Tirupati: ತಿರುಪತಿ ದೇವಸ್ಥಾನದ ಬೀದಿಗಳಲ್ಲಿ ಭಿಕ್ಷುಕನ ಹಾಗೆ ಓಡಾಡಿದ ಖ್ಯಾತ ನಟ! ಏನಾಗಿದೆ ಗೊತ್ತಾ?

0 17

Tirupati: ತಿರುಪತಿ ದೇವಸ್ಥಾನ ಎಂದರೆ ಅಲ್ಲಿನ ಜನದಟ್ಟಣೆ ಬಗ್ಗೆ ಹೇಳುವ ಹಾಗೆ ಇಲ್ಲ. ಇಡೀ ವರ್ಷ ಜನಸಂದಣಿ ಇಂದ ತುಂಬಿ ತುಳುಕಾಡುತ್ತಲೇ ಇರುತ್ತದೆ ತಿರುಪತಿ ದೇವಸ್ಥಾನ. ಇದೀಗ ಈ ದೇವಸ್ಥಾನದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರೊಬ್ಬರು ಭಿಕ್ಷುಕನ ಹಾಗೆ ಓಡಾಡಿದ್ದಾರೆ. ನಿಜಕ್ಕೂ ಏನಾಗಿದೆ? ಆ ನಟ ಯಾರು ಗೊತ್ತಾ?

ಹೀಗೆ ತಿರುಪತಿ ದೇವಸ್ಥಾನದ ಬೀದಿಗಳಲ್ಲಿ ಭಿಕ್ಷುಕನ ಹಾಗೆ ಓಡಾಡುತ್ತಿರುವ ನಟ ಮತ್ಯಾರು ಅಲ್ಲ, ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ನಟ ರಜನಿಕಾಂತ್ ಅವರ ಮಾಜಿ ಅಳಿಯ ಧನುಷ್ ಅವರು. ಹೌದು, ಧನುಷ್ ಅವರೇ ಈ ರೀತಿ ಓಡಾಡಿದ್ದಾರೆ, ಆದರೆ ಇದು ಸಿನಿಮಾ ಚಿತ್ರೀಕರಣಕ್ಕಾಗಿ ಎನ್ನಲಾಗಿದೆ. ಧನುಷ್ ಅವರ 51ನೇ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾ ಶೂಟಿಂಗ್ ನಡೆಯುತ್ತಿರುವುದು ತಿರುಪತಿಯಲ್ಲಿ.

ಇದೊಂದು ಮಾಸ್ ಗ್ಯಾಂಗ್ಸ್ಟರ್ ಸಿನಿಮಾ ಆಗಿದ್ದು, ಚಿತ್ರೀಕರಣದ ದೃಶ್ಯಗಳನ್ನು ತಿರುಪತಿಯ ಬೀದಿಗಳಲ್ಲಿ, ಜನರ ನಡುವೆಯೇ ಶೂಟಿಂಗ್ ಮಾಡಲಾಗಿದೆ. ಇದರಿಂದ ಜನರಿಗೆ ಕಿರಿ ಕಿರಿ ಆಗಿರುವುದು ಹೌದು. ಇನ್ನು ಈ ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ತಮಿಳಿನಲ್ಲಿ ರಶ್ಮಿಕಾ ಅವರು ನಟಿಸುತ್ತಿರುವ 3ನೇ ಸಿನಿಮಾ ಆಗಿದೆ. ಇನ್ನು ತಿರುಪತಿಯ ಸ್ಥಳೀಯ ಜನರು ಧನುಷ್ ಅವರನ್ನು ನೋಡಿ ಶಾಕ್ ಆಗಿದ್ದಾರೆ.

Leave A Reply

Your email address will not be published.