Siddharth: ಶಿವಣ್ಣ ಅವರ ಕ್ಷಮೆ ಸ್ವೀಕರಿಸುವುದಿಲ್ಲ ಎಂದ ನಟ ಸಿದ್ಧಾರ್ಥ್, ಏಕಾಏಕಿ ಈ ರೀತಿ ಹೇಳಿದ್ದೇಕೆ?

Written by Pooja Siddaraj

Published on:

ತಮಿಳು ಚಿತ್ರರಂಗದ ನಟ ಸಿದ್ಧಾರ್ಥ್ ಅವರು ತಮ್ಮ ಸಿನಿಮಾ ಚಿತ್ತ ಸಕ್ಸಸ್ ಆಗಿರುವ ಸಂತೋಷದಲ್ಲಿದ್ದಾರೆ. ಇದು ಭಾವನಾತ್ಮಕವಾದ ಸಿನಿಮಾ ಆಗಿದ್ದು, ಜನರು ಕನೆಕ್ಟ್ ಆಗಿದ್ದಾರೆ, ಎಲ್ಲಾ ಭಾಷೆಯ ಸೈನಿಪ್ರೇಕ್ಷಕರಿಂದಲು ಚಿತ್ತ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಚಿತ್ತ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಚೆನ್ನೈನಲ್ಲಿ ನಡೆದಿದ್ದು, ಅಲ್ಲಿ ಮಾತನಾಡಿದ ನಟ ಸಿದ್ಧಾರ್ಥ್ ಅವರು ಕನ್ನಡ ನಟರಾದ ಶಿವ ರಾಜ್ ಕುಮಾರ್ ಮತ್ತು ಪ್ರಕಾಶ್ ರಾಜ್ ಅವರ ಕ್ಷಮೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಸಿದ್ಧಾರ್ಥ್ ಅವರು ಈ ರೀತಿ ಹೇಳುವುದಕ್ಕೆ ಕಾರಣ ಕರ್ನಾಟಕದಲ್ಲಿ ಅವರು ಪ್ರೆಸ್ ಮೀಟ್ ಮಾಡಿದಾಗ ನಡೆದ ಘಟನೆ ಆಗಿದೆ. ಸಿದ್ಧಾರ್ಥ್ ಅವರ ಚಿತ್ತ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ. ಕನ್ನಡ ವರ್ಷನ್ ಪ್ರೆಸ್ ಮೀಟ್ ಗಾಗಿ ಸಿದ್ಧಾರ್ಥ್ ಅವರು ಬೆಂಗಳೂರಿಗೆ ಬಂದಿದ್ದರು, ಆ ವೇಳೆ ಬೆಂಗಳೂರಿನಲ್ಲಿ ಕಾವೇರಿ ನೀರಿನ ಹೋರಾಟಕ್ಕಾಗಿ ಬಂದ್ ಕೂಡ ಮಾಡಲಾಗಿತ್ತು. ಆ ದಿನ ಪ್ರೆಸ್ ಮೀಟ್ ವೇಳೆ ಕೆಲವು ಕನ್ನಡಪರ ಹೋರಾಟಗಾರರು ಸಿದ್ಧಾರ್ಥ್ ಅವರಿಗೆ ಅವಮಾನ ಮಾಡಿದ್ದರು.

