RBI: ಬ್ಯಾಂಕ್ ಲೋನ್ ಕಟ್ಟೋಕೆ ಕಷ್ಟಪಡ್ತಿದ್ದೀರಾ? RBI ಇಂದ ಗುಡ್ ನ್ಯೂಸ್, ಇನ್ಮುಂದೆ ನಿಮ್ಮ ಕಷ್ಟ ಕಳೀತು

0 34

ಒಂದು ವೇಳೆ ನೀವು ಬ್ಯಾಂಕ್ ಇಂದ ಲೋನ್ ಪಡೆದಿದ್ದು, ಲೋನ್ ಕಟ್ಟುವುದಕ್ಕೆ ಕಷ್ಟ ಪಡುತ್ತಿದ್ದರೆ, ರಿಯಲ್ ಎಸ್ಟೇಟ್ ಗೆ ಬೇಡಿಕೆ ಹೆಚ್ಚಾಗಿ ಎಲ್ಲದರ ಬೆಲೆ ಜಾಸ್ತಿ ಆಗುತ್ತಿರುವ ಈ ಸಮಯದಲ್ಲಿ ಕೂಡ ನೀವು ಹೊಸ ಮನೆ ಕೊಂಡುಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದರೆ, RBI ಇಂದ ನಿಮಗೆ ಒಂದು ಒಳ್ಳೆಯ ಸುದ್ದಿ ಸಿಕ್ಕಿದೆ. ಇತ್ತೀಚೆಗೆ RBI 4ನೇ ಹಣಕಾಸು ನೀತಿ ಪರಾಮರ್ಶೆಯನ್ನು ನಡೆಸಿ, ಆ ಸಭೆಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಈ ವೇಳೆ ರೆಪೊ ದರವನ್ನು ಈಗಿದ್ದಷ್ಟೇ ಮುಂದುವರಿಸಬೇಕು ಎಂದು ನಿರ್ಧಾರ ಮಾಡಿದೆ.

ಏಪ್ರಿಲ್, ಜೂನ್, ಆಗಸ್ಟ್, ಬಳಿಕ ಆಕ್ಟೊಬರ್ ನಲ್ಲಿ ಕೂಡ ರೆಪೊ ರೇಟ್ ನಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಲಾಗಿದೆ. RBI ಗವರ್ನರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಶಶಿಕಾಂತ್ ದಾಸ್ ಅವರು ಮಾಹಿತಿ ನೀಡಿದ್ದು, 6 ಸದಸ್ಯರ ತಂಡದ ಜೊತೆಗೆ ಚರ್ಚಿಸಿ ತೆಗೆದುಕೊಂಡಿರುವ ನಿರ್ಧಾರದ ಮಾಹಿತಿ ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ 4ನೇ ಸಾರಿ ಎಲ್ಲಾ ಸದಸ್ಯರು ಸೇರಿ ರೆಪೊ ರೇಟ್ ಜಾಸ್ತಿ ಮಾಡದೆ ಇರಲು ನಿರ್ಧಾರ ಮಾಡಲಾಗಿದೆ..

6.5% ನಲ್ಲೇ ರೆಪೊ ರೇಟ್ ಉಳಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೊದಲು ಹಣದುಬ್ಬರದ ಪರಿಸ್ಥಿತಿ ಇದ್ದಾಗ, ಅದನ್ನು ಕಂಟ್ರೋಲ್ ಮಾಡಲು, 2022ರ ಮೇ ತಿಂಗಳಿನಿಂದ 2023ರ ಮಾರ್ಚ್ ವರೆಗು ರೆಪೊ ರೇಟ್ ಅನ್ನು 2.5% ಜಾಸ್ತಿ ಮಾಡಿತ್ತು. ಆದರೆ ಈ ಸಾರಿ ಬರೋಬ್ಬರಿ 4ನೇ ಸಾರಿ ಈ ಮೊದಲೇ ಇದ್ದ ರೆಪೊ ರೇಟ್ ಅನ್ನು ಉಳಿಸಿಕೊಂಡು ಬಂದಿದೆ RBI. ಹೀಗೆ ರೆಪೊ ರೇಟ್ ಏರಿಕೆ ಆಗದೆ ಇರುವ ಕಾರಣ ನೀವು ಕಟ್ಟುವ EMI ಮೇಲೆ ಕೂಡ ಯಾವುದೇ ಎಫೆಕ್ಟ್ ಆಗುವುದಿಲ್ಲ..

ಆದರೆ ಇದರ ಜೊತೆಗೆ ಒಂದು ಬೇಸರದ ಸುದ್ದಿ ಕೂಡ ಇದ್ದು, ಬ್ಯಾಂಕ್ ಗಳು ನೀಡಿರುವ ಮಾಹಿತಿಯ ಪ್ರಕಾರ, ಮುಂದಿನ ದಿನಗಳಲ್ಲಿ FD ಮೇಲೆ ನಿಗದಿ ಆಗಿರುವ ಬಡ್ಡಿದರಗಳು ಕಡಿಮೆ ಆಗಬಹುದು ಎಂದು ಹೇಳಲಾಗುತ್ತಿದೆ. ಕಳೆದ 4 ವರ್ಷಗಳಿಂದ ರೆಪೊ ರೇಟ್ ಹೆಚ್ಚಿನ ಮಟ್ಟದಲ್ಲಿ ಇದ್ದು, ನಾಲ್ಕು ವರ್ಷಗಳಿಂದ ಈ ದಾಖಲೆಯ ಮೊತ್ತ ಹಾಗೆಯೇ ಉಳಿಸಿಕೊಂಡು ಬಂದಿದೆ.

ಹಣದುಬ್ಬರದ ಒತ್ತಡ ಜಾಸ್ತಿ ಇದ್ದ ಕಾರಣ, ಬಡ್ಡಿದರವನ್ನು ಜಾಸ್ತಿ ಮಾಡಬೇಕು ಎನ್ನುವ ನಿರ್ಧಾರವನ್ನು ಸಹ RBI ಮಾಡಿತ್ತು. ರೆಪೊ ರೇಟ್ ಅಂದ್ರೆ ಏನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. RBI ಇಂದ ಬ್ಯಾಂಕ್ ಗಳು ಪಡೆಯುವ ಸಾಲದ ದರಕ್ಕೆ ರೆಪೊ ರೇಟ್ ಎಂದು ಕರೆಯುತ್ತಾರೆ. ರೆಪೊ ರೇಟ್ ಜಾಸ್ತಿಯಾದರೆ, ಬ್ಯಾಂಕ್ ಗಳಿಗೆ RBI ಇಂದ ಸಿಗುವ ಸಾಲದ ದರ ದುಬಾರಿ ಆಗಿರುತ್ತದೆ. ಈ ರೀತಿ ಆದಾಗ ಸಾಮಾನ್ಯ ಗ್ರಾಹಕರು ಬ್ಯಾಂಕ್ ಇಂದ ಪಡೆಯುವ ಹೋಮ್ ಲೋನ್, ಪರ್ಸನಲ್ ಲೋನ್, ವೆಹಿಕಲ್ ಲೋನ್ ಇವುಗಳ ಮೇಲಿನ ಬಡ್ಡಿದರ ಜಾಸ್ತಿಯಾಗುತ್ತದೆ. ಇದು ನೀವು ಪಾವತಿ ಮಾಡುವ ಸಾಲದ ಬಡ್ಡಿ ಮೇಲೆ ಪರಿಣಾಮ ಬೀರುತ್ತದೆ.

Leave A Reply

Your email address will not be published.