ್ನು ಮದುವೆಯಾದರು ಧೋನಿ. ಇಂದು ಈ ಜೋಡಿ ಸಂತೋಷವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

Leave a Comment