Vijay Raghavendra: ಪತ್ನಿಯ ನೆನಪಲ್ಲಿ ಮತ್ತೆ ಭಾವುಕರಾದ ನಟ ವಿಜಯ್ ರಾಘವೇಂದ್ರ!

Written by Pooja Siddaraj

Published on:

ನಟ ವಿಜಯ್ ರಾಘವೇಂದ್ರ ದೊಡ್ಮನೆ ಕುಟುಂಬದ ಕುಡಿ. ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಚಿನ್ನೇಗೌಡ ಅವರ ಮಗ ವಿಜಯ್ ರಾಘವೇಂದ್ರ ಅವರು. ಬಾಲನಟನಾಗಿಯೇ ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ, ಬಾಲನಟನ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಗೌರವ ಪಡೆದುಕೊಂಡ ಅಪರೂಪದ ಕಲಾವಿದರಲ್ಲಿ ವಿಜಯ್ ರಾಘವೇಂದ್ರ ಕೂಡ ಒಬ್ಬರು.

ನಿನಗಾಗಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟ ನಟ ವಿಜಯ್ ರಾಘವೇಂದ್ರ ಅವರು, ಬಳಿಕ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದರು. ಇಂದಿಗೂ ಕೂಡ ಸಿನಿಮಾ ಮತ್ತು ಸೀರೀಸ್ ಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ. ಇವರ ನಟನೆ ಬಗ್ಗೆ ಎರಡನೇ ಮಾತು ಆಡುವ ಹಾಗೆಯೇ ಇಲ್ಲ. ಆದರೆ ಕಳೆದ ಎರಡು ತಿಂಗಳುಗಳ ಹಿಂದೆ ವಿಜಯ್ ರಾಘವೇಂದ್ರ ಅವರ ಜೀವನದಲ್ಲಿ ಬಹಳ ದುಃಖದ ಘಟನೆ ಸಂಭವಿಸಿತು.

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಆಗಸ್ಟ್ 6ರಂದು ವಿಧಿವಶರಾದರು. ಥಾಯ್ಲೆಂಡ್ ಗೆ ತಮ್ಮ ಕಸಿನ್ಸ್ ಜೊತೆಗೆ ಪ್ರವಾಸಕ್ಕೆ ಹೋಗಿದ್ದಾಗ, ಅಲ್ಲಿಯೇ ಹಾರ್ಟ್ ಅಟ್ಯಾಕ್ ಆಗಿ ವಿಧಿವಶರಾದರು. ಈ ಘಟನೆ ಕನ್ನಡ ಚಿತ್ರರಂಗಕ್ಕೆ ಶಾಕ್ ನೀಡಿತ್ತು, ಸ್ಪಂದನಾ ಅವರು ಬಹಳ ಒಳ್ಳೆಯ ವ್ಯಕ್ತಿ ಆಗಿದ್ದರು. ಈಗ ಸ್ಪಂದನಾ ಅವರು ವಿಧಿವಶರಾಗಿ ಎರಡು ತಿಂಗಳು ಕಳೆದಿದೆ. ಆದರೆ ಇಂದಿಗೂ ಅವರ ನೆನಪು ಮಾತ್ರ ಕಡಿಮೆ ಆಗಿಲ್ಲ.

ವಿಜಯ್ ರಾಘವೇಂದ್ರ ಅವರು ಆಗಾಗ ತಮ್ಮ ಪತ್ನಿಯ ಬಗ್ಗೆ ಭಾವನಾತ್ಮಕ ಪೋಸ್ಟ್ ಶೇರ್ ಮಾಡುತ್ತಾರೆ. ನಿನ್ನೆ ವಿಜಯ್ ರಾಘವೇಂದ್ರ ಅವರ ಪತ್ನಿ ವಿಧಿವಶರಾಗಿ 2 ತಿಂಗಳು ಕಳೆದಿದ್ದು, ಈ ಕಾರಣಕ್ಕೆ ವಿಜಯ್ ರಾಘವೇಂದ್ರ ಅವರು ಪತ್ನಿ ಜೊತೆಗಿರುವ ಫೋಟೋ ಒಂದನ್ನು ಶೇರ್ ಮಾಡಿ ಭಾವನಾತ್ಮಕ ಸಾಲೊಂದನ್ನು ಬರೆದಿದ್ದಾರೆ. “ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಮಂದಹಾಸ.. ಐ ಲವ್ ಯೂ ಚಿನ್ನ..” ಎಂದು ಬರೆದಿದ್ದಾರೆ.

ಈ ಪೋಸ್ಟ್ ಗೆ ನೆಟ್ಟಿಗರು ಕಮೆಂಟ್ಸ್ ಬರೆದು, ವಿಜಯ್ ರಾಘವೇಂದ್ರ ಅವರಿಗೆ ಸಮಾಧಾನ ಮಾಡುತ್ತಿದ್ದಾರೆ. ವಿಜಯ್ ರಾಘವೇಂದ್ರ ಅವರು ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ವೃತ್ತಿಯಲ್ಲಿ ಬ್ಯುಸಿ ಇದ್ದು, ನೋವು ಕೊಡುವ ವಿಚಾರದಿಂದ ದೂರ ಉಳಿಯುತ್ತಿದ್ದಾರೆ.

Leave a Comment