ಬಹುನಿರೀಕ್ಷಿತ ಓಡಿಐ ವಿಶ್ವಕಪ್ ಟೂರ್ನಿ ಮೊನ್ನೆಯಷ್ಟೇ ಚಾಲನೆ ಸಿಕ್ಕಿದ್ದು, ಭಾರತದಲ್ಲಿಯೇ ವರ್ಲ್ಡ್ ಕಪ್ ನಡೆಯುತ್ತಿದೆ. ವಿಶ್ವದ ಎಲ್ಲಾ ತಂಡಗಳು ಕೂಡ ಭಾರತದಲ್ಲಿ ಬೀಡುಬಿಟ್ಟಿದೆ. ಇನ್ನು ಭಾರತ ತಂಡವು ಕೂಡ ಅಭ್ಯಾಸ ಮಾಡುತ್ತಿದೆ. ಆಕ್ಟೊಬರ್ 8ರಂದು ಓಡಿಐ ವರ್ಲ್ಡ್ ಕಪ್ ನಲ್ಲಿ ಭಾರತ ತಂಡದ ಮೊದಲ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ (ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ). ಈ ಪಂದ್ಯಕ್ಕಾಗಿ ಇಡೀ ಭಾರತ ದೇಶವೇ ಎದುರು ನೋಡುತ್ತಿದೆ.
ಮೊದಲ ಪಂದ್ಯ ಶುರುವಾಗುವುದಕ್ಕಿಂತ ಮೊದಲೇ ಭಾರತ ತಂಡದಿಂದ ಇಬ್ಬರು ಆಟಗಾರರು ತಂಡದಿಂದ ಹೊರಬಂದಿದ್ದಾರೆ. ಒಬ್ಬರು ಆರಂಭಿಕ ಬ್ಯಾಟ್ಸ್ಮನ್ ಮತ್ತು ಒಬ್ಬರು ಆಲ್ ರೌಂಡರ್ ಇಬ್ಬರು ಕೂಡ ತಂಡದಿಂದ ಹೊರಬಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಮೊದಲ ಪಂದ್ಯದಲ್ಲೇ ಭಾರತ ತಂಡವು ಈಗಾಗಲೇ 5 ಸಾರಿ ವಿಶ್ವಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡಲಿದೆ.
ಮೊದಲ ಪಂದ್ಯ ಶುರು ಆಗುವುದಕ್ಕಿಂತ ಮೊದಲೇ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಶುಬ್ಮನ್ ಗಿಲ್ ಅವರಿಗೆ ಡೆಂಗ್ಯೂ ಬಂದಿದೆ ಎಂದು ಗೊತ್ತಾಗಿದ್ದು, ಈ ಕಾರಣಕ್ಕೆ ಅವರು ಮೊದಲ ಪಂದ್ಯದಲ್ಲಿ ಶುಬ್ಮನ್ ಗಿಲ್ ಅವರು ಅಡುವುದಿಲ್ಲ ಎಂದು ಮಾಹಿತಿ ಸಿಕ್ಕಿದ್ದು, ಶುಬ್ಮನ್ ಗಿಲ್ ಅವರಿಗೆ ಈಗ ರೆಸ್ಟ್ ಅವಶ್ಯಕತೆ ಇದೆ ಎನ್ನಲಾಗಿದ್ದು, ಈ ಕಾರಣಕ್ಕೆ ಶುಬ್ಮನ್ ಗಿಲ್ ಅವರು ವರ್ಲ್ಡ್ ಕಪ್ ಮೊದಲ ಪಂದ್ಯವನ್ನು ಅಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಭಾರತ ತಂಡದ ಆಲ್ ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಅವರು ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನೆಟ್ಸ್ ನಲ್ಲಿ ಅಭ್ಯಾಸ ಮಾಡುವಾಗ ಹಾರ್ದಿಕ್ ಪಾಂಡ್ಯ ಅವರಿಗೆ ಗಾಯವಾಗಿದ್ದು, ಅವರು ಕೂಡ ಮೊದಲ ಪಂದ್ಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮಾಹಿತಿ ಸಿಕ್ಕಿಲ್ಲ. ಹಾರ್ದಿಕ್ ಪಾಂಡ್ಯ ಅವರು ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವಾಗ, ಈ ನಡುವೆ ಆದ ಗಾಯ ಗಂಭೀರ ಅಲ್ಲದೇ ಇದ್ದರು ಕೂಡ ಪ್ರಾಕ್ಟೀಸ್ ಮಾಡಬಾರದು ಎಂದು ಹೇಳಲಾಗಿದೆ. ಹಾಗಾಗಿ ಇವರು ಕೂಡ ವರ್ಲ್ಡ್ ಕಪ್ ಇಂದ ದೂರವೇ ಉಳಿದಿದ್ದಾರೆ.