Yash: ಯಶ್ ಹೊಸ ಸಿನಿಮಾ ಅನೌನ್ಸ್ ಆದ್ರೂ ಅಭಿಮಾನಿಗಳಿಗೆ ಬೇಸರ! ಏನಾಗಿದೆ ಗೊತ್ತಾ?

0 22

Yash: ರಾಕಿ ಭಾಯ್ ಯಶ್ ಅವರ ಅಭಿಮಾನಿಗಳು ಕಾಯುತ್ತಿದ್ದ ಘಳಿಗೆ ಕೊನೆಗೂ ಬಂದಿದೆ. ಇಂದು ಬೆಳಗ್ಗೆ ಯಶ್19 ಟೈಟಲ್ ಅನೌನ್ಸ್ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ ಇದೊಂದು ಹೊಸ ಬಗೆಯ ಸಿನಿಮಾ ಆಗಿದ್ದು, ಫಸ್ಟ್ ಲುಕ್ ನಲ್ಲಿಯೇ ಅಭಿಮಾನಿಗಳ ಗಮನ ಸೆಳೆದಿದೆ. ಆದರೂ ಅದೊಂದು ವಿಚಾರಕ್ಕೆ ಯಶ್ ಅವರ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ..

ಯಶ್ ಅವರ ಹೊಸ ಸಿನಿಮಾ ಹೆಸರು ಟಾಕ್ಸಿಕ್, ಈ ಸಿನಿಮಾದ ಟೈಟಲ್ ಲಾಂಚ್ ಇಂದು ಆಗಿದ್ದು, ಯಶ್ ಅವರು ಖುದ್ದಾಗಿ ವಿಡಿಯೋ ಶೇರ್ ಮಾಡಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಪ್ರೊಡ್ಯುಸ್ ಮಾಡುತ್ತಿದೆ. ಇನ್ನು ಬಹುನಿರೀಕ್ಷಿತ ಸಿನಿಮಾವನ್ನು ಖ್ಯಾತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ.

ಈ ಸಿನಿಮಾಗೆ ಸಾಯಿಪಲ್ಲವಿ ಅವರು ನಾಯಕಿ ಎಂದು ಹೇಳಲಾಗುತ್ತಿದ್ದು, ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಿನಿಮಾದ ಈ ಫಸ್ಟ್ ಲುಕ್ ನೋಡಿದರೆ Fantasy Drama ರೀತಿಯಲ್ಲಿ ಇದ್ದು ಬಹಳ ಆಕರ್ಷಕವಾಗಿದೆ. ಆದರೆ ಈ ಫಸ್ಟ್ ಲುಕ್ ಬಿಡುಗಡೆ ಆದಮೇಲೆ ಕೂಡ ಅಭಿಮಾನಿಗಳಿಗೆ ಬೇಸರ ಆಗಿದೆ. ಅದು ಯಾಕೆ ಗೊತ್ತಾ?

ಈ ಬಾರಿ ಅಭಿಮಾನಿಗಳಿಗೆ ಬೇಸರ ಆಗುತ್ತಿರುವ ವಿಚಾರ ಏನು ಎಂದರೆ, ಸಿನಿಮಾ ರಿಲೀಸ್ ಡೇಟ್ ಅನ್ನು ಕೂಡ ಅನೌನ್ಸ್ ಮಾಡಲಾಗಿದ್ದು, 2025ರ ಏಪ್ರಿಲ್ 10ರಂದು ಬಿಡುಗಡೆ ಆಗಲಿದೆ. ಈಗಾಗಲೇ ಯಶ್ ಅವರ ಸಿನಿಮಾ ಬಿಡುಗಡೆಯಾಗಿ 18 ತಿಂಗಳು ಆಗಿದ್ದು, ಇನ್ನು ಒಂದೂವರೆ ವರ್ಷಗಳ ಕಾಲ ಸಿನಿಮಾಗಾಗಿ ಕಾಯಬೇಕು ಎನ್ನುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

Leave A Reply

Your email address will not be published.