Trisha: ‘ತ್ರಿಷಾ ಜೊತೆ ಬೆಡ್ ರೂಮ್ ಗೆ ಹೋಗ್ತೀನಿ ಅನ್ಕೊಂಡಿದ್ದೆ’: ಹೇಳಿಕೆಗೆ ಸಮರ್ಥನೆ ನೀಡಿದ ನಟ ಮನ್ಸೂರ್ ಅಲಿ ಖಾನ್!

Written by Pooja Siddaraj

Published on:

Trisha: ಇತ್ತೀಚೆಗೆ ತಮಿಳು ಚಿತ್ರರಂಗದ ಖ್ಯಾತ ನಟ ಮನ್ಸೂರ್ ಅಲಿ ಖಾನ್ ಅವರು ನಟಿ ತ್ರಿಷಾ ಅವರ ವಿಚಾರದಲ್ಲಿ ನೀಡಿದ್ದ ಹೇಳಿಕೆ ಒಂದು ಭಾರಿ ವೈರಲ್ ಆಯಿತು. ಇದಕ್ಕೆ ನಟಿ ತ್ರಿಷಾ ಅವರು ಪ್ರತಿಕ್ರಿಯಿಸಿ, ಟ್ವೀಟ್ ಮಾಡಿದ್ದರು, ಮನುಷ್ಯವಿಲ್ಲದ ವ್ಯಕ್ತಿತ್ವ ಎಂದು ಹೇಳಿದ್ದರು ನಟಿ ತ್ರಿಷಾ. ಇದೀಗ ನಟ ಮನ್ಸೂರ್ ಅಲಿ ಖಾನ್ ಅವರು ತಾವು ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆಯನ್ನು ತಿರುಚಿ ಹಾಕಲಾಗಿದೆ ಎಂದಿದ್ದಾರೆ.

ಮನ್ಸೂರ್ ಅಲಿ ಖಾನ್ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ, ಲಿಯೋ ಸಿನಿಮಾದಲ್ಲಿ ತ್ರಿಷಾ ನಟಿಸುತ್ತಿದ್ದಾರೆ ಎಂದಾಗ ನನಗೆ ಟೆಂಪ್ಟ್ ಆಗಿತ್ತು, ಆಕೆಯನ್ನು ರೇಪ್ ಮಾಡುವ ಸೀನ್ ಇರುತ್ತದೆ, ಅವಳನ್ನ ಎತ್ತಿಕೊಂಡು ಬೆಡ್ ರೂಮ್ ಗೆ ಹೋಗ್ತೀನಿ ಅಂತ ಅಂದುಕೊಂಡಿದ್ದೆ. ಆ ಥರದ ಸೀನ್ ಲಿಯೋ ಸಿನಿಮಾದಲ್ಲಿ ಇರಲಿಲ್ಲ ಎಂದು ನಟ ಮನ್ಸೂರ್ ಅಲಿ ಖಾನ್ ಹೇಳಿಕೆ ನೀಡಿದ್ದರು.

ಈ ವಿಡಿಯೋ ಹೊರಬರುತ್ತಿದ್ದ ಹಾಗೆಯೇ ಸಾಕಷ್ಟು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದರು ನಟಿ ತ್ರಿಶಾ ಅವರು ಸಹ ಟ್ವೀಟ್ ಮಾಡಿ, ಈ ಹೇಳಿಕೆ ಇಂದ ಅವರ ಮನಸ್ಸಿಗೆ ಎಷ್ಟು ನೋವಾಗಿದೆ ಎನ್ನುವುದನ್ನು ತಿಳಿಸಿದ್ದರು. ಇದು ಮನುಷ್ಯತ್ವ ಇರುವವರು ಮಾತನಾಡುವ ರೀತಿ ಅಲ್ಲ ಎಂದು ಹೇಳಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಹ ಈ ಸುದ್ದಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಈಗ ಮನ್ಸೂರ್ ಅಲಿ ಖಾನ್ ಅವರು ತಾವು ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ..

ಮನ್ಸೂರ್ ಅವರು ಹೇಳಿದ ಮಾತುಗಳನ್ನ ಟ್ರಿಮ್ ಮಾಡಿ, ಆ ಥರದ ಹೇಳಿಕೆ ಬಂದಿರುವ ಮಾತುಗಳನ್ನು ಮಾತ್ರ ವೈರಲ್ ಮಾಡಲಾಗಿದೆಯಂತೆ. ಆದರೆ ನಿಜಕ್ಕೂ ಮನ್ಸೂರ್ ಅಲಿ ಖಾನ್ ಅವರು ಇನ್ನು ಹೆಚ್ಚು ಮಾತನಾಡಿದ್ದು, ತ್ರಿಷಾ ಅವರನ್ನು ಹೊಗಳಿದ್ದಾರಂತೆ, ಮೊದಲಿನ ಹಾಗೆ ನಾಯಕಿಯರ ಜೊತೆಗೆ ಇರುತ್ತಿದ್ದ ದೃಶ್ಯಗಳು, ಹಾಗೂ ನಾಯಕಿಯರ ಜೊತೆಗೆ ನಟಿಸುವ ಅವಕಾಶ ಈಗ ಸಿಗುತ್ತಿಲ್ಲ ಎಂದು ಹೇಳಿದ್ದಾರೆ ಮನ್ಸೂರ್.

ತಾವು ಈವರೆಗು 360ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಸಾಕಷ್ಟು ಕಲಾವಿದರ ಜೊತೆಗೆ ಕೆಲಸ ಮಾಡಿದ್ದು, ಯಾರಿಗೂ ಅಗೌರವದಿಂದ ಮಾತನಾಡಿಲ್ಲ, ತ್ರಿಶಾ ಅವರು ಕೂಡ ಟ್ರಿಮ್ ಆಗಿರುವ ವಿಡಿಯೋ ನೋಡಿ ಆ ರೀತಿ ಅಂದುಕೊಂಡಿರಬಹುದು ಎಂದು ಹೇಳಿದ್ದಾರೆ ನಟ ಮನ್ಸೂರ್. ಒಟ್ಟಿನಲ್ಲಿ ಈ ಹೇಳಿಕೆಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave a Comment