Srinidhi Shetty: ವಧುವಿನ ಹಾಗೆ ಕಂಗೊಳಿಸಿದ ಶ್ರೀನಿಧಿ ಶೆಟ್ಟಿ, ವಾವ್ ಎಂದ ಫ್ಯಾನ್ಸ್!

0 23

Srinidhi Shetty: ಕೆಜಿಎಫ್ ಕ್ವೀನ್ ಎಂದೇ ಹೆಸರು ಮಾಡಿರುವವರು ನಟಿ ಶ್ರೀನಿಧಿ ಶೆಟ್ಟಿ. ಮಂಗಳೂರಿನ ಬೆಡಗಿ ಶ್ರೀನಿಧಿ ಶೆಟ್ಟಿ ಅವರು ಇಂದು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಹೆಸರು ಮಾಡಿದ್ದಾರೆ. ಶ್ರೀನಿಧಿ ಶೆಟ್ಟಿ ಅವರು ಮಾಡೆಲ್ ಆಗಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ, ಇಂದು ಸಿನಿಮಾ ರಂಗದಲ್ಲಿ ಬಹಳ ಹೆಸರು ಮಾಡಿದ್ದಾರೆ.

ಬ್ಯೂಟಿ ಪೆಜೇಂಟ್ ಗೆದ್ದು, ಹೆಸರಾಂತ ಮಾಡೆಲ್ ಆಗಿದ್ದ ಶ್ರೀನಿಧಿ ಶೆಟ್ಟಿ ಅವರು ಚಿತ್ರರಂಗಕ್ಕೆ ಬರಬೇಕು ಎಂದುಕೊಂಡಿದ್ದರು, ಇವರ ಮೊದಲ ಅವಕಾಶವೇ ಕೆಜಿಎಫ್ ಅಂತಹ ದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಕೆಜಿಎಫ್ 1 ಅಂಡ್ ಕೆಜಿಎಫ್2 ವಿಶ್ವಮಟ್ಟದಲ್ಲಿ ಎಷ್ಟು ದೊಡ್ಡದಾಗಿ ಹೆಸರು ಮಾಡಿತು ಎಂದು ನಮಗೆಲ್ಲಾ ಗೊತ್ತೇ ಇದೆ.

ಕೆಜಿಎಫ್ ಸಿನಿಮಾ ಸೂಪರ್ ಹಿಟ್ ಆಗಿದ್ದಕ್ಕೆ ಇವರಿಗೆ ದೊಡ್ಡ ಅಭಿಮಾನಿ ಬಳಗ, ಹೆಸರು, ಕೀರ್ತಿ ಎಲ್ಲವೂ ಸಿಕ್ಕಿತು. ಹಾಗೆಯೇ ಅಭಿಮಾನಿಗಳು ಶ್ರೀನಿಧಿ ಶೆಟ್ಟಿ ಅವರನ್ನು ಅತ್ತಿಗೆ, ಕೆಜಿಎಫ್ ಕ್ವೀನ್ ಎಂದು ಕರೆಯುವುದಕ್ಕೂ ಶುರು ಮಾಡಿದರು. ಕೆಜಿಎಫ್ ನಂತರ ಚಿಯಾನ್ ವಿಕ್ರಂ ಅವರೊಡನೆ ತಮಿಳಿನ ಕೋಬ್ರಾ ಸಿನಿಮಾದಲ್ಲಿ ನಟಿಸಿದರು ಶ್ರೀನಿಧಿ. ಈ ಸಿನಿಮಾ ಹೇಳಿಕೊಳ್ಳುವಂಥ ದೊಡ್ಡ ಹಿಟ್ ಆಗಲಿಲ್ಲ.

ಕೋಬ್ರಾ ನಂತರ ಶ್ರೀನಿಧಿ ಶೆಟ್ಟಿ ಅವರ ಇನ್ಯಾವುದೇ ಸಿನಿಮಾ ತೆರೆಕಂಡಿಲ್ಲ. ಆದರೆ ಇವರ ಮುಂದಿನ ಸಿನಿಮಾ ಅನೌನ್ಸ್ಮೆಂಟ್ ಆಗಿದ್ದು, ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಶ್ರೀನಿಧಿ. ಸುದೀಪ್ ಅವರ ಅಭಿಮಾನಿಗಳು ಸಹ, ಈ ಜೋಡಿ ಸ್ಕ್ರೀನ್ ಮೇಲೆ ಸೂಪರ್ ಆಗಿ ಕಾಣುತ್ತದೆ ಎಂದು ಇವರಿಬ್ಬರನ್ನು ಜೊತೆಯಾಗಿ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ರೀನಿಧಿ ಶೆಟ್ಟಿ ಸಾಕಷ್ಟು ಫೋಟೋಸ್ ಶೇರ್ ಮಾಡುತ್ತಾರೆ. ಇದೀಗ ಶ್ರೀನಿಧಿ ಶೆಟ್ಟಿ ಅವರು ಬ್ರೈಡಲ್ ಲುಕ್ ನಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಸ್ ಎಲ್ಲರ ಗಮನ ಸೆಳೆದಿದೆ. ಶ್ರೀನಿಧಿ ಶೆಟ್ಟಿ ಅವರ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Leave A Reply

Your email address will not be published.