ಕಾವೇರಿ ಗಲಾಟೆ ನಡೆಯುತ್ತಿದೆ, ನೀವು ತಮಿಳಿನವರು ಸಿನಿಮಾ ಪ್ರೊಮೋಷನ್ ಗೆ ಬಂದಿದ್ದೀರಾ ಎಂದಾಗ ಸಿದ್ಧಾರ್ಥ್ ಅವರು ಪ್ರೆಸ್ ಮೀಟ್ ನಡೆದ ಸ್ಥಳದಿಂದ ಹೊರಟು ಹೋಗಿದ್ದರು. ಈ ಘಟನೆ ಬಳಿಕ ಶಿವಣ್ಣ ಅವರು ಸಿದ್ಧಾರ್ಥ್ ಅವರಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ನಟ ಪ್ರಕಾಶ್ ರಾಜ್ ಅವರು ಕೂಡ ಸಿದ್ಧಾರ್ಥ್ ಅವರಿಗೆ ಕ್ಷಮೆ ಕೇಳಿದ್ದಾರೆ. ಚೆನ್ನೈನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ನಟ ಸಿದ್ಧಾರ್ಥ್ ಅವರು ಈ ಇಬ್ಬರು ನಟರ ಕ್ಷಮೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಸಿದ್ಧಾರ್ಥ್ ಅವರು ಹೇಳಿರುವುದು ಏನು ಎಂದರೆ.. “ಚಿತ್ತ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದೇನೆ, 2 ವರ್ಷದ ಶ್ರಮ ಇದು. ಸಿನಿಮಾ ಜನರಿಗೆ ಇಷ್ಟವಾಗಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಎರಡನೇ ವಾರದ ಪ್ರದರ್ಶನ ನಡೆಯುತ್ತಿದೆ, ಇಲ್ಲಿ ನಾನು ಕಾವೇರಿ ಬಗ್ಗೆ, ರಾಜಕೀಯದ ಬಗ್ಗೆ ನನಗೆ ಕೇಳಬೇಡಿ. ಈಗ ನನ್ನ ಸಿನಿಮಾ ಮಾತ್ರ ನನಗೆ ಮುಖ್ಯ. ಕನ್ನಡದ ನಟರಾದ ಶಿವ ರಾಜ್ ಕುಮಾರ್ ಮತ್ತು ಪ್ರಕಾಶ್ ರಾಜ್ ಇಬ್ಬರು ಕೂಡ ದೊಡ್ಡವರು, ಅವರಿಗೆ ಈ ಘಟನೆಗೆ ಸಂಬಂಧ ಇಲ್ಲ.

ಅವರಿಬ್ಬರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ, ಅವರಿಬ್ಬರ ಕ್ಷಮೆಯನ್ನು ನಾನು ಸ್ವೀಕರಿಸುವುದಿಲ್ಲ. ಕನ್ನಡ ಜನತೆಗೂ ನನ್ನ ಸಿನಿಮಾ ಇಷ್ಟವಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ನನಗೆ ಯಾವುದೇ ತೊಂದರೆ ಆಗಿಲ್ಲ. ಅಂದು ಸಂಘಟನೆಯ 10 ಜನ ಬಂದು ಬೆದರಿಕೆ ಹಾಕಿದರು. ಆ ರೀತಿ ನಡೆದುಕೊಂಡಿದ್ದು ಅವರ ಸಮಸ್ಯೆ, ಮತ್ತೇನು ಇಲ್ಲ. ಅಂದು ಕರ್ನಾಟಕದಲ್ಲಿ ಪ್ರೆಸ್ ಮೀಟ್ ಮಾಡುವುದಕ್ಕೆ ಪರ್ಮಿಶನ್ ತಗೊಂಡಿದ್ದೇ. ಆವತ್ತು ಅಲ್ಲಿ ಬಂದ್ ಇರಲಿಲ್ಲ. ಬಂದ್ ಘೋಷಣೆ ಮಾಡಿದ್ದು ಮರುದಿನ, ನನ್ನ ಸಿನಿಮಾ ಅಲ್ಲಿನ ಜನರನ್ನು ತಲುಪಬೇಕು ಎಂದು ಆ ಪ್ರೆಸ್ ಮೀಟ್ ಅರೇಂಜ್ ಮಾಡಲಾಗಿತ್ತು..” ಎಂದು ಹೇಳಿದ್ದಾರೆ ನಟ ಸಿದ್ಧಾರ್ಥ್.

Leave a Comment