Sukrutha Nag: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರ ಕ್ಯೂಟ್ ಹುಡುಗಿ ಸುಕೃತಾ?

Written by Pooja Siddaraj

Published on:

ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗುವುದಕ್ಕೆ ಇನ್ನೊಂದು ದಿನ ಮಾತ್ರ ಉಳಿದಿದೆ. ನಾಳೆ ಬಿಬಿಕೆ10 ಶೋ ಅಧಿಕೃತವಾಗಿ ಲಾಂಚ್ ಆಗಲಿದೆ. ಬಿಗ್ ಬಾಸ್ ಮನೆಯ ನಿರ್ಮಾಣ ಮತ್ತು ಇನ್ನಿತರ ಕೆಲಸಗಳು ಕೂಡ ನಡೆದಿದೆ. ನಾಳೆ ಸಂಜೆ 6 ಗಂಟೆಗೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಪ್ರತಿ ವರ್ಷ ಬಿಗ್ ಬಾಸ್ ಶೋ ಶುರುವಾಗುವಾಗ ಬಿಗ್ ಮನೆಯೊಳಗೆ ಎಂಟ್ರಿ ಕೊಡುವ ಸದಸ್ಯರು ಯಾರೆಲ್ಲಾ ಇರುತ್ತಾರೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತದೆ. ಈ ವರ್ಷ ಕೂಡ ಅದೇ ರೀತಿ ಚರ್ಚೆ ಶುರುವಾಗಿದ್ದು, ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಸುಕೃತಾ ನಾಗ್ ಅವರು ಬಿಗ್ ಬಾಸ್ ಶೋಗೆ ಹೋಗುತ್ತಾರಾ ಎನ್ನುವ ಹೊಸ ಚರ್ಚೆಯೊಂದು ಶುರುವಾಗಿದೆ.

ಸುಕೃತಾ ನಾಗ್ ಅವರು ಅಗ್ನಿಸಾಕ್ಷಿ ಧಾರವಾಹಿ ಮೂಲಕ ಹೆಚ್ಚು ಫೇಮಸ್ ಅದರು, ಅಗ್ನಿಸಾಕ್ಷಿ ನೋಡಿದ ಎಲ್ಲರೂ ಕೂಡ ಇದ್ದರೆ ಇಂಥ ತಂಗಿ ಇರಬೇಕು ಎಂದು ಹೇಳುತ್ತಿದ್ದರು. ಬಾಲನಟಿಯಾಗಿ ಕೂಡ ಸುಕೃತಾ ಅವರು ಸಕ್ರಿಯವಾಗಿದ್ದರು, ಸುಮಾರು 25ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಗ್ನಿಸಾಕ್ಷಿ ಬಳಿಕ ಒಂದು ಗ್ಯಾಪ್ ತೆಗೆದುಕೊಂಡಿದ್ದ ಸುಕೃತಾ ನಾಗ್ ಅವರು ಲಕ್ಷಣ ಧಾರವಾಹಿ ಮೂಲಕ ಮತ್ತೆ ಕಿರುತೆರೆಗೆ ಬಂದರು.

ಲಕ್ಷಣ ಧಾರವಾಹಿಯಲ್ಲಿ ಮೊದಲ ಬಾರಿಗೆ ಸುಕೃತ ಅವರು ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ಶ್ವೇತಾ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸುತ್ತಿದ್ದರು ಸುಕೃತಾ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗುವ ಕಾರಣಕ್ಕೆ ಲಕ್ಷಣ ಧಾರವಾಹಿ ಕೊನೆಯಾಗುತ್ತಿದೆ. ಧಾರವಾಹಿ ಮುಗಿಯುತ್ತಿರುವ ವೇಳೆ ಸುಕೃತಾ ಅವರು ಕೊನೆಯ ದಿನದ ಚಿತ್ರೀಕರಣದ ವೇಳೆ ತಮ್ಮ ತಂಡದ ಜೊತೆಗಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು.

ಇದೀಗ ಲಕ್ಷಣ ಧಾರವಾಹಿ ಮುಗಿಯುತ್ತಿರುವ ಕಾರಣ ಸುಕೃತಾ ಅವರು ಬಿಗ್ ಬಾಸ್ ಮನೆಗೆ ಹೋಗುತ್ತಾರಾ ಎನ್ನುವ ಪ್ರಶ್ನೆಯೊಂದು ಶುರುವಾಗಿದೆ. ಈಗ ಲಕ್ಷಣ ಧಾರವಾಹಿ ಕೂಡ ಮುಗಿದಿದ್ದು, ಸುಕೃತಾ ಅವರು ಇನ್ಯಾವುದೇ ಧಾರವಾಹಿಯಲ್ಲಿ ನಟಿಸುತ್ತಿರುವ ಬಗ್ಗೆ ಅಪ್ಡೇಟ್ ನೀಡದೆ ಇರುವ ಕಾರಣ ಇವರು ಕೂಡ ಬಿಗ್ ಬಾಸ್ ಮನೆಗೆ ಬರಬಹುದು ಎನ್ನಲಾಗುತ್ತಿದ್ದು, ನಿಜಕ್ಕೂ ಸುಕೃತಾ ಅವರು ಬಿಗ್ ಬಾಸ್ ಮನೆಗೆ ಹೋಗುತ್ತಾರಾ ಎನ್ನುವುದನ್ನು ತಿಳಿಯಲು ನಾಳೆಯವರೆಗೂ ಕಾಯಬೇಕಿದೆ.

Leave a Comment