Yash Radhika: ರಾಕಿ ಭಾಯ್ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ, ಫೋಟೋಸ್ ವೈರಲ್!

0 21

Yash Radhika: ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಕೆಜಿಎಫ್ ಸಿನಿಮಾದಿಂದ ಯಶ್ ಅವರ ಸಿನಿಕೆರಿಯರ್ ಸಂಪೂರ್ಣ ಬದಲಾಯಿತು ಎಂದರೆ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗಕ್ಕೆ ಸೀಮಿತರಾಗಿದ್ದ ಯಶ್, ಇಡೀ ಭಾರತ ಚಿತ್ರರಂಗವೇ ಕೊಂಡಾಡುವಂತೆ ಬೆಳೆದಿದ್ದಾರೆ, ಆದರೆ ಒಂದೇ ದಿನದಲ್ಲಿ ಕಲ್ಲು ಶಿಲೆಯಾಗುವುದಿಲ್ಲ ಎಂಬಂತೆ ಯಶ್ ಒಂದೇ ದಿನದಲ್ಲಿ ಸ್ಟಾರ್ ಆದವರಲ್ಲ.

ಯಶ್ ನಡೆದು ಬಂದ ಹಾದಿಯಲ್ಲಿ, ಅವಮಾನ ಕಷ್ಟ ಹಸಿವು ತಿರಸ್ಕಾರ ಎಲ್ಲವೂ ಇತ್ತು. ಕಷ್ಟದಿಂದ ಕೂಡಿದ ಪ್ರತಿಯೊಂದು ಹಂತವನ್ನು ದಾಟಿಯೇ ಯಶ್ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಹಲವಾರು ಅವಾರ್ಡ್ ಗಳು ಪುರಸ್ಕಾರಗಳನ್ನು ಪಡೆದಿದ್ದಾರೆ, ಹೆಚ್ಚಾಗಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಒಬ್ಬ ನಟನಿಗೆ.

ಈಗ ಯಶ್ ಅವರ ಮುಂದಿನ ಸಿನಿಮಾ ಟಾಕ್ಸಿಕ್ ಘೋಷಣೆ ಆಗಿದ್ದು 2025ರ ಏಪ್ರಿಲ್ ನಲ್ಲಿ ತೆರೆಕಾಣಲಿದೆ. ಸಿನಿಮಾ ವಿಷಯಕ್ಕೆ ಮಾತ್ರವಲ್ಲದೇ, ಪರ್ಸನಲ್ ವಿಚಾರದಿಂದ ಸುದ್ದಿಯಾಗುತ್ತಾರೆ. ಇದೀಗ ಯಶ್ ಹಾಗೂ ರಾಧಿಕಾ ಅವರ ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ಮಾಡಲಾಗಿದ್ದು, ಫೋಟೋಸ್ ಶೇರ್ ಮಾಡಿದ್ದಾರೆ ರಾಧಿಕಾ. ಇದೀಗ ರಾಕಿ ಭಾಯ್ ಮನೆಯ ಕ್ರಿಸ್ಮಸ್ ಸೆಲೆಬ್ರೇಷನ್ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave A Reply

Your email address will not be published.