Virat Kohli:ಕ್ರಿಕೆಟರ್ ಗಳು ಸಿನಿಮಾ ಕಲಾವಿದರನ್ನು ಮದುವೆ ಆಗಿರುವುದು ಹೊಸ ವಿಚಾರ ಅಲ್ಲ. ಈ ಹಿಂದೆಯೇ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ. ಅದೇ ಸಾಲಿಗೆ ಸೇರುವ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ ಈ ಜೋಡಿ, 2017ರಲ್ಲಿ ಇಟಲಿಯಲ್ಲಿ ತಮ್ಮ ಆತ್ಮೀಯ ಬಳಗದವರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿ ಇಂದು ಎಲ್ಲಾ ಅಭಿಮಾನಿಗಳ ಮೆಚ್ಚಿನ ಜೋಡಿ ಆಗಿದ್ದಾರೆ ಎಂದರೆ ತಪ್ಪಲ್ಲ.
ವಿರುಷ್ಕಾ ದಂಪತಿಗೆ ಪ್ರಪಂಚಾದ್ಯಂತ ಕೋಟಿಗಟ್ಟಲೇ ಅಭಿಮಾನಿಗಳಿದ್ದಾರೆ. ಈ ಜೋಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಈ ಜೋಡಿ ಬಗ್ಗೆ ಹೊಸದೊಂದು ಸುದ್ದಿ ಕೇಳಿಬಂದಿದ್ದು, ಅಭಿಮಾನಿಗಳು ಈ ಸುದ್ದಿ ನಿಜವಾಗಿರಲಿ ಆದಷ್ಟು ಬೇಗ ಈ ವಿಚಾರದ ಬಗ್ಗೆ ವಿರುಷ್ಕಾ ದಂಪತಿ ಅಧಿಕೃತವಾಗಿ ಮಾಹಿತಿ ನೀಡಲಿ ಎಂದು ಕಾಯುತ್ತಿದ್ದಾರೆ..
ವಿರಾಟ್ ಅನುಷ್ಕಾ ದಂಪತಿಗಳಿಗೆ 2021ರಲ್ಲಿ ಹೆಣ್ಣುಮಗು ಜನಿಸಿತು. ತಮ್ಮ ಮುದ್ದು ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ ಈ ಜೋಡಿ. ಇವರಿಬ್ಬರು ಕೂಡ ಇದುವರೆಗೂ ತಮ್ಮ ಮಗುವಿನ ಮುಖವನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿಲ್ಲ. ಮಗುವಿನ ವಿಚಾರದಲ್ಲಿ ತಮಗೆ ಪ್ರೈವೆಸಿ ನೀಡಬೇಕು ಎಂದು ಮಾಧ್ಯಮದವರನ್ನು ಕೂಡ ಕೇಳಿಕೊಂಡಿದ್ದಾರೆ. ಮಗುವಿಗೆ 2 ವರ್ಷ ತುಂಬಿದ್ದರು ಈಗಲೂ ಅದೇ ಮಾತನ್ನು ಪಾಲಿಸಿಕೊಂಡು ಬರುತ್ತಿದ್ದಾರೆ..
ಇದೀಗ ಈ ಜೋಡಿ ಬಗ್ಗೆ ಕೇಳಿಬರುತ್ತಿರುವ ಹೊಸ ವಿಚಾರ ಏನು ಎಂದರೆ, ವಿರುಷ್ಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯ ಮೂಲಕ ತಿಳಿದುಬಂದಿದೆ. ಅನುಷ್ಕಾ ಅವರಿಗೆ ಈಗ 35 ವರ್ಷ, ಇದೀಗ ಇವರು ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ, ಇದೇ ಕಾರಣಕ್ಕೆ ಅನುಷ್ಕಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ, ವಿರಾಟ್ ಅವರ ಜೊತೆಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ವಿರುಷ್ಕಾ ಜೋಡಿ ಜೊತೆಯಾಗಿ ಆಸ್ಪತ್ರೆಯೊಂದರಲ್ಲಿ ಕಾಣಿಸಿಕೊಂಡಿದ್ದು, ಆ ವೇಳೆ ಪಾಪಾರಾಜಿಗಳು ಇಬ್ಬರ ಫೋಟೋ ಸೆರೆಹಿಡಿದಿದ್ದಾರೆ. ಆದರೆ ವಿರುಷ್ಕಾ ಜೋಡಿ ಫೋಟೋಗಳನ್ನು ಪ್ರಕಟಿಸಬಾರದು ಎಂದು ಮನವಿ ಮಾಡಿರುವುದರಿಂದ ಫೋಟೋಗಳು ಹೊರಬಂದಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಶೀಘ್ರದಲ್ಲೇ ಇಬ್ಬರು ಈ ವಿಚಾರವನ್ನು ಅಧಿಕೃತವಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ..
ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರಿಬ್ಬರ ಅಭಿಮಾನಿಗಳು ಈ ವಿಚಾರ ಕೇಳಿ ಸಂತೋಷಪಟ್ಟಿದ್ದಾರೆ. ಇತ್ತೀಚೆಗೆ ಅನುಷ್ಕಾ ಅವರು ತಾಯ್ತನದ ಬಗ್ಗೆ ಮಾತನಾಡಿದ್ದರು, ಆ ಮಾತುಗಳು ಕೂಡ ವೈರಲ್ ಆಗಿದ್ದವು. ಇದೀಗ ಎರಡನೇ ಮಗುವಿನ ವಿಚಾರಕ್ಕೆ ಮತ್ತೊಮ್ಮೆ ಸುದ್ದಿಯಾಗಿದೆ ಈ ಜೋಡಿ..